»   » ಈ ಸುಂದರಿ ಕನ್ನಡಕ್ಕೆ ಯಾಕಯ್ಯಾ !

ಈ ಸುಂದರಿ ಕನ್ನಡಕ್ಕೆ ಯಾಕಯ್ಯಾ !

Posted By: Staff
Subscribe to Filmibeat Kannada
jyotika
ಡಯಟ್ಟೇ ಮಾಡದ ಜ್ಯೋತಿಕಾರನ್ನು ನೋಡಲು ಗುಂಪಿನಲ್ಲಿ ತಲೆ ತೂರಿಸಿದವರಿಗೆ ಆದದ್ದು ಭ್ರಮ ನಿರಸನ. ಬೊಜ್ಜಿಗೆ ಕೊರೆಯಿಲ್ಲ. ತೇಲುಗಣ್ಣು ಮೇಲುಗಣ್ಣು. ಬಾಚಣಿಗೆಯನ್ನೇ ಕಾಣದ ಹಿಪ್ಪಿಗಳ ತಲೆಯ ಹೋಲುವ ಕೂದಲು; ಅದಕ್ಕೂ ಬಹುಬಣ್ಣ. ಕೊನೆಗೆ ಕೇಳಿದ್ದು- 'ಈ ಸುಂದರೀನಾ ಯಾಕೆ ಕರೆ ತಂದರೋ ಅಣ್ಣ" !

ನನಗೆ ಇನ್ನೂ ಸರಿಯಾಗಿ ತಮಿಳೇ ಬರೋದಿಲ್ಲ. ಆದರೆ ಅದರ ಉಚ್ಚಾರಣೆ ಬಗೆಗೆ ಹೆಮ್ಮೆಯಿದೆ. ಕನ್ನಡವನ್ನೂ ಕಷ್ಟ ಪಟ್ಟು ಮಾತಾಡಿದ್ದೇನೆ. ಕನ್ನಡ ಬರೋದಿಲ್ಲ. ಇನ್ನಷ್ಟು ಸಿನಿಮಾಗಳಲ್ಲಿ ಮಾಡಿದರೆ, ಕಲಿಯುತ್ತೇನೆ. ಈವರೆಗೆ ನನ್ನ ಅಕ್ಕ ಆ್ಯಕ್ಟ್‌ ಮಾಡಿದ್ದೂ ಸೇರಿದಂತೆ ಯಾವುದೇ ಕನ್ನಡ ಸಿನಿಮಾ ನೋಡಿಲ್ಲ. ಟಿವಿ ಚಾನೆಲ್‌ಗಳ ಬದಲಿಸುವಾಗ ಅಕಸ್ಮಾತ್ತಾಗಿ ಕನ್ನಡ ಹಾಡುಗಳನ್ನು ಕೇಳಿದ್ದೇನೆ.

ದೇವನಹಳ್ಳಿಯ ಟಿಪ್ಪು ಹುಟ್ಟಿದ ಕೋಟೆಯಲ್ಲಿ ಮಧ್ಯಾಹ್ನದೂಟಕ್ಕೆ ಚಿಕನ್‌ ಕಬಾಬ್‌ ತಿಂದ ನಂತರ ಸುದ್ದಿಗಾರರ ಮುಂದೆ ಜ್ಯೋತಿಕಾ ಆಡಿದ ಮಾತುಗಳಿವು. ಇನ್ನೊಂದೆರಡು ವರ್ಷ ಈಕೆ ತಮಿಳು ಸಿನಿಮಾದಲ್ಲಿ ಫಾರ್ಮ್‌ ಉಳಿಸಿಕೊಂಡಿದ್ದಿದ್ದರೆ ಖುಷ್‌ಬೂಗೆ ಕಟ್ಟಿಸಿದ ಹಾಗೆಯೇ ಈಕೆಗೂ ದೇವಾಲಯ ಎದ್ದೇಳುತ್ತಿತ್ತೇನೋ! ತಮಿಳು ಬಾರದಿದ್ದರೂ ತಮಿಳರ ನೆಚ್ಚಿನ ನಾಯಕಿಯಾದ ಜ್ಯೋತಿಕಾ ಬೆಳೆದದ್ದು ಅಕ್ಕ ನಗ್ಮಾಗಿಂತ ಎತ್ತರ. ಆದರೀಗ ತಮಿಳಲ್ಲಿ ಅವರಿಗೆ ಮೊದಲ ರೀತಿ ಇಲ್ಲ ರೆಡ್‌ ಕಾರ್ಪೆಟ್‌ ಹಾಸು. ಕಾರಣ ಸಾಲುಸಾಲು ಸಿನಿಮಾಗಳು ಫ್ಲಾಪು.

