twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಲೇಖಕರಿಗೆ ನಿರ್ಮಾಪಕ ಕೆ ಮಂಜು ಅವರಿಂದ ಭರ್ಜರಿ ಅವಕಾಶ

    |

    ಲೇಖಕರು ಸಿನಿಮಾ ಪ್ರಪಂಚದ ಬೆನ್ನೆಲುಬು. ಲೇಖಕನೊಬ್ಬ ಸಿನಿಮಾ ಇಲ್ಲದೇ ಜೀವಿಸಬಹುದು. ಆದರೆ ಸಿನಿಮಾಗಳು ಲೇಖಕನಿಲ್ಲದೆ ಬದುಕುವುದಿಲ್ಲ. ನೂರಾರು ಕನಸುಗಳನ್ನಿಟ್ಟುಕೊಂಡು ಚಿತ್ರರಂಗಕ್ಕೆ ಬರುವ ಲೇಖಕರಿಗೆ ಅವಕಾಶಗಳು ಕಮ್ಮಿ. ಅಂತಹ ಪ್ರತಿಭೆಗಳಿಗೆ ನಿರ್ಮಾಪಕ ಕೆ ಮಂಜು ಒಂದು ಸುವರ್ಣಾವಕಾಶ ನೀಡಿದ್ದಾರೆ.

    ಹೌದು, ಕಳೆದ ಎರಡು ದಶಕಗಳಿಂದ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಕೆ ಮಂಜು ಸ್ಕ್ರಿಪ್ಟ್ ಬರೆಯುವ ಪ್ರತಿಭೆಗಳಿಗೆ ಹೊಸ ಯೋಜನೆ ಹಮ್ಮಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸೃಜನಶೀಲ ಹೊಸ ಲೇಖಕರನ್ನು ಪರಿಚಯಿಸುವ ಸಾಹಸಕ್ಕೆ ಮುಂದಾಗಿದ್ದಾರೆ.

    ''ಹೊಸ ನಿರ್ಮಾಪಕರು ಸಿನಿಮಾ ಮಾಡುವುದು ವೇಸ್ಟ್'' : ಕೆ ಮಂಜು ಗುಡುಗು''ಹೊಸ ನಿರ್ಮಾಪಕರು ಸಿನಿಮಾ ಮಾಡುವುದು ವೇಸ್ಟ್'' : ಕೆ ಮಂಜು ಗುಡುಗು

    ಈ ನಿಟ್ಟಿನಲ್ಲಿ 'ಕೆ ಮಂಜು ಸ್ಕ್ರಿಪ್ಟ್' ಯೋಜನೆ ಹೆಸರಿನಲ್ಲಿ ಲೇಖಕರಿಂದ ಸ್ವರಚಿತ ಸ್ಕ್ರಿಪ್ಟ್ ಗಳನ್ನು ಆಹ್ವಾನಿಸಲಾಗುತ್ತಿದೆ. ಈ ಸ್ಕ್ರಿಪ್ಟ್ ಗಳನ್ನು ನಿರ್ದೇಶಕರು ಮತ್ತು ನಿರ್ಮಾಪಕರನ್ನು ಒಳಗೊಂಡ ತಜ್ಞರ ತಂಡವು ಪರಿಶೀಲನೆ ನಡೆಸುತ್ತದೆ. ಅತ್ಯುತ್ತಮ ಎನಿಸಿದ ಸ್ಕ್ರಿಪ್ಟ್ ಗಳನ್ನು ಕೆ ಮಂಜು ಅವರು ಖರೀದಿಸಲಿದ್ದಾರೆ.

    K Manju gives chance to script writers

    ನಿಬಂಧನೆಗಳು

    1 ಕೇವಲ ಪ್ರೇಮ. ಪ್ರೇಮ-ಹಾಸ್ಯಕಥೆಗಳು ಯೋಜನೆ-1ರಲ್ಲಿ ಇರುತ್ತವೆ.

    2 ಕೇವಲ ಮೂಲಕೃತಿಯನ್ನು ಮಾತ್ರವೇ ಸಲ್ಲಿಸಬೇಕು. ಯಾವುದೇ ಕಾದಂಬರಿ, ನಾಟಕ, ಸಿನಿಮಾ ಆಧರಿಸಿದ ಅಥವಾ ಇನ್ನಾವುದೇ ರೀತಿಯಿಂದಲೂ ಅವಲಂಬಿತವಾದ ಕಥೆಗಳು ಸ್ವೀಕಾರರ್ಹವಲ್ಲ.

