For Quick Alerts
  ALLOW NOTIFICATIONS  
  For Daily Alerts

  'ಜೂನಿಯರ್ ಚಿರು ನನ್ನ ಶಿಷ್ಯ' ಎಂದ ಧ್ರುವ ಸರ್ಜಾ

  |

  ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಯ ಮುದ್ದು ಮಗನಿಗೆ 10 ತಿಂಗಳು ತುಂಬಿದೆ. ಅಕ್ಟೋಬರ್ 22ಕ್ಕೆ ಜೂನಿಯರ್ ಚಿರುಗೆ ಒಂದು ವರ್ಷ ತುಂಬಲಿದೆ. ಚಿರು ಸರ್ಜಾ ಇಲ್ಲದ ಮೇಘನಾ ಬಾಳಲ್ಲಿ ಈ ಮಗುವೇ ನಗು, ಸಂತಸ, ಗುರಿ, ಭವಿಷ್ಯ ಎಲ್ಲವೂ ಆಗಿದೆ. ಮೇಘನಾಗೆ ಮಾತ್ರವಲ್ಲ ಚಿರು ಕುಟುಂಬಕ್ಕೂ, ಧ್ರುವ ಸರ್ಜಾಗೂ ಜೂನಿಯರ್ ಚಿರು ಜೀವವೇ ಆಗಿದೆ.

  ಜೂನಿಯರ್ ಚಿರು ಬಗ್ಗೆ ಧ್ರುವ ಸರ್ಜಾ ಸಾರ್ವಜನಿಕವಾಗಿ ಮಾತನಾಡಿರುವುದು ಬಹಳ ಕಡಿಮೆ. ಆದ್ರೀಗ, ಧ್ರುವ ಸರ್ಜಾ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಧ್ರುವ ಸರ್ಜಾ ತನ್ನ ಸಹೋದರನ ಮಗನ ಬಗ್ಗೆ ಮಾತನಾಡಿದ್ದಾರೆ.

  ಜೂ. ಚಿರು ಜನಿಸಿ 9 ತಿಂಗಳ ಬಳಿಕ ಸಂತಸದ ಸುದ್ದಿ ಹಂಚಿಕೊಂಡ ನಟಿ ಮೇಘನಾ ರಾಜ್ಜೂ. ಚಿರು ಜನಿಸಿ 9 ತಿಂಗಳ ಬಳಿಕ ಸಂತಸದ ಸುದ್ದಿ ಹಂಚಿಕೊಂಡ ನಟಿ ಮೇಘನಾ ರಾಜ್

  ತಮಿಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಧ್ರುವ ಸರ್ಜಾಗೆ ನಿರೂಪಕಿ ಜೂನಿಯರ್ ಚಿರು ಹೇಗಿದ್ದಾನೆ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಧ್ರುವ, ''ಜೂನಿಯರ್ ನನ್ನ ಡಾರ್ಲಿಂಗ್, ನನ್ನ ಶಿಷ್ಯ. ನಾನು ಅವನನ್ನು ನೋಡಿ ಒಂದು ತಿಂಗಳು ಆಯ್ತು. ಮೇಘನಾ ಕೆಲವು ಫೋಟೋಗಳನ್ನು ಕಳುಹಿಸಿದ್ರು, ಅದರಲ್ಲಿ ಅವನನ್ನು ನೋಡ್ತಿರ್ತೇನೆ'' ಎಂದರು.

  ದುರಾದೃಷ್ಟವಶಾತ್ ಚಿರು ಸರ್ಜಾ 2020ರ ಜೂನ್ 7 ರಂದು ಹೃದಯಾಘಾತ ಸಂಭವಿಸಿ ಮೃತಪಟ್ಟರು. ಚಿರು ನಿಧನವಾದ ಸಮಯದಲ್ಲಿ ಮೇಘನಾ ರಾಜ್ ನಾಲ್ಕು ತಿಂಗಳು ಗರ್ಭಿಣಿಯಾಗಿದ್ದರು. ನಂತರ ಅಕ್ಟೋಬರ್ 22 ರಂದು ಚೊಚ್ಚಲ ಮಗುವಿಗೆ ಜನ್ಮ ಕೊಟ್ಟರು. ಜೂನಿಯರ್ ಚಿರುಗೆ ಈಗ 10 ತಿಂಗಳು ತುಂಬಿದೆ. ಇನ್ನು ಅಧಿಕೃತವಾಗಿ ಹೆಸರು ಘೋಷಣೆಯಾಗಿಲ್ಲ. ಆದರೆ, ಚಿರು ಸರ್ಜಾ ಮಗನ ಫೋಟೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇದೆ.

