India
  For Quick Alerts
  ALLOW NOTIFICATIONS  
  For Daily Alerts

  ಸುದೀಪ್ ವೃತ್ತಿ ಜೀವನದಲ್ಲಿ ಜುಲೈ 06 ಮರೆಯಲಾಗದ ದಿನ

  |

  ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ತುಂಬಿದೆ. ಯಾರಿಗಾದರೂ ಮಾದರಿ ಆಗಬಹುದಾದ ಸಿನಿಮಾ ಜರ್ನಿ ಅವರದ್ದು. ಆರಂಭದ ದಿನಗಳಲ್ಲಿ ಕಾಡಿದ ಅವಕಾಶ ಕೊರತೆ, ಅವಮಾನ ಮೆಟ್ಟಿನಿಂತು ಸುದೀಪ್ ಬೆಳೆದ ರೀತಿ ಮಾದರಿ.

  ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷವಾಗಿದೆಯಾದರೂ, ಸುದೀಪ್‌ ಜೀವನಕ್ಕೆ ತಿರುವು ಸಿಕ್ಕಿ 21 ವರ್ಷವಾಗಿದೆ ಎಂಬುದೇ ಸತ್ಯ.

  ಬಹುತೇಕ ನಟರಿಗೆ ತಮ್ಮ ಮೊದಲ ಸಿನಿಮಾಕ್ಕಿಂತಲೂ ತಮ್ಮ ವೃತ್ತಿ ಜೀವನಕ್ಕೆ ಬೂಸ್ಟ್ ನೀಡಿದ ಸಿನಿಮಾವೇ ಹೆಚ್ಚು ಮಹತ್ವದ್ದಾಗಿರುತ್ತದೆ. ಹಾಗೆಯೇ ಸುದೀಪ್ ವೃತ್ತಿ ಜೀವನದಲ್ಲಿಯೂ ಒಂದು ಸಿನಿಮಾ ಇದೆ, ಅದುವೇ 'ಹುಚ್ಚ'. ಸಿನಿಮಾ ರಂಗಕ್ಕೆ ಕಾಲಿಟ್ಟು ನಾಲ್ಕು ವರ್ಷವಾದ ಮೇಲೆ ಸಿಕ್ಕ 'ಹುಚ್ಚ' ಸಿನಿಮಾ, ಸುದೀಪ್‌ರ ಭವಿಷ್ಯ ಬದಲಾಯಿಸಿತು. ಆ 'ಹುಚ್ಚ' ಸಿನಿಮಾ ಬಿಡುಗಡೆ ಆಗಿ ಇಂದಿಗೆ 21 ವರ್ಷ. 'ಹುಚ್ಚ' ಮಾತ್ರವೇ ಅಲ್ಲ ಸುದೀಪ್ ವೃತ್ತಿ ಜೀವನದ ಮತ್ತೊಂದು ಪ್ರಮುಖ ಸಿನಿಮಾ ಬಿಡುಗಡೆ ಆಗಿರುವುದು ಸಹ ಇದೇ ದಿನ.

  21 ವರ್ಷಗಳ ಹಿಂದೆ ಬಿಡುಗಡೆ ಆಗಿತ್ತು 'ಹುಚ್ಚ'

  21 ವರ್ಷಗಳ ಹಿಂದೆ ಬಿಡುಗಡೆ ಆಗಿತ್ತು 'ಹುಚ್ಚ'

  'ಸ್ಪರ್ಷ' ಅಂಥಹಾ ಸುಂದರ ಸಿನಿಮಾ ನೀಡಿದ್ದರೂ ರಾಜ್‌ಕುಮಾರ್ ಅಪಹರಣ ಇನ್ನಿತರೆ ಕಾರಣಗಳಿಂದ ಆ ಸಿನಿಮಾ ಹೆಚ್ಚು ಗಮನ ಸೆಳೆಯದ ಕಾರಣ ಸುದೀಪ್‌ಗೆ ಅವಕಾಶಗಳ ಕೊರತೆ ಇತ್ತು. ಆ ಸಮಯದಲ್ಲಿ ಅದೃಷ್ಟವೋ ಎಂಬಂತೆ ದೊರಕಿದ್ದು 'ಹುಚ್ಚ' ಸಿನಿಮಾ. ಹಲವು ಕಷ್ಟಗಳ ನಡುವೆ ಸಿನಿಮಾದ ಚಿತ್ರೀಕರಣ ಮುಗಿದು 2021, ಜುಲೈ 06ರಂದು 'ಹುಚ್ಚ' ಸಿನಿಮಾ ಬಿಡುಗಡೆ ಆಯಿತು. ಆ ಮೇಲೆ ನಡೆದಿದ್ದೆಲ್ಲ ಇತಿಹಾಸ. 'ಹುಚ್ಚ' ಸಿನಿಮಾದ ಬಳಿಕ ಸುದೀಪ್ ಹಿಂತಿರುಗಿ ನೋಡಿದ್ದೇ ಇಲ್ಲ.

