»   » ಸಿನಿಮಾದಲ್ಲಿ ಜೂನಿಯರ್ ಸಿದ್ದರಾಮಯ್ಯ

ಸಿನಿಮಾದಲ್ಲಿ ಜೂನಿಯರ್ ಸಿದ್ದರಾಮಯ್ಯ

Posted By:
Subscribe to Filmibeat Kannada
ಜೂನಿಯರ್ ಸಿದ್ದರಾಮಯ್ಯ ಅಲಿಯಾಸ್ ಚನ್ನಮಯಿ ಗೌಡ ಬೆಳ್ಳಿ ತೆರೆ ಮೇಲೆ | Filmibeat Kannada

ಒಂದು ವಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೆ ಹೋಲಿಕೆ ಇರುವ ವ್ಯಕ್ತಿ ನೃತ್ಯ ಮಾಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಕೆಲವು ದಿನಗಳು ಅವರು ಸಿದ್ದರಾಮಯ್ಯನವರೇ ಎಂದು ಟ್ರೋಲ್ ಕೂಡ ಆಗಿತ್ತು. ಆದರೆ ನಂತರ ದಿನಗಳಲ್ಲಿ ಅವರು ಸಿದ್ದರಾಮಯ್ಯ ಅನ್ನುವುದು ಎಲ್ಲರಿಗೂ ಗೊತ್ತಾಗಿದೆ.

ಜೂನಿಯರ್ ಸಿದ್ದರಾಮಯ್ಯ ಅಂತಾನೇ ಪ್ರಖ್ಯಾತಿ ಗಳಿಸಿರುವ ಚನ್ನಮಾಯಿ ಗೌಡರು ಸಿನಿಮಾದಲ್ಲಿಯೂ ಆಕ್ಟ್ ಮಾಡಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮಾಕನಹಳ್ಳಿ ನಿವಾಸಿ ಆಗಿರುವ ಚನ್ನಮಾಯಿ ಗೌಡ ಸಿನಿಮಾಗಳಲ್ಲಿ ಈಗಾಗಲೇ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ವೀರಾಪುರದ ವೀರ ಮಾಸ್ತಿ, ಅರ್ಧ ತಿಕ್ಲು ಪುಕ್ಲು, ಕರಾಳ ರಾತ್ರಿ ಚಿತ್ರಗಳಲ್ಲಿ ಚನ್ನಮಾಯಿ ಗೌಡರ ಅಭಿನಯವಿದೆ.

ಸಿಎಂ ಸಿದ್ದರಾಮಯ್ಯ ಹೋಲುವ ರೈತನ ಡ್ಯಾನ್ಸ್ ಫುಲ್ ವೈರಲ್

Junior Siddaramaiah Chanamayi Gowda acted in kannada movies

ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಮತ್ತಷ್ಟು ಸಿನಿಮಾಗಳ ಆಫರ್ ಕೂಡ ಬರ್ತಿದೆಯಂತೆ. ರಾಜಕೀಯ ಕ್ಷೇತ್ರಕ್ಕೂ ಬರುವುದಾಗಿ ಸೂಚನೆ ಕೊಟ್ಟಿರುವ ಚನ್ನಮಾಯಿ ಗೌಡ ಆಕ್ಟ್ ಮಾಡಿರುವ ಚಿತ್ರಗಳು ಇನ್ನ ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿವೆ.

Junior Siddaramaiah Chanamayi Gowda acted in kannada movies

ಸಿನಿಮಾದ ಸಾಕಷ್ಟು ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಸಿನಿಮಾದಲ್ಲಿ ಅಭಿನಯಿಸ ಬೇಕು ಎನ್ನುವ ಆಸೆ ಇರುತ್ತದೆ. ಅಂತವರಿಗೆ ಚನ್ನಮಾಯಿ ಗೌಡ ಅವರನ್ನ ಕರೆದುಕೊಂಡು ತಮ್ಮ ಚಿತ್ರದಲ್ಲಿ ಆಕ್ಟ್ ಮಾಡುವ ಅವಕಾಶ ನೀಡುತ್ತಿದ್ದಾರೆ.

English summary
Junior Siddaramaiah Chanamayi Gowda acted in kannada movies. like Veerapurada Veera Masti, Ardha tikul Ardha pukulu, Aa karala Ratri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada