For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗುವಿಗೆ ಜನ್ಮ ನೀಡಿದ ಜೂನಿಯರ್ ಎನ್.ಟಿ.ಆರ್ ದಂಪತಿ

  By Bharath Kumar
  |

  ತೆಲುಗು ಸೂಪರ್ ಸ್ಟಾರ್ ಯಂಗ್ ಟೈಗರ್ ಎನ್.ಟಿ.ಆರ್ ದಂಪತಿ ಎರಡನೇ ಮಗುವಿಗೆ ತಂದೆ-ತಾಯಿಯಾಗಿದ್ದಾರೆ. ಎನ್.ಟಿ.ಆರ್ ಅವರ ಪತ್ನಿ ಲಕ್ಷ್ಮಿ ಪ್ರಣತಿ ಅವರು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  ಖುದ್ದು ಈ ವಿಷ್ಯವನ್ನ ಎನ್.ಟಿ.ಆರ್ ಅವರೇ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದರು. 'ನನಗೆ ಗಂಡು ಮಗು ಜನಿಸಿದೆ. ನಮ್ಮ ಕುಟುಂಬ ಈಗ ದೊಡ್ಡದಾಗುತ್ತಿದೆ' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟರಲ್ಲಾಗಲೇ ಎನ್.ಟಿ.ಆರ್ ಮಗುವಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಎನ್.ಟಿ.ಆರ್ ಮತ್ತು ಲಕ್ಷ್ಮಿ ಪ್ರಣತಿ ದಂಪತಿಗೆ ಈಗಾಗಲೇ 5 ವರ್ಷದ ಗಂಡು ಮಗುವಿದ್ದು, ಅಭಯ್ ರಾಮ್ ಎಂದು ಹಸರಿಟ್ಟಿದ್ದಾರೆ. ಅಂದ್ಹಾಗೆ, ಎನ್.ಟಿ.ಆರ್ ದಂಪತಿ ಎರಡನೇ ಸಲ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದರು, ಒಂದು ವೇಳೆ ಹೆಣ್ಣು ಮಗು ಆಗಿದ್ದರೇ, ಆ ಮಗುವಿಗೆ ತಮ್ಮ ಅಜ್ಜಿಯ ಹೆಸರು ಇಡಬೇಕೆಂದು ನಿರ್ಧರಿಸಿದ್ದರಂತೆ.

  ತೆಲುಗು 'ಬಿಗ್ ಬಾಸ್'ನಲ್ಲಿ ಕನ್ನಡ ಪ್ರೇಮ ಮೆರೆದ ಜೂನಿಯರ್ NTR..!ತೆಲುಗು 'ಬಿಗ್ ಬಾಸ್'ನಲ್ಲಿ ಕನ್ನಡ ಪ್ರೇಮ ಮೆರೆದ ಜೂನಿಯರ್ NTR..!

  ಇನ್ನು ಎನ್.ಟಿ.ಆರ್ ಎರಡನೇ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ, ಇದು ಅವರದ್ದೇ ಮಗುವಿನ ಫೋಟೋನಾ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಹೀಗಿದ್ದರೂ, ಫೋಟೋದಲ್ಲಿರುವ ಫೋಟೋ ಅವರದ್ದೇ ಎನ್ನಲಾಗಿದೆ.

  ಇನ್ನುಳಿದಂತೆ ಜೂನಿಯರ್ ಎನ್.ಟಿ.ಆರ್ ಎರಡನೇ ಸಲ ತಂದೆಯಾಗಿರುವುದಕ್ಕೆ ಸಿನಿ ಲೋಕದ ಹಲವು ತಾರೆಯರು ಶುಭಾಶಯಗಳನ್ನ ತಿಳಿಸಿದ್ದಾರೆ. ಅಂದ್ಹಾಗೆ, ಎನ್,ಟಿ,ಆರ್ ಮತ್ತು ಲಕ್ಷ್ಮಿ ಪ್ರಣತಿ ಅವರ ಮದುವೆ 2011ರಲ್ಲಿ ನೆರವೇರಿತ್ತು. ಸದ್ಯ, ಎನ್.ಟಿ.ಆರ್ 'ಅರವಿಂದ ಸಮೇಧಾ' ಹಾಗೂ ರಾಜಮೌಳಿ ನಿರ್ದೇಶನದ ಚಿತ್ರಗಳಲ್ಲಿ ಬಿಜಿ ಆಗಿದ್ದಾರೆ.

  English summary
  Telugu superstar Junior NTR and his wife Lakshmi Pranathi became parents to a baby boy on Thursday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X