ಹೆಣ್ಣಾಗಿ ಹುಟ್ಟಿದ್ದು ತಪ್ಪೇ?: ಕಣ್ಣೀರು ಹಾಕಿದ ನಟಿ ಅದಿತಿ

Recommended Video

ಹೆಣ್ಣಾಗಿ ಹುಟ್ಟಿದ್ದೆ ತಪ್ಪಾ ಅಂದ್ರು ಅದಿತಿ ಪ್ರಭುದೇವ | ADITIPRABHUDEVA | FIMLIBEAT KANNADA

ನವೆಂಬರ್ 29 ರಂದು ಹೈದರಾಬಾದ್ ಮೂಲದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿರುದ್ಧ ಇಡೀ ದೇಶದ ತುಂಬ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದ ಆರೋಪಿಗಳಾದ ನಾಲ್ವರು ದುಷ್ಟರನ್ನು ಇಂದು (ಡಿಸೆಂಬರ್ 6) ಬೆಳಗ್ಗೆ ಎನ್ ಕೌಂಟರ್ ಮಾಡಲಾಗಿದೆ.

ನಾಲ್ವರು ಆರೋಪಿಗಳನ್ನು ತೆಲಾಂಗಣ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಯುವತಿಯನ್ನು ಅತ್ಯಾಚಾರ ಮಾಡಿದ್ದ ಜಾಗದಲ್ಲಿಯೇ ಆರೋಪಿಗಳನ್ನು ಉಡಿಸ್ ಮಾಡಲಾಗಿದೆ. ಈ ಘಟನೆ ಬಗ್ಗೆ ಚಿತ್ರರಂಗದ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗದ ಅನೇಕರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಕನ್ನಡದ ನಟಿ ಅದಿತಿ ಪ್ರಭುದೇವ ವಿಡಿಯೋ ಮೂಲಕ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಘಟನೆ ಬಗ್ಗೆ ಮಾತನಾಡಿದ್ದಾರೆ. ಪೊಲೀಸರ ಕೆಲಸವನ್ನು ಮೆಚ್ಚಿಕೊಂಡ ಅದಿತಿ ಯುವತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಹೆಣ್ಣಾಗಿ ಹುಟ್ಟಿದ್ದು ತಪ್ಪಾ?

ಹೆಣ್ಣಾಗಿ ಹುಟ್ಟಿದ್ದು ತಪ್ಪಾ?

''ನನಗೆ ತುಂಬ ತುಂಬ ಖುಷಿ ಆಗುತ್ತಿದೆ. ರೇಪ್ ಗಳು ಹಿಂದೆಯಿಂದ ನಡೆಯುತ್ತಿದೆ. ಇತ್ತೀಚಿಗೆ ಆದ ರೇಪ್ ಸುದ್ದಿ ಕೇಳಿ ನನಗೆ ಏನು ಮಾತನಾಡಬೇಕು ತಿಳಿಯಲಿಲ್ಲ. ಹೆಣ್ಣಾಗಿ ಹುಟ್ಟಿದಕ್ಕೆ ಭಯ ಆಗುತ್ತಿತ್ತು. ಹೆಣ್ಣಾಗಿ ಹುಟ್ಟಿದ್ದು ತಪ್ಪಾ? ಎನ್ನುವ ಪ್ರಶ್ನೆ ಪದೇ ಪದೇ ನನ್ನ ಮುಂದೆ ಬರುತ್ತಿತ್ತು. ದೈಹಿಕ ಅತ್ಯಾಚಾರ ಅಲ್ಲದೆ, ಮಾನಸಿಕ ಹಿಂಸೆ ನಡೆಯುತ್ತಲೇ ಇದೆ.'' - ಅದಿತಿ ಪ್ರಭುದೇವ, ನಟಿ