    3 ಚಿತ್ರಕತೆಯ ಸಾರಾಂಶ ರೂಪದ ಎರಡು ಪುಟಗಳಷ್ಟಿರಬೇಕು ಮತ್ತು ಇದನ್ನು ಸ್ಕ್ರಿಪ್ಟ್ ನ ಜೊತೆ ಲಗತ್ತಿಸಿರಬೇಕು. ಸ್ಕ್ರಿಪ್ಟ್ ನಲ್ಲಿ ಸಂಭಾಷಣೆ ಕಡ್ಡಾಯವೇನಲ್ಲ.

    4 ಚಿತ್ರಕಥೆಯನ್ನು ಟೈಪ್ ಮಾಡಿಸಿರಬೇಕು ಮತ್ತು ಸ್ಕ್ರಿಪ್ಟ್ ವಿನ್ಯಾಸಕ್ಕೆ ಒಳಪಟ್ಟಿರಬೇಕು. ಕೈ ಬರಹದ ಸ್ಕ್ರಿಪ್ಟ್ ಗಳನ್ನು ಸ್ವೀಕರಿಸುವುದಿಲ್ಲ ಚಿತ್ರಕಥೆ ಕನ್ನಡದಲ್ಲೇ ಇರುವುದು ಕಡ್ಡಾಯ.

    ನನ್ನ ತಂದೆಗೆ ವಿಷ್ಣು ಸರ್ ಹೇಗೋ, ನನಗೆ ಡಿ ಬಾಸ್ ಹಾಗೆ: ನಿರ್ಮಾಪಕನ ಪುತ್ರನನ್ನ ತಂದೆಗೆ ವಿಷ್ಣು ಸರ್ ಹೇಗೋ, ನನಗೆ ಡಿ ಬಾಸ್ ಹಾಗೆ: ನಿರ್ಮಾಪಕನ ಪುತ್ರ

    5 2019ರ ಜುಲೈ 15 ಚಿತ್ರಕತೆ ಸಲ್ಲಿಕೆಗೆ ಕಡೆ ದಿನ.

    6 ತಜ್ಞರ ತಂಡವು ಶಿಫಾರಸು ಮಾಡಿದ ಚಿತ್ರಕಥೆಗಳನ್ನು ಮಾತ್ರವೇ ಆಯ್ಕೆ ಮಾಡಲಾಗುವುದು.

    7 ಆಯ್ಕೆಯಾದ ಪ್ರತಿ ಚಿತ್ರಕತೆಗೆ ಕೆ ಮಂಜು ಫಿಲಂಸ್ ಅವರು 1 ಲಕ್ಷ ಮೊತ್ತವನ್ನು ನೀಡುವರು.

    8 ಸಮಾಧಾನಕರವಲ್ಲದ ಚಿತ್ರಕಥೆಗಳನ್ನು ಲೇಖಕರಿಗೆ ಹಿಂದಿರುಗಿಸಲಾಗುವುದು, ಇದಕ್ಕಾಗಿ ಯಾವುದೇ ಹಣ ನೀಡಲಾಗುವುದಿಲ್ಲ.

    9 ಪ್ರತಿಗಳನ್ನು ರಿಜಿಸ್ಟರ್ಡ್ ಅಂಚೆ ಮುಖಾಂತರವೇ ಕಳುಹಿಸಬೇಕು, ಅನಗತ್ಯವಾದ ಕರೆಗಳಿಗೆ ಅವಕಾಶವಿಲ್ಲ.

    10 ಆಯ್ಕೆಯಾದ ಚಿತ್ರಕತೆಗಳ ಹಕ್ಕು ಸ್ವಾಮ್ಯ ಕೆ ಮಂಜು ಫಿಲಂಸ್ ಅವರ ಬಳಿಯೇ ಇರುತ್ತದೆ.

    11 ಆಯ್ಕೆಯಾಗದ ಚಿತ್ರಕಥೆಗಳ ಮೇಲೆ ಕೆ ಮಂಜು ಫಿಲಂಸದ ಅವರು ಹಕ್ಕು ಸ್ವಾಮ್ಯತೆ ಸಾಧಿಸುವುದಿಲ್ಲ.

    12 ಒಬ್ಬರು ಒಂದೇ ಸ್ಕ್ರಿಪ್ಟ್ ಸಲ್ಲಿಸುವ ಅವಕಾಶವಿದೆ.

    13 ಸಂದರ್ಶನದ ಸಮಯ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2.

    14 ಕಥೆಗಳನ್ನ ಕಳುಹಿಸಬೇಕಾದ ವಿಳಾಸ : ಕೆ ಮಂಜು, ನಂ 26, 7ನೇ ಮುಖ್ಯರಸ್ತೆ, 4ನೇ ಬ್ಲಾಕ್ ಜಯನಗರ, ಬೆಂಗಳೂರು.

    English summary
    One of the Biggest producer of kannada industry Dr K Manju starts a programme to encourage original script writing for Kannada films.
    Thursday, June 20, 2019, 15:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X