twitter
    For Quick Alerts
    ALLOW NOTIFICATIONS  
    For Daily Alerts

    ದಿಶಾ ಸುಟ್ಟ ಸ್ಥಳದಲ್ಲೇ ಕಾಮಪಿಪಾಸುಗಳನ್ನು ಸುಟ್ಟ ಪೊಲೀಸರಿಗೆ ಸೆಲ್ಯೂಟ್ ಎಂದ ತಾರೆಯರು.!

    |

    ಇಂದು ಬೆಳ್ಳಂಬೆಳಗ್ಗೆಯೇ ತೆಲಂಗಾಣ ಪೊಲೀಸರು ಕೊಟ್ಟ ಒಂದು ಸುದ್ದಿಗೆ ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮ ಮುಗಿಲು ಮುಟ್ಟಿದೆ. ಕಾಮಪಿಪಾಸುಗಳನ್ನ ಯಮಪುರಿಗೆ ಅಟ್ಟಿದ ರಿಯಲ್ ಸಿಂಗಂಗೆ ಭಾರತೀಯರು ಉಘೇ ಉಘೇ ಎನ್ನುತ್ತಿದ್ದಾರೆ.

    ಹೈದರಾಬಾದ್ ಮೂಲದ ಪಶು ವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಬೆಂಕಿಯಲ್ಲಿ ಸುಟ್ಟ ನಾಲ್ವರು ಆರೋಪಿಗಳನ್ನು ಇಂದು ಬೆಳಗ್ಗೆ ತೆಲಾಂಗಣ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಅತ್ಯಾಚಾರ ಮಾಡಿ, ಯುವತಿಯನ್ನು ಸುಟ್ಟ ಚತ್ತನಪಲ್ಲಿ ಜಾಗದಲ್ಲೇ ಆರೋಪಿಗಳನ್ನ ಪೊಲೀಸರು ಕೊಂದಿದ್ದಾರೆ.

    ಅಲ್ಲಿಗೆ, ದಿಶಾ ಆತ್ಮಕ್ಕೆ ಶಾಂತಿ ಸಿಕ್ಕಿದೆ, ನ್ಯಾಯ ಲಭಿಸಿದೆ ಅಂತ ಜನರು ಪೊಲೀಸರ ಮೇಲೆ ಹೂಮಳೆ ಸುರಿಸಿದ್ದಾರೆ. ದುರ್ಜನರಿಗೆ ಪಾಠ ಕಲಿಸಿದ ಕರ್ನಾಟಕ ಮೂಲದ ಅಧಿಕಾರಿ ಸಜ್ಜನವರ್ ಗೆ ಭಾರತೀಯ ಚಿತ್ರರಂಗ ಸೆಲ್ಯೂಟ್ ಮಾಡಿದೆ.

    ಇಂದು ಬೆಳಗ್ಗೆ ನಡೆದ ಎನ್ ಕೌಂಟರ್ ಬಗ್ಗೆ ಭಾರತೀಯ ಚಿತ್ರರಂಗದ ತಾರೆಯರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ಕೊಟ್ಟಿರುವುದು ಹೀಗೆ...

    ಭಯವೊಂದೇ ಪರಿಹಾರ

    ಭಯವೊಂದೇ ಪರಿಹಾರ

    ''ಒಂದು ಸುದ್ದಿ ಕೇಳಿ ಇಂದು ನಾನು ನಿದ್ರೆಯಿಂದ ಎಚ್ಚರಗೊಂಡೆ. ನ್ಯಾಯ ಲಭಿಸಿದೆ'' ಎಂದು ನಾಗಾರ್ಜುನ ಅಕ್ಕಿನೇನಿ ಟ್ವೀಟ್ ಮಾಡಿದ್ರೆ, ''ಐ ಲವ್ ತೆಲಂಗಾಣ. ಭಯ ಅನ್ನೋದು ಉತ್ತಮ ಪರಿಹಾರ. ಕೆಲವೊಮ್ಮೆ ಒಂದೇ ಪರಿಹಾರ'' ಎಂದು ಸಮಂತಾ ಅಕ್ಕಿನೇನಿ ಟ್ವೀಟ್ ಮಾಡಿದ್ದಾರೆ.

