For Quick Alerts
  ALLOW NOTIFICATIONS  
  For Daily Alerts

  ಬಿಎಸ್ಆರ್ ಕಾಂಗ್ರೆಸ್ ಅಪ್ಪಿಕೊಂಡ ಹಳ್ಳಿಹೈದ ರಾಜೇಶ್

  By Rajendra
  |

  ಇತ್ತೀಚೆಗಷ್ಟೇ ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದ ಹಳ್ಳಿಹೈದ ರಾಜೇಶ್ ಈಗ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಲ್.ಸೋಮಣ್ಣ ಅವರ ಪರ ರಾಜೇಶ್ ಪ್ರಚಾರ ಮಾಡಲಿದ್ದಾರೆ.

  ಬಡವರ, ಶ್ರಮಿಕರ ಹಾಗೂ ರೈತರ ಪಕ್ಷದ ಸಂಸ್ಥಾಪಕ ಶ್ರೀರಾಮುಲು ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ತಾವು ಆಶಿಸಿರುವುದಾಗಿ ರಾಜೇಶ್ ಈ ಸಂದರ್ಭದಲ್ಲಿ ಹೇಳಿದ್ದಾರೆ. 'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋ ಮೂಲಕ ರಾಜೇಶ್ ಗುರುತಿಸಿಕೊಂಡಿದ್ದ.

  ಬಳಿಕ ಜಂಗಲ್ ಜಾಕಿ ಹಾಗೂ ಲವ್ ಈಸ್ ಪಾಯಿಸನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದ. ಇದಾಗ ಬಳಿಕ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವಿಶೇಷ ಆತಿಥ್ಯ ನೀಡಲಾಗಿತ್ತು. ಅಲ್ಲಿ ರಾಜೇಶ್ ಅವರಿಗೆ ರಾಜ ಮರ್ಯಾದೆ ನೀಡಲಾಗಿದ್ದು. ಬಿಗ್ ಬಾಸ್ ಮನೆಯಲ್ಲಿ ಒಂದೇ ಒಂದು ದಿನ ಉಳಿದುಕೊಂಡು ಏಕ್ ದಿನ್ ಕಾ ಸುಲ್ತಾನ್ ಎನ್ನಿಸಿಕೊಂಡಿದ್ದ.

  ಈಗ ರಾಜಕೀಯಕ್ಕೆ ಅಡಿಯಿಟ್ಟಿದ್ದಾರೆ ರಾಜೇಶ್. ಕೆಲದಿನಗಳ ಹಿಂದೆ ಮಾನಸಿಕ ಅಸ್ವಸ್ಥನಾಗಿದ್ದ ರಾಜೇಶ್ ಅವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದ್ಯಾಕೋ ಏನೋ ಬಿಎಸ್ಆರ್ ಕಾಂಗ್ರೆಸ್ ಕಡೆಗೆ ಸಿನಿಮಾ ತಾರೆಗಳ ಒಲವು ಜಾಸ್ತಿಯಾಗುತ್ತಿದೆ.

  ಆದರೆ ರಕ್ಷಿತಾ ಮಾತ್ರ ಬಿಎಸ್ಆರ್ ಕಾಂಗ್ರೆಸ್ ತೊರೆದು ಈಗ ಜೆಡಿಎಸ್ ಸೇರಿದ್ದಾರೆ. ಪೂಜಾಗಾಂಧಿ ಮಾತ್ರ ರಾಯಚೂರಿನ ಬಿಸಿಲನ್ನೂ ಲೆಕ್ಕಿಸದೆ ಬೆವರು ಹರಿಸಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಇನ್ನು ಮದನ್ ಪಟೇಲ್ ಹಾಗೂ ಮಯೂರ್ ಪಟೇಲ್ ಅವರು ಬಿಎಸ್ಆರ್ ಕಾಂಗ್ರೆಸ್ ನಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)

  English summary
  Jungle Jackie fame Kannada actor Rajesh enters politics. He joins BSR Congress party and supporting HD Kote candidate L Somanna. Recently the Halli Haida (Rural Boy) makes guest appearance in Bigg Boss Kannada. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X