'ಹಲ್ಕಾ ಡಾನ್‌' ಜೊತೆ ಚಂದನವನಕ್ಕೆ 'ಜೋಗುಳ' ಅಮ್ಮ ಜ್ಯೋತಿ ರೈ ವಾಪಸ್

ಕನ್ನಡ ನಟಿ ಜ್ಯೋತಿ ರೈ ಕೆಲ ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. 2ನೇ ಮದುವೆ ಆಗಿ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೆಲುವೆ 'ಕಿಲ್ಲರ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

ಕನ್ನಡದಲ್ಲಿ 'ಹಲ್ಕಾ ಡಾನ್' ಎಂಬ ಸಿನಿಮಾ ಘೋಷಣೆಯಾಗಿದೆ. ಪ್ರಮೋದ್ ನಟನೆಯ ಈ ಚಿತ್ರಕ್ಕೆ ಚಲಾ ಎಂಬುವವರು ಆಕ್ಷನ್ ಕಟ್ ಹೇಳ್ತಿದ್ದಾರೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ ಕೆ. ಪಿ ಶ್ರೀಕಾಂತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಮೃತಾ ಅಯ್ಯಂಗಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಚಿತ್ರದ ಮುಖ್ಯ ಪಾತ್ರದಲ್ಲಿ ಜ್ಯೋತಿ ಪೂರ್ವಜ್ ನಟಿಸುತ್ತಿರುವುದು ವಿಶೇಷ.

Jyothi Poorvaj Returns to Kannada Cinema with Pramod s Action Film Halka Don

ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ 'ಹಲ್ಕಾ ಡಾನ್' ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಹಲ್ಕಾ ಡಾನ್' ಚಿತ್ರಕ್ಕೆ 'ಸಾಯಿಕುಮಾರ್ ಫ್ಯಾನ್' ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ಪ್ರಮೋದ್ ಲುಂಗಿ, ಬನಿಯನ್ ಧರಿಸಿ ಕೂಲಿಂಗ್ ಗ್ಲಾಸ್ ತೊಟ್ಟು ಬೀಡಿ ಸೇದುತ್ತಾ ಕೊರಳಲ್ಲಿ ಹಾರ ಹಾಕಿಕೊಂಡು ಗನ್ ಹಿಡಿದು ಪೋಸ್ ಕೊಟ್ಟಿದ್ದಾರೆ. ನಾಯಿಯೊಂದು ಜೊತೆಗಿದೆ.

ಮೊದಲ ನೋಟದಲ್ಲೇ 'ಹಲ್ಕಾ ಡಾನ್' ಸಿನಿಮಾ ಪೋಸ್ಟರ್ ಗಮನ ಸೆಳೆಯುತ್ತಿದೆ. ನಾಳೆ(ಅಕ್ಟೋಬರ್ 24) ನಗರದ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಶಿವಣ್ಣ, ಗೀತಾ ದಂಪತಿ ಸೇರಿದಂತೆ ಸೇರಿದಂತೆ ಹಲವು ಈ ಮುಹೂರ್ತ ಸಮಾರಂಭಕ್ಕೆ ಹಾಜರಾಗುತ್ತಿದ್ದಾರೆ. ಸುದೀಪ್ ಹಾಗೂ ಧನಂಜಯ್ ಕೂಡ ತಂಡಕ್ಕೆ ಶುಭ ಕೋರಲು ಬರ್ತಿದ್ದಾರೆ.

ಈ ಹಿಂದೆ 'ಟಗರು', 'ಸಲಗ' ಹಾಗೂ 'ಯುಐ' ಚಿತ್ರಗಳನ್ನು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದರು. ಇದು ಅವರ ಸಂಸ್ಥೆಯ 4ನೇ ಸಿನಿಮಾ. ವಿ. ಹರಿಕೃಷ್ಣ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ 'ಹಲ್ಕಾ ಡಾನ್' ಚಿತ್ರಕ್ಕಿದೆ. ಟೈಟಲ್‌ನಿಂದಲೇ ಸಿನಿಮಾ ಗಮನ ಸೆಳೆಯುತ್ತಿದೆ.

'ಬಂದೇ ಬರತಾವ ಕಾಲ' ಧಾರಾವಾಹಿ ಮೂಲಕ ಜ್ಯೋತಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ಜೋಗುಳ', 'ಗೆಜ್ಜೆಪೂಜೆ', 'ಅನುರಾಗ ಸಂಗಮ', 'ಕನ್ಯಾದಾನ', 'ಲವಲವಿಕೆ', 'ಪ್ರೇರಣಾ', 'ಕಿನ್ನರಿ', 'ಮೂರುಗಂಟು' ಮತ್ತು 'ಕಸ್ತೂರಿ ನಿವಾಸ' ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ ತೆಲುಗು ಕಿರುತೆರೆ ಕಡೆ ಮುಖ ಮಾಡಿದ್ದರು. 'ಗುಪ್ಪೆದಂತ ಮನಸು' ಧಾರಾವಾಹಿಯಲ್ಲಿ ಆಕೆಯ ನಟನೆ ತೆಲುಗು ವೀಕ್ಷಕರ ಮನಗೆದ್ದಿತ್ತು. ಬಳಿಕ ಕೆಲ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದ್ದರು.

ಮಡಿಕೇರಿಯಲ್ಲಿ ಹುಟ್ಟಿದ ನಟಿ ಜ್ಯೋತಿ ರೈ, ಪುತ್ತೂರಿನಲ್ಲಿ ಓದಿ ಬೆಳೆದವರು. ಕಾಲೇಜು ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ 20ನೇ ವಯಸ್ಸಲ್ಲೆ ಮದುವೆಯಾಗಿತ್ತು. ಮೊದಲ ಪತಿಯಿಂದ ದೂರಾಗಿರುವ ಆಕೆ ತೆಲುಗು ನಿರ್ದೇಶಕ ಸುಕು ಪೂರ್ವಜ್ ಅವರನ್ನು ಜ್ಯೋತಿ 2ನೇ ಮದುವೆ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊಶೂಟ್ ಮೂಲಕ ನೆಟ್ಟಿಗರ ಹುಬ್ಬೇರಿಸುತ್ತಿರುತ್ತಾರೆ.

ಜ್ಯೋತಿ ಕನ್ನಡ ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿತ್ತು. ಸದ್ಯ 'ಹಲ್ಕಾ ಡಾನ್' ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೇಡಂ ನೀವು ಚಿತ್ರದ ಮುಹೂರ್ತ ಸಮಾರಂಭಕ್ಕೆ ಬರ್ತೀರಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಕೇಳುತ್ತಿದ್ದಾರೆ.

More from Filmibeat

Read more about: sandalwood kannada tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X