    ಅತ್ಯಾಚಾರಿಗಳ ಹೆಡೆಮುರಿ ಕಟ್ಟಿದ ಸಜ್ಜನವರ ಯಾರು?

    ಮಹಾದೇವಿ ಕೃಪೆ ನಿಮ್ಮ ಮೇಲಿರಲಿ

    ಮಹಾದೇವಿ ಕೃಪೆ ನಿಮ್ಮ ಮೇಲಿರಲಿ

    ಅತ್ಯಾಚಾರಿಗಳನ್ನು ಎನ್ ಕೌಂಟರ್ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ, ಈ ಭೂಮಿ ಮೇಲೆ ಇನ್ನೂ ಸತ್ಯವಿದೆ ಎಂದು ದುರ್ಗಾಮಾತೆಗೆ ಜಗ್ಗೇಶ್ ನಮಸ್ಕಾರ ಮಾಡಿದ್ದಾರೆ. ''ಅಮಾಯಕ ಸಹೋದರಿಯ ಸಾವು ಒಂದು ವಾರದಿಂದ ನನ್ನನ್ನು ಕಾಡುತ್ತಿತ್ತು. ಇಂದು ಸಮಾಧಾನವಾಯಿತು. ಈ ಕಾರ್ಯ ಮಾಡಿದ ಆರಕ್ಷಕರೇ, ಆ ಮಹಾದೇವಿ ಕೃಪೆ ನಿಮ್ಮ ಮೇಲಿರಲಿ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ಪಶು ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ: ಮರಣದಂಡನೆ ವಿಧಿಸಿ ಎಂದ ಮಹೇಶ್ ಬಾಬುಪಶು ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ: ಮರಣದಂಡನೆ ವಿಧಿಸಿ ಎಂದ ಮಹೇಶ್ ಬಾಬು

    ದಿಶಾ ಆತ್ಮಕ್ಕೆ ಶಾಂತಿ ಸಿಗಲಿ

    ದಿಶಾ ಆತ್ಮಕ್ಕೆ ಶಾಂತಿ ಸಿಗಲಿ

    ''ಕೊನೆಗೂ ನ್ಯಾಯ ಸಿಕ್ಕಿದೆ. ತೆಲಂಗಾಣ ಪೊಲೀಸರಿಗೆ ನನ್ನ ಧನ್ಯವಾದ'' ಅಂತ ನಟ ವಿಶಾಲ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ''ನ್ಯಾಯ ಸಿಕ್ಕಿದೆ'' ಎಂದು ಹನ್ಸಿಕಾ ಟ್ವೀಟಿಸಿದ್ದಾರೆ. ''ದಿಶಾಗೆ ನ್ಯಾಯ ಕೊಡಿಸುವುದು ಇಲ್ಲಿಗೆ ಮುಗಿದಿಲ್ಲ. ಇನ್ಮುಂದೆ ಇಂತಹ ಹೇಯ ಕೃತ್ಯಗಳು ನಡೆಯದಂತೆ ಚಿಕ್ಕವಯಸ್ಸಿನಿಂದ ಮಕ್ಕಳಲ್ಲಿ ವಿದ್ಯಾಭ್ಯಾಸದ ಮೂಲಕ ಅರಿವು ಮೂಡಿಸಬೇಕು. ದಿಶಾ ಆತ್ಮಕ್ಕೆ ಶಾಂತಿ ಸಿಗಲಿ'' ಎಂದಿದ್ದಾರೆ ರವಿ ತೇಜಾ. ಇನ್ನೂ ತೆಲಂಗಾಣ ಪೊಲೀಸರಿಗೆ ಪುರಿ ಜಗನ್ನಾಥ್ ಸೆಲ್ಯೂಟ್ ಮಾಡಿದ್ದಾರೆ.

