ಜುಲೈ 6 ಕಿಚ್ಚನ ಜೀವನದಲ್ಲಿ ಅತ್ಯಮೂಲ್ಯವಾದ ದಿನ
Recommended Video

ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾದ ದಿನಗಳು, ಮರೆಯಲಾಗದ ವ್ಯಕ್ತಿಗಳು ಹೀಗೆ ಸಾಕಷ್ಟು ವಿಚಾರಗಳು ಇರುತ್ತೆ. ಅದೇ ರೀತಿ ನಟ ಕಿಚ್ಚ ಸುದೀಪ್ ಅವರ ಜೀವದಲ್ಲಿ ಜುಲೈ 6 ಎಂದಿಗೂ ಮರೆಯಲಾಗದಂತ ದಿನವಂತೆ ಈ ವಿಚಾರವನ್ನು ನಟ ಕಿಚ್ಚ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.
ಜುಲೈ 6 ಸುದೀಪ್ ಸಿನಿಮಾ ಜೀವನದಲ್ಲಿ ಎರಡು ರೀತಿಯ ತಿರುವನ್ನು ನೀಡಿದ್ದು ಇದೇ ಕಾರಣದಿಂದ ಸುದೀಪ್ ಇಂದು ಅಭಿನಯ ಚಕ್ರವರ್ತಿ ಹಾಗೂ ಕಿಚ್ಚ ಸುದೀಪ್ ಎಂದು ಪ್ರಖ್ಯಾತಿ ಹೊಂದಲು ಕಾರಣ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ಏನಿದು ಜುಲೈ 6 ಗುಟ್ಟು? ಕಿಚ್ಚನ ಜೀವನದಲ್ಲಿ ಈ ದಿನಾಂಕಕ್ಕೆ ಯಾಕೆ ಇಷ್ಟು ಮಹತ್ವ ಇದೆ? ಎನ್ನುವುದ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ. ಮುಂದೆ ಫೋಟೋ ಸ್ಲೈಡ್ ಗಳ ಮೂಲಕ ಓದಿ.

ಜುಲೈ6 ರಿಂದ ಕಿಚ್ಚನ ಜೀವನಕ್ಕೆ ಹೊಸ ತಿರುವು
ಸುದೀಪ್ ಅವರ ಜೀವನದಲ್ಲಿ ಜುಲೈ 6 ತುಂಬಾ ಮಹತ್ವವಾದ ದಿನವಾಗಿದೆ. ಕಿಚ್ಚ ನಾಯಕನಾಗಿ ಅಭಿನಯ ಮಾಡಿದ 'ಹುಚ್ಚ' ಸಿನಿಮಾ ಜುಲೈ 6- 2001 ರಲ್ಲಿ ಬಿಡುಗಡೆ ಆಗಿತ್ತು. ಅಂದಿನಿಂದ ಸುದೀಪ್ ಕನ್ನಡ ಸಿನಿಮಾರಂಗದಲ್ಲಿ ಭರವಸೆ ನಾಯಕನಾಗಿ ಪರಿಚಿತರಾದರು.

ಈಗ ಸಿನಿಮಾ ಬಿಡುಗಡೆ
ಅದೇ ರೀತಿ ಟಾಲಿವುಡ್ ನಲ್ಲಿ ಸುದೀಪ್ ಪ್ರಖ್ಯಾತಿ ಗಳಿಸಲು ಕಾರಣವಾದ 'ಈಗ' ಸಿನಿಮಾ ಕೂಡ 2012 ಜುಲೈ 6 ರಂದೇ ತೆರೆಕಂಡಿದ್ದು. ಈ ಚಿತ್ರದ ಮೂಲಕ ಸುದೀಪ್ ಟಾಲಿವುಡ್ ನಲ್ಲಿಯ ಸ್ಟಾರ್ ನಟರಾಗಿ ಗುರುತಿಸಿಕೊಂಡರು.
ವೃತ್ತಿ ಬದುಕಿಗೆ ತಿರುವು ಕೊಟ್ಟ ದಿನ
ಜುಲೈ 6 ಸುದೀಪ್ ವೃತ್ತಿ ಬದುಕಿಗೆ ದೊಡ್ಡ ತಿರುವನ್ನು ನೀಡಿದ ದಿನವಾಗಿದೆ. ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಎರಡು ಚಿತ್ರರಂಗದಲ್ಲಿ ಸುದೀಪ್ ಅದ್ಬುತ ಪ್ರತಿಭೆ ಎನ್ನುವುದು ತಿಳಿದ ದಿನ ಜುಲೈ 6.

ಅಭಿಮಾನಿಗಳ ಬೆಂಬಲ ನೆನೆದ ಕಿಚ್ಚ
ಈ ಎರಡು ಚಿತ್ರಗಳಿಂದ ಸುದೀಪ್ ವೃತ್ತಿ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದು ಸುದೀಪ್ ಭಾರತೀಯ ಚಿತ್ರರಂಗದಲ್ಲಿ ಹೆಸರು ಗಳಿಸಲು ಅವಕಾಶ ಮಾಡಿಕೊಟ್ಟಿರುವುದಾಗಿ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ಇಂತಹ ಖುಷಿ ಸಮಯದಲ್ಲಿ ಅಭಿಮಾನಿಗಳ ಬೆಂಬಲ ಹಾಗೂ ಪ್ರೀತಿಯನ್ನು ಸ್ಮರಿಸುವುದು ಸುದೀಪ್ ಮರೆತಿಲ್ಲ.


Click it and Unblock the Notifications











