For Quick Alerts
  ALLOW NOTIFICATIONS  
  For Daily Alerts

  ನಮ್ಮ ದಾಂಪತ್ಯದಲ್ಲಿ ವಿರಸಕ್ಕೆ ಕಾರಣವಾಗಿದ್ದು ಒಬ್ಬ ಮಂತ್ರವಾದಿ: ಕೆ.ಕಲ್ಯಾಣ್

  |

  ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಹಾಗೂ ಪತ್ನಿ ಅಶ್ವಿನಿ ನಡುವೆ ಭಿನ್ನಾಭಿಪ್ರಾಯ ತಲೆದೂರಿದೆ. ಪತ್ನಿ ಅಪಹರಣವಾಗಿದ್ದಾರೆ ಎಂದು ಕೆ.ಕಲ್ಯಾಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಶ್ವಿನಿ ಸಹ ಕೆ.ಕಲ್ಯಾಣ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

  ಇದೇನಿದು ಕೆ ಕಲ್ಯಾಣ್ ಹೆಂಡತಿಯ ಆರೋಪ | K. Kalyan | Filmibeat Kannada

  ಆದರೆ ಇಡೀಯ ಘಟನೆಯ ಬಗ್ಗೆ ಹಾಗೂ ಪತ್ನಿ ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಲು ಇಂದು ಬೆಳಗಾವಿಯಲ್ಲಿ ಕೆ.ಕಲ್ಯಾಣ್ ಸುದ್ದಿಗೋಷ್ಠಿ ನಡೆಸಿದ್ದು, ಇಡೀಯ ಘಟನೆಗಳನ್ನು ವಿವರವಾಗಿ ಮಾಧ್ಯಮದೊಟ್ಟಿಗೆ ಹಂಚಿಕೊಂಡರು.

  ಸಮಸ್ಯೆ ಪ್ರಾರಂಭವಾಗಿದ್ದು ಬೆಂಗಳೂರಿನ ಕೆ.ಕಲ್ಯಾಣ್ ನಿವಾಸಕ್ಕೆ ಗಂಗಾ ಕುಲಕರ್ಣಿ ಎಂಬುವರು ಅಡುಗೆ ಕೆಲಸಕ್ಕೆಂದು ಬಂದಾಗಿನಿಂದ ಎಂದ ಕೆ.ಕಲ್ಯಾಣ್. ಗಂಗಾ ಕುಲಕರ್ಣಿ ನಮ್ಮ ಮನೆಗೆ ಬಂದ ಕೆಲವೇ ದಿನಗಳಲ್ಲಿ ಪತ್ನಿ ಅಶ್ವಿನಿ ಮಂಕಾದರು, ನಮ್ಮೊಟ್ಟಿಗೆ ಇದ್ದ ಅತ್ತೆ-ಮಾವ ಸಹ ಮಂಕಾದರು ಎಂದರು ಕೆ.ಕಲ್ಯಾಣ್.

  ನಮ್ಮ ಅತ್ತೆ ಮಧ್ಯರಾತ್ರಿಯಲ್ಲಿ ನಿಂಬೆಹಣ್ಣುಗಳನ್ನು ಇಟ್ಟು ಪೂಜೆ ಪ್ರಾರಂಭಿಸಿಬಿಡುತ್ತಿದ್ದರು. ಇನ್ನೂ ವಿಚಿತ್ರವಾದ ಆಚರಣೆಗಳನ್ನು ಮಾಡುತ್ತಿದ್ದರು. ಗಂಗಾ ಕುಲಕರ್ಣಿಯು ಶಿವಾನಂದ ಸಾಲಿ ಎಂಬ ಮಾಟಗಾರನ ಪರಿಚಯವನ್ನು ನಮ್ಮ ಅತ್ತೆಯವರಿಗೆ ಮಾಡಿಸಿದ್ದರು. ಆತ ಏನೇನೋ ಪೂಜೆ ಮಾಡುವಂತೆ ಹೇಳುತ್ತಿದ್ದ ಅವನೊಟ್ಟಿಗೆ ಗಂಟೆಗಟ್ಟಲೆ ಇವರು ಮಾತನಾಡುತ್ತಿದ್ದರು ಎಂದರು ಕೆ.ಕಲ್ಯಾಣ್.