    ಹೈದರಾಬಾದ್ ರೇಪ್ ಕೇಸ್: ಹಳೇಕಾಲದ ಯೋಚನೆಗಳೇ ಸರಿ ಎಂದ ಶ್ರುತಿ ನಾಯ್ಡುಹೈದರಾಬಾದ್ ರೇಪ್ ಕೇಸ್: ಹಳೇಕಾಲದ ಯೋಚನೆಗಳೇ ಸರಿ ಎಂದ ಶ್ರುತಿ ನಾಯ್ಡು

    ನಟ ಅನಿರುದ್ಧ್ ಪ್ರತಿಕ್ರಿಯೆ

    ನಟ ಅನಿರುದ್ಧ್ ಪ್ರತಿಕ್ರಿಯೆ

    ''ಕರ್ತವ್ಯ ಮುಗಿಸಿ ಮನೆಗೆ ಬರುತ್ತಿದ್ದ ತಂಗಿಯವಳು..‌ ನಾಲ್ಕು ಕೆಟ್ಟ ಮನಸ್ಸುಗಳು ನಾಲ್ಕು ನಿಮಿಷದ ಸುಖಕ್ಕಾಗಿ ಸುಂದರ ಮನಸ್ಸಿನ ಹೂವೊಂದನ್ನು ಚಿವುಟಿ ಬಾಡಿಸಿದರು.. ಸಾಲದು ಅಂತ ಬೆಂಕಿ ಇಟ್ಟು ಸುಟ್ಟರು.. ಕ್ರೌರ್ಯ ನಡೆದ ಅಷ್ಟೂ ಸಮಯ ಆ ತಂಗಿ ಬಿಟ್ಟಿದ್ದ ನಿಟ್ಟುಸಿರು ದೇವರಿಗೂ ತಲುಪಿತು.. ದೇವದೂತನೊಬ್ಬನನ್ನು ಆಗಲೇ ನಿಯೋಜಿಸಲಾಗಿತ್ತು.. 11 ದಿನದ ಕಾರ್ಯದೊಳಗೆ ಆ ದೇವದೂತ ತನ್ನ ಕರ್ತವ್ಯ ಮುಗಿಸಿ‌ ಇಡೀ ದೇಶದ ಮನುಷ್ಯ ಕುಲ ಕೋಟಿಯ ಕೃತಜ್ಞತೆಗೆ ಪಾತ್ರರಾದರು.. ಆ ತಂಗಿಯ ಮತ್ತೆ ಬದುಕಿಸಲಾಗದು.. ಆದರೆ ಇಂತಹ ಹ್ಯೇಯ ಕೃತ್ಯಕ್ಕೆ ಮುಂದೆ ಮತ್ತೊಬ್ಬರು ಬಲಿಯಾಗದಿರಲಿ.. ಹ್ಯಾಟ್ಸ್ ಆಫ್.. ಶ್ರೀ ವಿಶ್ವನಾಥ್ ಸಜ್ಜನ್ ಸರ್'' ಎಂದು ಫೇಸ್ ಬುಕ್ ನಲ್ಲಿ ಅನಿರುದ್ಧ್ ಬರೆದುಕೊಂಡಿದ್ದಾರೆ.

    ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ, ನೇಣಿಗೇರಿಸಿ: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಗುಡುಗುಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ, ನೇಣಿಗೇರಿಸಿ: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಗುಡುಗು

    ಸಲ್ಯೂಟ್ ಮಾಡಿದ ಎ.ಆರ್.ಮುರುಗದಾಸ್

    ಸಲ್ಯೂಟ್ ಮಾಡಿದ ಎ.ಆರ್.ಮುರುಗದಾಸ್

    ''ಹೈದರಾಬಾದ್ ಪೊಲೀಸ್ ಡಿಪಾರ್ಟ್ಮೆಂಟ್ ಗೆ ನನ್ನ ಸಲ್ಯೂಟ್. ಪ್ರತಿಯೊಬ್ಬ ಮಹಿಳೆಗೂ ಈ ದೇಶದಲ್ಲಿ ಸುರಕ್ಷಿತ ಭಾವ ಮೂಡುವ ದಿನಕ್ಕೆ ನಾನು ಕಾಯುತ್ತಿದ್ದೇನೆ'' ಎಂದು ಎ.ಆರ್.ಮುರುಗದಾಸ್ ಟ್ವೀಟ್ ಮಾಡಿದ್ದಾರೆ.