ಜ್ಯೋತಿಕಾ ಆಡಿದ್ದು ಫಾರ್ಮಲ್‌ ಮಾತು- ವೆರಿ ನೈಸ್‌ ಎಕ್ಸ್‌ಪೀರಿಯನ್ಸ್‌ ಟು ವರ್ಕ್‌ ವಿತ್‌.... ಇದು ನನ್ನ ಅದೃಷ್ಟ. ತೆಲುಗು ಸಿನಿಮಾಗಳ ಆಫರ್‌ಗಳನ್ನು ಸ್ಕಿೃಪ್ಟ್‌ ಸರಿಯಿಲ್ಲ ಅನ್ನುವ ಕಾರಣಕ್ಕೆ ಒಪ್ಪಿಕೊಳ್ಳಲಿಲ್ಲ. ತಮಿಳಿನಲ್ಲಿ ಇನ್ನೂ 3 ಸಿನಿಮಾಗಳಿವೆ. ನಾಗರ ಹಾವು ಕನ್ನಡ ಸಿನಿಮಾದ ಸ್ಕಿೃಪ್ಟ್‌ ನನಗೆ ಮೆಚ್ಚಾಯಿತು. ಆ ಕಾರಣಕ್ಕೇ ಒಪ್ಪಿಕೊಂಡೆ.

ಹಿಂದಿ ಚಿತ್ರ ಬಾಜಿಗರ್‌ ರೀಮೇಕ್‌ ಈ ನಾಗರಹಾವು. ಚಿತ್ರದ ನಾಯಕ ಉಪ್ಪಿ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ. ಹಾಲಿವುಡ್‌ ಚಿತ್ರದ ದಡ ನದಿ ಆಟದಲ್ಲಿ ಕೊಕ್‌ ಪಡೆದ ಮುರಳಿ ಮೋಹನ್‌ ನಿರ್ದೇಶಕ. ಕತೆಗೆ ಒತ್ತು ಕೊಡುವ ಜ್ಯೋತಿಕಾಗೆ ಬಾಜಿಗರ್‌ ಚಿತ್ರ ಇಷ್ಟವಾಗಿತ್ತಂತೆ. ಹೀಗಾಗಿ ರೀಮೇಕಿಗೂ ಅಂದರು ಸೈ. ಬಾಜಿಗರ್‌ನ ಕಾಜೋಲ್‌ ಹಾಗೂ ಶಿಲ್ಪ ಶೆಟ್ಟಿ ಇಬ್ಬರ ಪಾತ್ರವನ್ನೂ ಜ್ಯೋತಿಕಾ ಒಬ್ಬರೇ ಮಾಡುತ್ತಿದ್ದಾರೆ.

ಅಂದಹಾಗೆ, ಈಗಾಗಲೇ ಜ್ಯೋತಿಕಾ ಅಭಿನಯದ ಎರಡು ಕನ್ನಡ ಚಿತ್ರಗಳು (ಒಂದು ಡಬ್‌ ಆಗಿದ್ದು ಎರಡೂ ಡಬ್ಬಾದಲ್ಲೇ ಇವೆ) ಪೈಪ್‌ಲೈನ್‌ನಲ್ಲಿವೆ. ನೃತ್ಯ ನಿರ್ದೇಶಕ ಮೂಗೂರು ಸುಂದರಂ ತಮ್ಮ ಮಕ್ಕಳಿಗಾಗಿ ನಿರ್ಮಿಸುತ್ತಿರುವ ಕನ್ನಡ ಚಿತ್ರಕ್ಕೂ ಜ್ಯೋತಿಕಾ ಆಯ್ಕೆಯಾಗಿದ್ದಾರೆ. 'ಹಾಲಿವುಡ್‌"ಗಾಗಿ ರಾಮುಗೆ ಕೊಟ್ಟಿದ್ದ ಕಾಲ್‌ಷೀಟನ್ನೇ ರಾಕ್‌ಲೈನ್‌ ಪಡೆದಿರುವುದರಿಂದ, ಜ್ಯೋತಿಕಾ ನಾಗರಹಾವಿನ ನಾಯಕಿ ಎನ್ನುವುದು ಜಗಜ್ಜಾಹೀರಾಗಿರುವ ಹಳೆ ಸೀಕ್ರೇಟು.

ಅಂದಹಾಗೆ, ಈಕೆಯ ಇನ್ನೊಬ್ಬ ಸೋದರಿ ರೋಷನಿ ಗುಲಾಬಿ ಎಂಬ ಕನ್ನಡ ಚಿತ್ರದಲ್ಲಿ ನಟಿಸಿ, ಪರವಾಗಿಲ್ಲ ಎನಿಸಿಕೊಂಡಿದ್ದರು. ಈಗವರು ಅಮೆರಿಕೆಯಲ್ಲಿ ಗಂಡನ ಜೊತೆ ಸಂತೋಷವಾಗಿದ್ದಾರೆ.

ಜ್ಯೋತಿಕಾ ಖಂಡಿತ ಅಲ್ಲ ನಗುವ ಕಾವ್ಯ ರೂಪಕ ಎನ್ನುವುದು ಈಕೆಯ ಫಸ್ಟ್‌ ಇಂಪ್ರೆಷನ್‌. ಕನ್ನಡ ಪ್ರೇಕ್ಷಕರು ಈಕೆಯನ್ನು ಒಪ್ಪಿಕೊಳ್ಳುವುದು ಅನುಮಾನ ಎನ್ನುವುದು ಸೆಕೆಂಡ್‌ ಒಪಿನಿಯನ್‌.

English summary
First impression of Jyothika in Kannada Industry is not good...
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada