twitter
    For Quick Alerts
    ALLOW NOTIFICATIONS  
    For Daily Alerts

    'ಹಳ್ಳಿ ಹೈದ' ರಾಜೇಶ್ ವಿಧಿ ವಿಲಾಸಕ್ಕೆ ಬಲಿಯಾದನೇ?

    By ಉದಯರವಿ
    |

    'ಜಂಗಲ್ ಜಾಕಿ' ಎಂದೇ ಖ್ಯಾತನಾಗಿದ್ದ ಹಳ್ಳಿ ಹೈದ ರಾಜೇಶ್ ದುರಂತ ಸಾವನ್ನು ಅವರ ತಂದೆ ತಾಯಿ ಸೇರಿದಂತೆ ಕನ್ನಡ ಚಿತ್ರೋದ್ಯಮ, ಬಂಧು ಬಳಗ ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಮೈಸೂರಿನ ಶ್ರೀರಾಮಪುರದ ಬಳಿ ಪರಸಯ್ಯನಹುಂಡಿಯಲ್ಲಿರುವ ತಮ್ಮ ನಿವಾಸದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ರಾಜೇಶ್ ದುರಂತ ಸಾವಿಪ್ಪಿದ್ದ.

    ಈ ಹಿಂದೊಮ್ಮೆ ರಾಜೇಶ್ ಮಾನಸಿಕ ಅಸ್ವಸ್ಥನಾಗಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ. 'ಜಂಗಲ್ ಜಾಕಿ' ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಎಂದು ಆತ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿ ಹುಚ್ಚನಂತಾಗಿದ್ದ. ಬಳಿಕ ಜಂಗಲ್ ಜಾಕಿ ಚಿತ್ರವೂ ಬಿಡುಗಡೆಯಾಯಿತು, ಮಠನೂ ಸೇರಿತು.

    ಬಳಿಕ ಒಪ್ಪಿಕೊಂಡ ಚಿತ್ರವೇ ಲವ್ ಈಸ್ ಪಾಯಿಸನ್. ಈ ಚಿತ್ರವೂ ಕುಂಟುತ್ತಾ ಎಡವುತ್ತಾ ಶೂಟಿಂಗ್ ಸಾಗಿತ್ತು. ಈ ಚಿತ್ರಕ್ಕೆ ಪೂನಂ ಪಾಂಡೆಯನ್ನು ಐಟಂ ಡಾನ್ಸ್ ಗೆ ಕರೆಸಲಾಗಿತ್ತು. ಅಲ್ಲಿಂದ ಲವ್ ಈಸ್ ಪಾಯಿಸನ್ ಚಿತ್ರಕ್ಕೆ ಒಂಚೂರು ತಾಕತ್ ಬಂದಿತ್ತು. ಇದೆಲ್ಲಾ ಹಳೆ ಕಥೆ.

    ರಾಜೇಶ್ ಸಾವಪ್ಪುವುದಕ್ಕೂ ಮೂರು ತಿಂಗಳ ಮುನ್ನ ತನ್ನ ಕಷ್ಟವನ್ನು ಮೈಸೂರಿನ ಸ್ಥಳೀಯ ವಾಹಿನಿಯಲ್ಲಿ (ಮೈ ನ್ಯೂಸ್) ಹೇಳಿಕೊಂಡಿದ್ದರು. ವಾಹಿನಿಯ ಜೊತೆ ಮಾತನಾಡುತ್ತಾ ಅವರ ತಾಯಿಯೂ ತನ್ನ ಮಗನ ಸಂಕಷ್ಟ ತೋಡಿಕೊಂಡಿದ್ದರು. ಸ್ಲೈಡ್ ಗಳಲ್ಲಿ ರಾಜೇಶ್ ಕರುಳಿನ ಕೂಗು.

    ರಾಜೇಶ್ ತಾಯಿ ಹೇಳಿದ್ದೇನೆಂದರೆ...

    ರಾಜೇಶ್ ತಾಯಿ ಹೇಳಿದ್ದೇನೆಂದರೆ...

    ಜೀವನಕ್ಕೆ ಮುಂದೇನು ನಮಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಶೂಟಿಂಗ್ ಮಾಡಿರುವ ಚಿತ್ರಗಳ ದುಡ್ದು ಬರುತ್ತಿಲ್ಲ. ಹತ್ತು ಐದು ಸಾವಿರ ಎಂದು ದುಡ್ಡು ಕೊಟ್ರು. ಅವರು ಆ ರೀತಿ ದುಡ್ದು ಕೊಟ್ರೆ ಮನೆ ಬಾಡಿಗೇನೇ ಅಷ್ಟಾಗುತ್ತದೆ. ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಮನೆ ಬಾಡಿಗೆ ಕಟ್ಟಬೇಕು. ಇನ್ನೇನು ನಮಗೆ ಉಳಿಯುತ್ತದೆ.

    ಒಂದು ರೂಪಾಯಿ ಅಕ್ಕಿ ಕೊಡೋಗಂಟ ನಮ್ಮ ಜೀವನ

    ಒಂದು ರೂಪಾಯಿ ಅಕ್ಕಿ ಕೊಡೋಗಂಟ ನಮ್ಮ ಜೀವನ

    ಒಂದು ರೂಪಾಯಿ ಅಕ್ಕಿ ಕೊಡೋಗಂಟ ನಮ್ಮ ಜೀವನ. ರೇಷನ್ ಕಾರ್ಡ್ ನಲ್ಲಿ ಒಂದು ರೂಪಾಯಿಗೆ ಒಂದು ಕೇಜಿ ಅಕ್ಕಿ ಸಿಗುತ್ತದೆ. ಅದನ್ನು ತಗೊಂಡು ಬರ್ತೀವಿ ತಿಂತೀವಿ. ಅಯ್ಯೋ ಬಿಡಿ ಸಾರ್ ಪ್ರೊಡೂಸರ್ ಗೆ ಫೋನ್ ಮಾಡಿದರೆ ಬಿಜಿ ಬರ್ತದೆ. ಜೀವನ ಮಾಡುವುದೇ ಕಷ್ಟವಾಗಿದೆ.