ಕಣ್ಣೀರು ಶಾಪ, ಕೋಪ ತಟ್ಟಿದೆ

ಕಣ್ಣೀರು ಶಾಪ, ಕೋಪ ತಟ್ಟಿದೆ

''ಪ್ರಪಂಚದ ಪ್ರತಿ ತಂದೆ, ತಾಯಿಯ ಕಣ್ಣೀರು ಶಾಪ, ಕೋಪ ತಟ್ಟಿದೆ. ಪ್ರತಿಯೊಬ್ಬ ಹುಡುಗ ತಾನು ಪ್ರೀತಿ ಮಾಡುವ ಹುಡುಗಿ, ಹೆಂಡತಿ, ಅಕ್ಕ, ತಂಗಿ ಎಲ್ಲರ ಶಾಪ ಮುಟ್ಟಿದೆ. ನನಗೆ ತುಂಬ ಖುಷಿ ಆಗುತ್ತಿದೆ. ಪೊಲೀಸರಿಗೆ ಧನ್ಯವಾದ. ನಾನು ಅವರಿಗೆ ಸೆಲ್ಯೂಟ್ ಮಾಡುತ್ತಿದ್ದೇನೆ. ಹಾಗೆಯೇ ನಾವು ಕೂಡ ಸುರಕ್ಷಿತವಾಗಿ ಇರೋಣ'' - ಅದಿತಿ ಪ್ರಭುದೇವ, ನಟಿ

ಅತ್ಯಾಚಾರಿಗಳ ಹೆಡೆಮುರಿ ಕಟ್ಟಿದ ಸಜ್ಜನವರ ಯಾರು?

ರಿಯಲ್ ಹೀರೋಗಳಿಗೆ ನಮನ

''ನಾವು ನಮ್ಮ ಸುರಕ್ಷತೆಯನ್ನು ನೋಡಿಕೊಳ್ಳಣ್ಣ. ಕೆಲವು ಬಾರಿ ನಮ್ಮ ಸಣ್ಣ ಪುಟ್ಟ ತಪ್ಪುಗಳು ನಮ್ಮ ಕುಟುಂಬಕ್ಕೆ ನೋವು ನೀಡುವುದು ಬೇಡ. ನಿಜವಾಗಿಯೂ ಹೆಣ್ಣು ಮಕ್ಕಳನ್ನು ಗೌರವಿಸುವ, ನಮ್ಮನ್ನು ಕಾಪಾಡುವ, ನಮ್ಮ ರಕ್ಷಣೆಗೆ ನಿಂತ ರಿಯಲ್ ಹೀರೋಗಳಿಗೆ ಕೋಟಿ ಕೋಟಿ ನಮನ. ನಮಗೆ ಒಳ್ಳೆಯದನ್ನು ಮಾಡದೆ ಇದ್ದರೂ ಪರವಾಗಿಲ್ಲ, ಕೆಟ್ಟದು ಮಾಡಬೇಡಿ.'' - ಅದಿತಿ ಪ್ರಭುದೇವ, ನಟಿ

ನಟಿ ತಾರ ಪ್ರತಿಕ್ರಿಯೆ

ನಟಿ ತಾರ ಪ್ರತಿಕ್ರಿಯೆ

ನಟಿ ತಾರ ಕೂಡ ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ''ದೇವರು ಇವರಿಗೆ ತಕ್ಕ ಶಿಕ್ಷೆ ಕೊಟ್ಟಿದ್ದಾನೆ ಅನಿಸುತ್ತದೆ. ಆದರೆ, ಇದು ನನ್ನ ಕ್ರೌರತನ ಅನಿಸಬಹುದು. ಒಬ್ಬ ಮಹಿಳೆಯಾಗಿ ಆಕೆ ಪಟ್ಟ ಸಂಕಟವನ್ನು ನೆನೆಸಿಕೊಂಡಾಗ, ಭಾವನಾತ್ಮಕವಾಗಿ ಇದು ವೈಯಕ್ತಿಕ ಅಭಿಪ್ರಾಯ. ಆದರೆ, ಪ್ರಕರಣದ ಸತ್ಯಾಸತ್ಯತೆಯನ್ನು, ಇಲಾಖೆ ಮತ್ತು ಕಾನೂನು ಕೈಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ.'''ಎಂದಿದ್ದಾರೆ.

More from Filmibeat

English summary
Actress Aditi Prabhudeva reacted to the encounter of 4 accused in Hyderabad rape and murder case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X