ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇನೆ: ಕೆ. ಕಲ್ಯಾಣ್ ಪತ್ನಿ ಅಶ್ವಿನಿ
ಚಿತ್ರ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯ ಕಲಹ ಸುಖಾಂತ್ಯ ಕಂಡಿದೆ. ಕಲ್ಯಾಣ್ ಪತ್ನಿ ಅಶ್ವಿನಿ ವಿಚ್ಛೇದನ ಅರ್ಜಿ ಹಿಂಪಡೆದು ಪತಿ ಕಲ್ಯಾಣ್ ಜೊತೆ ಜೀವನ ನಡೆಸುವುದಾಗಿ ಹೇಳಿದ್ದಾರೆ.
ಬೆಳಗಾವಿಯ 'ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿವಾಹ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇನೆ, ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆ ಆರಂಭಿಸಿದ್ದೇನೆ' ಎಂದು ಅಶ್ವಿನಿ ತಿಳಿಸಿದ್ದಾರೆ. ಮಾಧ್ಯಮದ ವರ ಜೊತೆ ಮಾತನಾಡಿದ ಅವರು, 'ಶೀಘ್ರವೇ ಪತಿ ಕೆ.ಕಲ್ಯಾಣ ಅವರನ್ನು ಭೇಟಿ ಮಾಡುತ್ತೇನೆ. ಅವರೊಂದಿಗೆ ದಾಂಪತ್ಯ ಜೀವನ ಮುಂದುವರೆಸುತ್ತೇನೆ. ನಾವಿಬ್ಬರೂ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಕುಟುಂಬದಲ್ಲಿ ನಡೆದ ಕೆಟ್ಟ ಗಳಿಗೆ ಇದು' ಎಂದಿದ್ದಾರೆ.
'ಶಿವಾನಂದ ವಾಲಿಯನ್ನು ನಾವು ತುಂಬಾ ನಂಬಿದ್ದೆವು. ಆದರೆ ನಮಗೆ ನಂಬಿಕೆ ದ್ರೋಹ ಮಾಡಿದ್ದಾನೆ. ನಾವು ಅವರ ಮಾತನ್ನ ಕೇಳಬೇಕು, ಹೇಳಿದ್ದನ್ನು ಮಾಡಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ಎಲ್ಲದರ ಬಗ್ಗೆ ಕಲ್ಯಾಣ ಅವರನ್ನು ಸದ್ಯದಲ್ಲೇ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಜೀವನವನ್ನು ಅವರೊಂದಿಗೆ ಕಳೆಯುತ್ತೇನೆ. ನ್ಯಾಯಾಲಯಕ್ಕೆ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇನೆ. ಈ ಕುರಿತು ಕೆಲವೊಂದಿಷ್ಟು ದಾಖಲೆ ಪತ್ರಗಳಿಗೆ ಈಗಾಗಲೇ ಸಹಿ ಮಾಡಿದ್ದೇನೆ' ಎಂದು ಹೇಳಿದ್ದಾರೆ.

'ಬೆಳಗಾವಿ ಪೊಲೀಸರು ಪರಿಸ್ಥಿತಿ ಮನವರಿಗೆ ಮಾಡಿಕೊಟ್ಟಿದ್ದಾರೆ. ದೇವರ ರೂಪದಲ್ಲಿ ಬಂದು ಕಾಪಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಸುತ್ತೇನೆ. ಕಾನೂನಿನಿಂದ ನಮಗೆ ಸಹಾಯ ದೊರೆತಿದೆ. ಮನಗೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಮಾಹಿತಿ ಸಂಗ್ರಹಿಸಬೇಕು' ಎಂದಿದ್ದಾರೆ.


Click it and Unblock the Notifications