  ಜನವರಿ 9 ರಂದು ಬೆಂಗಳೂರಿಂದ ಬೆಳಗಾವಿಗೆ ಬಂದರು

  ಜನವರಿ 9 ರಂದು ಬೆಂಗಳೂರಿಂದ ಬೆಳಗಾವಿಗೆ ಬಂದರು

  ಜನವರಿ 09 ರಂದು ಅತ್ತೆ-ಮಾವ ಹಾಗೂ ನನ್ನ ಪತ್ನಿ ಬೆಂಗಳೂರಿನಿಂದ ಬೆಳಗಾವಿಯ ಅವರ ಸ್ವಂತ ಮನೆಗೆ ಕೆಲದಿನಗಳಿಗಾಗಿ ಬಂದರು. ಆದರೆ ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಅವರ ಮೊಬೈಲ್‌ಗಳು ಬಂದ್ ಆದವು. ನಂತರ ನಾನೇ ಅವರನ್ನು ಹುಡುಕಿ ಬೆಳಗಾವಿಗೆ ಬಂದೆ. ಆಗ ಗೊತ್ತಾಯಿತು ಅವರು ಮನೆ ಬದಲಾಯಿಸಿದ್ದಾರೆ ಎಂದು. ಅಷ್ಟರಲ್ಲಿ ಅವರು ಎರಡು ಮನೆ ಬದಲಾಯಿಸಿದ್ದರು.

  'ಪತ್ನಿ ಜೊತೆಗೆ ಮಾತನಾಡಲು ಅವಕಾಶ ಕೊಡಲಿಲ್ಲ'

  'ಪತ್ನಿ ಜೊತೆಗೆ ಮಾತನಾಡಲು ಅವಕಾಶ ಕೊಡಲಿಲ್ಲ'

  ನಾನು ಕೊನೆಗೆ ಅವರನ್ನು ಹುಡುಕಿ ಭೇಟಿ ಮಾಡಲು ಯತ್ನಿಸಿದೆ, ನಾನು ಮನೆಯ ಒಳಕ್ಕೆ ಹೊದಾಗ ಅಲ್ಲಿ ಗಂಗಾ ಕುಲಕರ್ಣಿ ಸಹ ಇದ್ದರು. ನನ್ನ ಅತ್ತೆ-ಮಾವ ನನ್ನೊಂದಿಗೆ ಸರಿಯಾಗಿ ಮಾತನಾಡಲಿಲ್ಲ, ಪತ್ನಿಯನ್ನು ಸಹ ಮಾತನಾಡಲು ಬಿಡಲಿಲ್ಲ. ಆದರೆ ಸ್ವಲ್ಪ ಹೊತ್ತು ಮಾತನಾಡಿದಾಗ ನಾನು ಯಾರೋ ಅಪರಿಚಿತ ಎಂಬಂತೆ ನನ್ನ ಪತ್ನಿ ಮಾತನಾಡಿದರು ಎಂದರು ಕೆ.ಕಲ್ಯಾಣ್.

  'ಅತ್ತೆ-ಮಾವನ ಹೆಸರಲ್ಲಿದ್ದ ಮನೆ ಮಾರಾಟ ಮಾಡಿದ್ದಾರೆ'

  'ಅತ್ತೆ-ಮಾವನ ಹೆಸರಲ್ಲಿದ್ದ ಮನೆ ಮಾರಾಟ ಮಾಡಿದ್ದಾರೆ'