  'ಈಗ' ಬಿಡುಗಡೆ ಆಗಿ 10 ವರ್ಷ

  'ಈಗ' ಬಿಡುಗಡೆ ಆಗಿ 10 ವರ್ಷ

  ಸುದೀಪ್‌ ಅನ್ನು 'ಹೀರೋ' ಮಾಡಿದ ಸಿನಿಮಾ 'ಹುಚ್ಚ' ಆದರೆ ಸುದೀಪ್‌ರ ನಟನೆಯ ತಾಕತ್ತನ್ನು ದೇಶ-ವಿದೇಶಕ್ಕೆ ತಲುಪಿಸಿದ ಮತ್ತೊಂದು ಸಿನಿಮಾ ಸಹ ಇದೇ ದಿನ ಬಿಡುಗಡೆ ಆಗಿದೆ. ಅದುವೇ 'ಈಗ'. ರಾಜಮೌಳಿ ನಿರ್ದೇಶನದ ಈ ಸಿನಿಮಾ ಸೂಪರ್-ಡೂಪರ್ ಹಿಟ್ ಸಿನಿಮಾ ಜುಲೈ 06, 2012 ರಲ್ಲಿ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಸುದೀಪ್ ನಟನೆಗೆ ಸ್ವತಃ ಸುದೀಪ್ ಮಾತ್ರವೇ ಸಾಟಿ. ಸುದೀಪ್‌ಗೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳನ್ನು ತಂದುಕೊಟ್ಟ ಸಿನಿಮಾ ಇದು.

  ಧನ್ಯವಾದ ಸಲ್ಲಿಸಿರುವ ಸುದೀಪ್

  ಧನ್ಯವಾದ ಸಲ್ಲಿಸಿರುವ ಸುದೀಪ್

  ತಮ್ಮ ವೃತ್ತಿ ಜೀವನದಲ್ಲಿ ಮಹತ್ವದ ಮೈಲಿಗಲ್ಲುಗಳಾಗಿರುವ ಈ ಎರಡೂ ಸಿನಿಮಾದ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸುದೀಪ್, ''ನನ್ನ ವೃತ್ತಿ ಜೀವನದ ಬಹಳ ಸುಂದರ ದಿನ. 'ಹುಚ್ಚ' ಮತ್ತು 'ಈಗ' ಸಿನಿಮಾ ತಂಡಕ್ಕೆ ದೊಡ್ಡ ಧನ್ಯವಾದ. ಅತ್ಯದ್ಭುತವಾದ ನೆನಪುಗಳನ್ನು ನೀವು ನನಗೆ ಕೊಟ್ಟಿದ್ದೀರಿ. ಒಂದು ಸಿನಿಮಾ ನನ್ನನ್ನು ಕಟ್ಟಿದರೆ ಇನ್ನೊಂದು ಸಿನಿಮಾ ನನ್ನನ್ನು ಎತ್ತರಕ್ಕೆ ಕರೆದೊಯ್ಯಿತು'' ಎಂದಿದ್ದಾರೆ. 'ಹುಚ್ಚ' ಸಿನಿಮಾ ಬಿಡುಗಡೆ ಆಗಿ 21 ವರ್ಷ ವಾಗಿದ್ದರೆ, 'ಈಗ' ಬಿಡುಗಡೆ ಆಗಿ 10 ವರ್ಷವಾಗಿದೆ.

  ಎರಡು ಮಹತ್ವದ ಸಿನಿಮಾಗಳು

  ಎರಡು ಮಹತ್ವದ ಸಿನಿಮಾಗಳು

  'ಹುಚ್ಚ' ಸಿನಿಮಾವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದರು, ನಿರ್ಮಾಣ ಮಾಡಿದ್ದು ಎಂ ರೆಹಮಾನ್. ನಾಯಕಿ 'ಚಿತ್ರ' ರೇಖಾ ಸಂಗೀತ ರಾಜೇಶ್ ರಾಮನಾಥ್. ಉಸಿರೆ-ಉಸಿರೆ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಒಂದು ವರ್ಷ ಓಡಿದ ಈ ಸಿನಿಮಾ ಸುದೀಪ್ ಅನ್ನು ಸ್ಟಾರ್ ಅನ್ನಾಗಿಸಿತು. ಇನ್ನು 'ಈಗ' ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದರು, ಸಿನಿಮಾದಲ್ಲಿ ನಾನಿ, ಸಮಂತಾ ಸಹ ಇದ್ದರು. ಆದರೆ ಹೈಲೈಟ್ ಆಗಿದ್ದು ಸುದೀಪ್ ಮಾತ್ರ. ಅವರ ನಟನೆಗೆ ಭಾರತ ಚಿತ್ರರಂಗ ಮಾರುಹೋಗಿತ್ತು. 'ಈಗ' ಸಿನಿಮಾವನ್ನು ವಾರಾಹಿ ಸಿನಿಮಾಸ್ ನಿರ್ಮಾಣ ಮಾಡಿತ್ತು, ಸಂಗೀತ ನೀಡಿದ್ದು ಎಂಎಂ ಕೀರವಾಣಿ. ಇದೀಗ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾದ ಬಿಡುಗಡೆಗೆ ಕಾತರರಾಗಿ ಕಾಯುತ್ತಿದ್ದಾರೆ.

  English summary
  Two very important movies in Sudeep's movie journey Hucha and Eega both released on July 06. Hucha released 21 years back and Eega released 10 years back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X