ಸಿನಿಮಾವನ್ನು ಮೀರಿಸುವಂತಿದೆ ಈ ಕಿರುಚಿತ್ರದ ಆಕ್ಷನ್ ಗಳು
ಸಿನಿಮಾಗೆ ಹೋಲಿಕೆ ಮಾಡಿದರೆ, ಕಿರುಚಿತ್ರಗಳ ದೃಶ್ಯ ವೈಭವ ಕಡಿಮೆ ಇರುತ್ತದೆ. ಆದರೆ, ಕೆಲವು ಕಿರುಚಿತ್ರಗಳು ಸಿನಿಮಾಗಳಿಗೆ ಪೈಪೋಟಿ ನೀಡುವಂತೆ ಇರುತ್ತವೆ.
ಇದೀಗ ಬಂದಿರುವ 'K' ಎಂಬ ಕಿರುಚಿತ್ರದ ಸಾಹಸ ದೃಶ್ಯಗಳ ರೀತಿಯಲ್ಲಿ ಇದೆ. ಇಂಡಿಯನ್ ಆರ್ಮಿಗೆ ಅರ್ಪಿಸಿರುವ ಈ ಕಿರುಚಿತ್ರದಲ್ಲಿ ಫೈಟ್ಸ್ ಗಳು ಹೈಲೈಟ್ ಆಗಿವೆ. ತಾಯಿಯ ಶಕ್ತಿಯನ್ನು ಈ ಕಿರುಚಿತ್ರ ತೋರಿಸುತ್ತಿದೆ.
ಒಂದು ಕಡೆ ಮಗುವಿನ ಆರೈಕೆ ಮಾಡುತ್ತಿರುವ ತಾಯಿ ಹೇಗೆ ಶತ್ರುಗಳ ವಿರುದ್ಧ ಹೋರಾಟ ಮಾಡುತ್ತಾಳೆ ಎನ್ನುವುದು ಕಿರುಚಿತ್ರದಲ್ಲಿ ಹೇಳಲಾಗಿದೆ. ಪ್ರಮುಖವಾಗಿ ಕೊನೆಯಲ್ಲಿ ಬರುವ ದೃಶ್ಯ ಮನಸ್ಸು ಮುಟ್ಟುತ್ತದೆ. ವೇದ ಕೃಷ್ಣ, ಐಶ್ವರ್ಯ ಮೆನನ್, ರೋಷನ್ ಚಂದ್ರ, ವಿಷ್ಣು ಲಾಲ್ ಕಿರುಚಿತ್ರದಲ್ಲಿ ನಟಿಸಿದ್ದಾರೆ.

ಪ್ರಣವ್ ಕೃಷ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ವಿಷ್ಣು ಪ್ರಸಾದ್ ಕ್ಯಾಮರಾ, ಪ್ರೇಮ್ ಸಾಯಿ ಮುಕುಂದನ್ ಎಡಿಟಿಂಗ್, ಇಲ್ವಿನ್ ಜೇಮ್ಸ್ ಮತ್ತು ಜಯಪ್ರಕಾಶ್ ಜೆ ಸಂಗೀತ, ಅನೂಪ್ ಕೆ ಬೇಬಿ ಕಲಾ ನಿರ್ದೇಶನ, ಸ್ಯಾಂಡಿ ಸುರೇಂದರನ್ ಮೇಕಪ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
ಯೂ ಟ್ಯೂಬ್ ನಲ್ಲಿ 'K' ಕಿರುಚಿತ್ರ 15 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. 12 ಮೋಷನ್ ಸಿನಿಮಾಸ್ ಈ ಕಿರುಚಿತ್ರದ ನಿರ್ಮಾಣ ಮಾಡಿದೆ.


Click it and Unblock the Notifications