  ನನ್ನ ಪತ್ನಿಯ ಸಂಬಂಧಿಗಳಿಂದ ನನಗೆ ಗೊತ್ತಾದ ವಿಷಯವೆಂದರೆ ಅವರು ತಮ್ಮ ಇತರೆ ಸಂಬಂಧಿಗಳಿಂದ ಲಕ್ಷಾಂತರ ಹಣ ಪಡೆದುಕೊಂಡಿದ್ದಾರೆ. ನನ್ನ ಪತ್ನಿ ಸಹ ಲಕ್ಷಾಂತರ ಹಣವನ್ನು ಶಿವಾನಂದ ಸಾಲಿ ಖಾತೆಗೆ ವರ್ಗಾಯಿಸಿದ್ದಾರೆ. ಅತ್ತೆ-ಮಾವನ ಹೆಸರಲ್ಲಿದ್ದ ಮನೆಯನ್ನೂ ಸಹ ಮಾರಾಟ ಮಾಡಿ ಹಣವನ್ನು ಶಿವಾನಂದ ವಾಲಿಗೆ ಕೊಟ್ಟುಬಿಟ್ಟಿದ್ದಾರೆ.

  ಎಲ್ಲರ ಮೊಬೈಲ್‌ಗಳು ಒಂದೇ ದಿನ ಸ್ವಿಚ್‌ ಆಫ್

  ಎಲ್ಲರ ಮೊಬೈಲ್‌ಗಳು ಒಂದೇ ದಿನ ಸ್ವಿಚ್‌ ಆಫ್

  ಇದೆಲ್ಲಾ ಮಾಹಿತಿಯನ್ನು ನಾನು ತಿಳಿದುಕೊಂಡು ಪತ್ನಿಯ ಇತರೆ ಸಂಬಂಧಿಗಳ ಗಮನಕ್ಕೆ ವಿಷಯ ತಂದು ಅತ್ತೆ-ಮಾವ ಹಾಗೂ ಪತ್ನಿಯ ಮೇಲೆ ಒತ್ತಡ ಹೇರಿಸಿದೆ. ಆದರೆ ಒಂದು ದಿನ ಹಠಾತ್ತಾಗಿ ಪತ್ನಿ, ಅತ್ತೆ-ಆವ, ಗಂಗಾ ಕುಲಕರ್ಣಿ, ಶಿವಾನಂದ ವಾಲಿ ಇವರುಗಳ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆದವು. ಅಲ್ಲಿಂದ ಮೂರು ತಿಂಗಳ ವರೆಗೆ ಯಾರೊಬ್ಬರ ಪತ್ತೆಯೂ ನಮಗೆ ಸಿಗಲಿಲ್ಲ.

  ಪತ್ನಿ ಮಾಡಿರುವ ಆರೋಪವೆಲ್ಲಾ ಸುಳ್ಳು: ಕೆ.ಕಲ್ಯಾಣ್

  ಪತ್ನಿ ಮಾಡಿರುವ ಆರೋಪವೆಲ್ಲಾ ಸುಳ್ಳು: ಕೆ.ಕಲ್ಯಾಣ್

  ಆಗ ನಾನು ಬೇರೆ ದಾರಿ ಇಲ್ಲದೆ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ನೀಡಬೇಕಾಯಿತು. ದೂರು ನೀಡಿದ ಒಂದೆರಡು ದಿನಗಳಲ್ಲಿ ಪೊಲೀಸರು ಎಲ್ಲರನ್ನೂ ಪತ್ತೆ ಮಾಡಿದ್ದಾರೆ. ಶಿವಾನಂದ ವಾಲಿ ಸಹ ಬಂಧನಕ್ಕೆ ಒಳಗಾಗಿದ್ದಾನೆ. ಆತನ ಬಂಧನವಾದ ಬಳಿಕ ಪತ್ನಿ ಅಶ್ವಿನಿ ನನ್ನ ವಿರುದ್ಧ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ ಕೆ.ಕಲ್ಯಾಣ್.

  English summary
  Lyric writer K Kalyan accused that his wife Ashwini influenced by black magician Shivananda Vali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X