    ಅಲ್ಲು ಅರ್ಜುನ್ ಟ್ವೀಟ್

    ಅಲ್ಲು ಅರ್ಜುನ್ ಟ್ವೀಟ್

    ''ನ್ಯಾಯ ಸಿಕ್ಕಿದೆ. ಈಗ ದಿಶಾ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಟಾಲಿವುಡ್ ನಟ ಜೂನಿಯರ್ ಎನ್.ಟಿ.ಆರ್ ಟ್ವೀಟ್ ಮಾಡಿದ್ದಾರೆ. ಇನ್ನೂ ನಟ ಅಲ್ಲು ಅರ್ಜುನ್ ಕೂಡ ''ಜಸ್ಟಿಸ್ ಸರ್ವ್ಡ್'' ಅಂತಲೇ ಟ್ವೀಟಿಸಿದ್ದಾರೆ.

    ಸುಲಭ ಸಾವು

    ಸುಲಭ ಸಾವು

    ''ಅತ್ಯಾಚಾರಿಗಳು ತುಂಬಾ ಸುಲಭವಾಗಿ ಮೃತಪಟ್ಟರು. ದಿಶಾಗೆ ತೆಲಂಗಾಣ ಪೊಲೀಸರು ನ್ಯಾಯ ಒದಗಿಸಿದ್ದಾರೆ. ಇಂದಿನ ವ್ಯವಸ್ಥೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕಠಿಣ ಕಾನೂನು ಬರಲೇಬೇಕು'' ಎಂದು ನಟಿ ರಾಧಿಕಾ ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

    ಜೋರಾಗಿ ಹೇಳಿ ಜೈ ಹೋ...

    ಜೋರಾಗಿ ಹೇಳಿ ಜೈ ಹೋ...

    ''ನಾಲ್ಕು ಅತ್ಯಾಚಾರಿಗಳನ್ನು ಎನ್ ಕೌಂಟರ್ ಮಾಡಿದ ತೆಲಂಗಾಣ ಪೊಲೀಸರಿಗೆ ಶುಭಾಶಯಗಳು ಮತ್ತು ಜೈಹೋ. ಎಲ್ಲರೂ ನನ್ನೊಂದಿಗೆ ಜೋರಾಗಿ ಹೇಳಿ.. ಜೈಹೋ..'' ಎಂದು ನಟ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.

    ಒಳ್ಳೆಯ ಕೆಲಸದಿಂದಾಗಿ ನ್ಯಾಯ ಸಿಕ್ಕಿದೆ

    ಒಳ್ಳೆಯ ಕೆಲಸದಿಂದಾಗಿ ನ್ಯಾಯ ಸಿಕ್ಕಿದೆ

    ''ನಿನ್ನ ಆತ್ಮಕ್ಕೆ ಈಗ ಶಾಂತಿ ಸಿಗಲಿದೆ ಎಂದು ಭಾವಿಸುತ್ತೇನೆ. ನೀನು ಈ ಭೂಮಿಯಲ್ಲಿ ಮಾಡಿದ ಒಳ್ಳೆಯ ಕೆಲಸದಿಂದಾಗಿ ನ್ಯಾಯ ಸಿಕ್ಕಿದೆ. ದೇವರು ಸದಾ ನೋಡುತ್ತಿರುತ್ತಾನೆ'' ಎಂದು ನಟಿ ರಶ್ಮಿಕಾ ಮಂದಣ್ಣ ಟ್ವೀಟಿಸಿದ್ದಾರೆ.

    ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

    ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

    ''ಅತ್ಯಾಚಾರದಂತಹ ನೀಚ ಕೃತ್ಯ ಎಸಗಿದ ಬಳಿಕ ಎಷ್ಟು ದೂರ ಅಂತ ಓಡಿ ಹೋಗಲು ಸಾಧ್ಯ. ತೆಲಂಗಾಣ ಪೊಲೀಸರಿಗೆ ನನ್ನ ಧನ್ಯವಾದ'' ಎಂದು ರಾಕುಲ್ ಪ್ರೀತ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಇನ್ನೂ ಬಾಲಿವುಡ್ ನಟ ರಿಷಿ ಕಪೂರ್ ತೆಲಂಗಾಣ ಪೊಲೀಸರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

    English summary
    Actor Nagarjuna Akkineni, Anupam Kher, Vishal and others have reacted to the encounter of 4 accused in Hyderabad rape and murder case.
    Friday, December 6, 2019, 13:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X