twitter
    For Quick Alerts
    ALLOW NOTIFICATIONS  
    For Daily Alerts

    ಜುಲೈ 6, ಕಿಚ್ಚ ಸುದೀಪ್ ಲೈಫ್ ಬದಲಿಸಿದ ಅದೃಷ್ಟದ ದಿನ

    |

    Recommended Video

    ಜುಲೈ 6, ಕಿಚ್ಚ ಸುದೀಪ್ ಲೈಫ್ ಬದಲಿಸಿದ ದಿನ | FILMIBEAT KANNADA

    1997ರಲ್ಲಿ 'ತಾಯವ್ವ' ಚಿತ್ರದ ಮೂಲಕ ಸುದೀಪ್ ಬಣ್ಣದ ಜಗತ್ತಿಗೆ ಬಂದ್ರು ನಂತರ ರಮೇಶ್ ಅರವಿಂದ್ ನಟನೆ 'ಪ್ರತ್ಯಾರ್ಥ' ಚಿತ್ರದಲ್ಲಿ ಪೋಟಕ ನಟನಾಗಿ ಕಾಣಿಸಿಕೊಂಡರು. ಇದಾದ ಬಳಿಕವೇ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದು.

    ಕಿಚ್ಚ ಸುದೀಪ್ ಅಧಿಕೃತವಾಗಿ ಸ್ಪರ್ಶ ಸಿನಿಮಾದಲ್ಲಿ ನಾಯಕನಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು. ಲವರ್ ಬಾಯ್ ಇಮೇಜ್ ಮೂಲಕ ಮೊದಲ ಸಿನಿಮಾದಲ್ಲಿ ಗಮನ ಸೆಳೆದ ಸುದೀಪ್ ಗೆ ಈ ಸಿನಿಮಾ ನೇಮೂ ಫೇಮೂ ತಂದುಕೊಡ್ತಾದರೂ, ದೊಡ್ಡ ಅವಕಾಶ ಅಥವಾ ಸ್ಟಾರ್ ಮಾಡಲಿಲ್ಲ.

    ಸದ್ಯಕ್ಕಿಲ್ಲ ಸುದೀಪ ಮತ್ತು ಸೂರಿ ಕಾಂಬಿನೇಷನ್ ಸಿನಿಮಾ ಸದ್ಯಕ್ಕಿಲ್ಲ ಸುದೀಪ ಮತ್ತು ಸೂರಿ ಕಾಂಬಿನೇಷನ್ ಸಿನಿಮಾ

    ಆದ್ರೆ, ಜುಲೈ 6, 2001 ರಂದು ಬಿಡುಗಡೆಯಾದ ಈ ಸಿನಿಮಾ ಮೂಲಕ ಸುದೀಪ್ ಲೈಫ್ ಬದಲಾಯಿತು. ಈ ದಿನದಿಂದ ಇಂಡಸ್ಟ್ರಿಯಲ್ಲಿ ಹೊಸ ಹೆಜ್ಜೆ ಇಟ್ಟರು. ಇಲ್ಲಿಂದ ಸುದೀಪ್ ಮತ್ತೆ ತಿರುಗಿ ನೋಡಲೇ ಇಲ್ಲ. ಅಷ್ಟಕ್ಕೂ ಆ ಚಿತ್ರ ಯಾವುದು? ಮುಂದೆ ಓದಿ....

    ಸುದೀಪ್ ಬ್ರೇಕ್ ಕೊಟ್ಟ ಚಿತ್ರ

    ಸುದೀಪ್ ಬ್ರೇಕ್ ಕೊಟ್ಟ ಚಿತ್ರ

    ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ ಹುಚ್ಚ ತೆರೆಕಂಡ ದಿನ. ಜುಲೈ 6, 2001 ರಲ್ಲಿ ಹುಚ್ಚ ಚಿತ್ರ ಬಿಡುಗಡೆಯಾಗಿತ್ತು. 2019, ಜುಲೈ 6ಕ್ಕೆ ಹುಚ್ಚ ಸಿನಿಮಾ ಬಂದು 18 ವರ್ಷ ತುಂಬಿದೆ. ಹುಚ್ಚ ಸಿನಿಮಾದಲ್ಲಿ ಸುದೀಪ್ ಮಾಡಿದ ಕಿಚ್ಚ ಪಾತ್ರ ಇಂದಿಗೂ ಯಾರೂ ಮರೆಯಲ್ಲ. ಬಹುಶಃ ಇಲ್ಲಿಂದಲೇ ಬರಿ ಸುದೀಪ್ ಆಗಿದ್ದವ್ರು ಕಿಚ್ಚ ಸುದೀಪ್ ಆದರು ಅನ್ಸುತ್ತೆ.

    ಸುದೀಪ್ ಹೇಳಿದ್ದ ಮಾತು ಧನಂಜಯ್ ಜೀವನದಲ್ಲಿ ನಿಜ ಆಯ್ತು ಸುದೀಪ್ ಹೇಳಿದ್ದ ಮಾತು ಧನಂಜಯ್ ಜೀವನದಲ್ಲಿ ನಿಜ ಆಯ್ತು

    ತಮಿಳು ರೀಮೇಕ್ ಸಿನಿಮಾ

    ತಮಿಳು ರೀಮೇಕ್ ಸಿನಿಮಾ

    ಓಂ ಪ್ರಕಾಶ್ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಅಂದಿನ ಸಮಯದಲ್ಲಿ ಓಂ ಪ್ರಕಾಶ್ ರಾವ್ ಸ್ಟಾರ್ ಡೈರೆಕ್ಟರ್. ಲಾಕಪ್ ಡೆತ್, ಸಿಂಹದ ಮರಿ, ಎಕೆ 47 ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದರು. ತಮಿಳಿನಲ್ಲಿ ತೆರೆಕಂಡು ಹಿಟ್ ಆಗಿದ್ದ 'ಸೇತು' ಚಿತ್ರವನ್ನ ಕನ್ನಡದಲ್ಲಿ ಹುಚ್ಚ ಎಂಬ ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಸುದೀಪ್ ಮ್ಯಾನರಿಸಂಗೆ ತಕ್ಕ ಸಿನಿಮಾ ಮಾಡಿ ಸಕ್ಸಸ್ ತಂದರು.