    ಕೂಲಿಗೆ ಹೋಗಬೇಕೆಂದರೆ ಜನ ನಮ್ಮನ್ನೇ ಉಗಿತಾರೆ

    ಕೂಲಿಗೆ ಹೋಗಬೇಕೆಂದರೆ ಜನ ನಮ್ಮನ್ನೇ ಉಗಿತಾರೆ

    ನಮಗೂ ಕೂಲಿ ಇಲ್ಲ. ಈಗ ಕೂಲಿಗೆ ಹೋಗಬೇಕೆಂದರೆ ಜನ ನಮ್ಮನ್ನೇ ಉಗಿತಾರೆ. ಹೀರೋ ತಾಯಿ ತಂದೆ ಕೂಲಿ ಕೆಲಸ ಮಾಡ್ತಾರಲ್ಲಾ ಏನು ದರಿದ್ರ ಬಂದುಬಿಟ್ಟಿದೆ ಅಂದ್ಕೋತಾರೆ. ಅದಕ್ಕೆ ನಾವು ಎಲ್ಲಿಗೂ ಹೋಗಲ್ಲ. ನಿರ್ಮಾಪಕರು ಏನಾದರೂ ದುಡ್ಡು ಕೊಟ್ರೆ ಮನೆ ಗಿನೆ ಏನಾದರೂ ಮಾಡಿಕೊಳ್ಳೋಣ ಅಂತಿದ್ದೀವಿ. ಓದು ಬರಹ ಇಲ್ಲ ಬಡಹುಡುಗ ಅವನು. ಅವನಿಗೆ ಹಿಂಗೆಲ್ಲಾ ಮೋಸ ಮಾಡುವುದಾ.

    ರಾಜೇಶ್ ಹೇಳಿರುವುದೇನೆಂದರೆ...

    ರಾಜೇಶ್ ಹೇಳಿರುವುದೇನೆಂದರೆ...

    ಮೊದಲು ಹತ್ತು ಲಕ್ಷಕ್ಕೆ ಒಪ್ಪಿಗೆಯಾಗಿತ್ತು. ಆಮೇಲೆ ಕೂತು ಮಾತನಾಡಿ ಎರಡು ಲಕ್ಷ ಕೊಟ್ರು. ಆಮೇಲೆ ಐವತ್ತೈವತ್ತು ಸಾವಿರ ಕೊಟ್ರು. ಆಮೇಲೆ ಒಂದು ಲಕ್ಷ ಕೊಟ್ರು. ಹಂಗೆ ಫಿಲಂ ಮುಗಿಯೋವರೆಗೂ ಐದು ಲಕ್ಷ ಕೊಟ್ಟು ಪೂರ್ತಿ ಮಾಡಿದರು. ಬಾಕಿ ಐದು ಲಕ್ಷ ಕೊಡ್ತೀವಿ ಪ್ರಚಾರಕ್ಕೆ ಬನ್ನಿ ಅಂದ್ರು. ಕೊಡಲ್ಲ ಎಂದು ಹಠ ಮಾಡ್ದೆ. ಆಮೇಲೆ ಹಂಗೆ ಹಿಂಗೆ ಮಾಡಿ ಚೆಕ್ ಕೊಡ್ತೀವಿ ಅಂದ್ರು.

    ಚೆಕ್ ಕೊಡ್ತೀನಿ ಅಂದ್ರು ಬೇಡ ಅಂದೆ

    ಚೆಕ್ ಕೊಡ್ತೀನಿ ಅಂದ್ರು ಬೇಡ ಅಂದೆ

    ನಾನು ಒಪ್ಪಲಿಲ್ಲ. ನನಗೆ ಚೆಕ್ ಬೇಡ ದುಡ್ಡೇ ಬೇಕು ಎಂದು ಕೇಳಿದೆ. ಸದ್ಯಕ್ಕೆ ಚೆಕ್ ಇಸ್ಕೋ. ಫಿಲಂ ಓಡಿದ ಮೇಲೆ ದುಡ್ಡಿ ಕೊಡ್ತೀನಿ ಎಂದು ಹೇಳಿದರು. ನಟಿ ಐಶ್ವರ್ಯಗೂ ಹಂಗೆ ಮಾಡಿದರು. ಅವಳಿಗೂ ದುಡ್ಡು ಬ್ಯಾಂಕ್ ಗೆ ಹಾಕ್ತಿನಿ ಎಂದ್ರು ಕಡೆಗೆ ಕೊಡಲೇ ಇಲ್ಲ. ಚಿತ್ರಕ್ಕೆ ಕಡಿಮೆ ಬಜೆಟ್ ಹಾಕಿದ್ರು. ಲಾಭನೂ ಬಂತು. ಆದರೂ ದುಡ್ಡು ಕೊಡಲಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಬರ್ತದೆ ಎಂದು ತನ್ನ ಸಂಕಟವನ್ನು ರಾಜೇಶ್ ಹೇಳಿಕೊಂಡಿದ್ದ.

    English summary
    Kannada actor 'Jungle Jackie' fame Rajesh fell to death at his residence in Mysore, on Sunday, (Nov 3). Who is responsible for his death or Is Rajesh accidentally fell from third floor of his house or it is the irony of fate. 
    Tuesday, November 5, 2013, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X