  ಜೂ.ಚಿರುಗೆ ಫೈಟಿಂಗ್ ಹೇಳಿಕೊಡುತ್ತಿರುವ ಅರ್ಜುನ್ ಸರ್ಜಾ; ಫೋಟೋ ಶೇರ್ ಮಾಡಿದ ಮೇಘನಾಜೂ.ಚಿರುಗೆ ಫೈಟಿಂಗ್ ಹೇಳಿಕೊಡುತ್ತಿರುವ ಅರ್ಜುನ್ ಸರ್ಜಾ; ಫೋಟೋ ಶೇರ್ ಮಾಡಿದ ಮೇಘನಾ

  ಮೇಘನಾ ರಾಜ್ ತಮ್ಮ ಮಗನ ಫೋಟೋಗಳನ್ನು ಸದಾ ಹಂಚಿಕೊಳ್ಳುತ್ತಲೇ ಇರ್ತಾರೆ. ಇತ್ತೀಚಿಗಷ್ಟೆ ಕೃಷ್ಣ ಜನ್ಮಾಷ್ಟಮಿ ದಿನದಂದು ಸಹ ಜೂನಿಯರ್ ಚಿರುಗೆ ಕೃಷ್ಣನ ವೇಷ ಹಾಕಲಾಗಿತ್ತು. ಆ ಫೋಟೋಗಳ ಸಹ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಸದ್ಯದ ಮಾಹಿತಿ ಪ್ರಕಾರ ಸೆಪ್ಟೆಂಬರ್ 3 ರಂದು ಜೂನಿಯರ್ ಚಿರು ನಾಮಕರಣ ಕಾರ್ಯಕ್ರಮ ಆಯೋಜನೆಯಾಗಿದೆ ಎಂಬ ಮಾಹಿತಿ ಇದೆ. ಈ ಕಾರ್ಯಕ್ರಮದಲ್ಲಿ ಚಿರು-ಮೇಘನಾ ರಾಜ್ ಪುತ್ರನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು.

  Junior Chiru is My Shishya Say Dhruva Sarja

  ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮೊದಲಿನಿಂದಲೇ ಆತ್ಮೀಯರು ಮತ್ತು ಸ್ನೇಹಿತರಾಗಿದ್ದರು. ಎರಡು ಕುಟುಂಬದ ನಡುವೆ ಆತ್ಮೀಯ ಬಾಂಧವ್ಯವೂ ಇತ್ತು. ಈ ಸ್ನೇಹ ಪ್ರೀತಿಯಾಗಿ ನಂತರ ಮದುವೆವರೆಗೂ ಬಂತು. 2018ರ ಮೇ 2 ರಂದು ಮೇಘನಾ ಹಾಗೂ ಚಿರು ಸರ್ಜಾ ವಿವಾಹ ಬೆಂಗಳೂರಿನಲ್ಲಿ ಜರುಗಿತ್ತು.

  ಧ್ರುವ ಸರ್ಜಾ ಸಿನಿಮಾಗಳ ಕುರಿತು

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡು ಹೊಸ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಪೊಗರು ಆದ್ಮೇಲೆ ಎಪಿ ಅರ್ಜುನ್ ಜೊತೆ ಮಾರ್ಟಿನ್ ಸಿನಿಮಾ ಆರಂಭಿಸಿದ್ದಾರೆ. ಅದಾಗಲೇ ಚಿತ್ರೀಕರಣ ಸಹ ನಡೆಯುತ್ತಿದೆ. ಉದಯ್ ಕೆ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಇತ್ತೀಚಿಗಷ್ಟೆ ಫಸ್ಟ್ ಲುಕ್ ಟೀಸರ್ ಸಹ ರಿಲೀಸ್ ಆಗಿತ್ತು.

  ಇದರ ಜೊತೆ ಜೋಗಿ ಪ್ರೇಮ್ ಜೊತೆ ಆರನೇ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಪ್ರೇಮ್‌ಗೆ ಇದು 9ನೇ ಸಿನಿಮಾ ಆಗಿದೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ಜೊತೆ ಏಕ್ ಲವ್ ಯಾ ಸಿನಿಮಾ ಪೂರ್ಣಗೊಳಿಸಿರುವ ಪ್ರೇಮ್ ರಿಲೀಸ್‌ಗೆ ಯೋಜಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಧ್ರುವ ಸರ್ಜಾ ಚಿತ್ರವನ್ನು ಆರಂಭಿಸಲಿದ್ದಾರೆ. ಸುಪ್ರಿತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸದ್ಯಕ್ಕೆ ಹೆಸರು ಅಂತಿಮವಾಗಿಲ್ಲ. ಶೀಘ್ರದಲ್ಲಿ ಹೆಸರು ಮತ್ತು ಇನ್ನುಳಿದ ವಿವರ ಸಿಗಲಿದೆ.

  English summary
  Throwback interview: Junior chiru is My shishya and My Darling Says Dhruva Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X