    'ಎ' ನೋಡಿ ಥ್ರಿಲ್ ಆಗಿದ್ದರಂತೆ ಸುದೀಪ್: ಆ ದಿನಗಳು ನೆನೆದ ಉಪೇಂದ್ರ'ಎ' ನೋಡಿ ಥ್ರಿಲ್ ಆಗಿದ್ದರಂತೆ ಸುದೀಪ್: ಆ ದಿನಗಳು ನೆನೆದ ಉಪೇಂದ್ರ

    ಹಾಡುಗಳು ಇಂದಿಗೂ ಎವರ್ ಗ್ರೀನ್

    ಹಾಡುಗಳು ಇಂದಿಗೂ ಎವರ್ ಗ್ರೀನ್

    ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಮಾಡಿದ್ದ ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಈಗಲೂ ಹುಚ್ಚ ಸಿನಿಮಾದ ಹಾಡುಗಳನ್ನ ಗುನುಗುವ ಅಭಿಮಾನಿಗಳಿದ್ದಾರೆ. ಉಸಿರೇ ಉಸಿರೇ....ಹುಡುಗಿರೋ ಹುಡುಗಿರೋ....ಹಾಡುಗಳಂತೂ ಆಲ್ ಟೈಂ ಹಿಟ್ ಗೀತೆಗಳಾಗಿವೆ.

    ಉಪ್ಪಿಗೆ ಆಸೆ ಹೇಳಿಕೊಂಡ ಸುದೀಪ್: ಕಿಚ್ಚನ ಆಸೆ ಈಡೇರಿಸುತ್ತಾರಾ ಬುದ್ಧಿವಂತ.?ಉಪ್ಪಿಗೆ ಆಸೆ ಹೇಳಿಕೊಂಡ ಸುದೀಪ್: ಕಿಚ್ಚನ ಆಸೆ ಈಡೇರಿಸುತ್ತಾರಾ ಬುದ್ಧಿವಂತ.?

    ಅತ್ಯುತ್ತಮ ನಟ ಪ್ರಶಸ್ತಿ

    ಅತ್ಯುತ್ತಮ ನಟ ಪ್ರಶಸ್ತಿ

    ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಹುಚ್ಚ ಚಿತ್ರದ ನಟನೆಗಾಗಿ ಸುದೀಪ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇದಷ್ಟೇ ಅಲ್ಲದೇ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗಗಳಲ್ಲಿ ಈ ಸಿನಿಮಾ ನಾಮಿನೇಟ್ ಆಗಿತ್ತು.

    ರೇಖಾಗೂ ಬ್ರೇಕ್ ಕೊಟ್ಟ ಚಿತ್ರ

    ರೇಖಾಗೂ ಬ್ರೇಕ್ ಕೊಟ್ಟ ಚಿತ್ರ

    ಹುಚ್ಚ ಸಿನಿಮಾದ ನಾಯಕಿ ರೇಖಾಗೂ ಇದು ಬ್ರೇಕ್ ಕೊಡ್ತು. ಹುಚ್ಚ ಸಿನಿಮಾ ಮಾಡುವುದಕ್ಕೆ ಮುಂಚೆ ಚಿತ್ರ ಎಂಬ ಕನ್ನಡ ಸಿನಿಮಾ ಹಾಗೂ ಆನಂದಂ ಎಂಬ ತೆಲುಗು ಸಿನಿಮಾ ಮಾಡಿದ್ದರು ರೇಖಾ. ಆದರೆ, ಹುಚ್ಚ ಸಕ್ಸಸ್ ಬಳಿಕ ಕನ್ನಡ, ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚು ಅವಕಾಶ ಗಳಿಸಿಕೊಂಡರು.

    ಈಗ ಬಂದಿದ್ದು ಅದೇ ದಿನ

    ಈಗ ಬಂದಿದ್ದು ಅದೇ ದಿನ

    ಜುಲೈ 6 ರಂದು ಸುದೀಪ್ ಪಾಲಿಗೆ ಇನ್ನೊಂದು ವಿಶೇಷ. ಟಾಲಿವುಡ್ ನಲ್ಲಿ ಸುದೀಪ್ ಪ್ರಖ್ಯಾತಿ ಗಳಿಸಲು ಕಾರಣವಾದ 'ಈಗ' ಸಿನಿಮಾ ಕೂಡ 2012 ಜುಲೈ 6 ರಂದೇ ತೆರೆಕಂಡಿತ್ತು. ಈ ಚಿತ್ರದ ಮೂಲಕ ಸುದೀಪ್ ಟಾಲಿವುಡ್ ನಲ್ಲಿಯ ಸ್ಟಾರ್ ನಟರಾಗಿ ಗುರುತಿಸಿಕೊಂಡರು.

    English summary
    July 6 is a very important day for Kannada actor Sudeep. Sudeep's two films were released on July 6th. this two films also create new records in industry.
    Saturday, July 6, 2019, 11:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X