For Quick Alerts
  ALLOW NOTIFICATIONS  
  For Daily Alerts

  ಅಂಬಿ ಪುತ್ರ ಅಭಿಷೇಕ್ ಹಿಂದಿಕ್ಕಿದ ಕೆ ಮಂಜು ಪುತ್ರ ಶ್ರೇಯಸ್

  |

  ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಕಳೆದ ವರ್ಷ ಸ್ಯಾಂಡಲ್ವುಡ್ ಇಂಡಸ್ಟ್ರಿ ಪ್ರವೇಶಿಸಿದ್ದರು. ನಾಗಶೇಖರ್ ನಿರ್ದೇಶನದ ಅಮರ್ ಚಿತ್ರದ ಮೂಲಕ ತೆರೆಮೇಲೆ ಬಂದಿದ್ದರು. ಈ ಸಿನಿಮಾ ನಿರೀಕ್ಷೆಯ ಮಟ್ಟ ತಲುಪದಿದ್ದರೂ ಅಭಿಷೇಕ್ ನಟನೆಯಿಂದ ಮೆಚ್ಚುಗೆ ಗಳಿಸಿಕೊಂಡಿದ್ದರು.

  ಅದೇ ವರ್ಷ ಕನ್ನಡ ಇಂಡಸ್ಟ್ರಿಗೆ ಬಂದ ಮತ್ತೊಬ್ಬ ಯುವ ನಟ ಶ್ರೇಯಸ್. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಗುರುದೇಶಪಾಂಡೆ ನಿರ್ದೇಶನದ ಪಡ್ಡೆ ಹುಲಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಈ ಚಿತ್ರವೂ ಅಷ್ಟು ದೊಡ್ಡ ಸದ್ದು ಮಾಡದೇ ಹೋದರು, ವೈಯಕ್ತಿಕವಾಗಿ ಶ್ರೇಯಸ್ ಗಮನ ಸೆಳೆದರು.

  ಫಿಲ್ಮಿಬೀಟ್ Poll ಆರಂಭ: ನಿಮ್ಮ ನೆಚ್ಚಿನ ನಟ-ನಟಿ-ಸಿನಿಮಾ ಯಾವುದು ವೋಟ್ ಮಾಡಿಫಿಲ್ಮಿಬೀಟ್ Poll ಆರಂಭ: ನಿಮ್ಮ ನೆಚ್ಚಿನ ನಟ-ನಟಿ-ಸಿನಿಮಾ ಯಾವುದು ವೋಟ್ ಮಾಡಿ

  ಇವರಿಬ್ಬರಲ್ಲಿ ಯಾರು ಕಳೆದ ವರ್ಷದ ಅತ್ಯುತ್ತಮ ನವನಟ ಎಂಬ ಪೋಲ್ ನಲ್ಲಿ ಅಭಿಷೇಕ್ ಅವರಿಗಿಂತ ಶ್ರೇಯಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಂಕಿ ಅಂಶಗಳು ವಿವರ ಮುಂದೆ ಓದಿ....

  ಮುನ್ನಡೆಯಲ್ಲಿ ಕೆ ಮಂಜು ಪುತ್ರ

  ಮುನ್ನಡೆಯಲ್ಲಿ ಕೆ ಮಂಜು ಪುತ್ರ

  ಫಿಲ್ಮಿಬೀಟ್ ಕನ್ನಡ ಆಯೋಜನೆ ಮಾಡಿರುವ 'ಬೆಸ್ಟ್ ಆಫ್ ಸ್ಯಾಂಡಲ್ವುಡ್ 2019' ಪೋಲ್ ನ ಅತ್ಯುತ್ತನ ನವ ನಟ ವಿಭಾಗದಲ್ಲಿ ಕೆ ಮಂಜು ಪುತ್ರ ಶ್ರೇಯಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಂಬರೀಶ್ ಮಗ ಅಭಿಷೇಕ್ ಅವರಿಗಿಂತ 8646 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

  ಫಿಲ್ಮಿಬೀಟ್ ಪೋಲ್: ದರ್ಶನ್-ಪುನೀತ್ ಅಭಿಮಾನಿಗಳ ನಡುವೆ ಭಾರಿ ಪೈಪೋಟಿಫಿಲ್ಮಿಬೀಟ್ ಪೋಲ್: ದರ್ಶನ್-ಪುನೀತ್ ಅಭಿಮಾನಿಗಳ ನಡುವೆ ಭಾರಿ ಪೈಪೋಟಿ

  ಅಭಿಷೇಕ್ ಗೆ ಸಿಕ್ಕಿರುವ ಮತ ಎಷ್ಟು?

  ಅಭಿಷೇಕ್ ಗೆ ಸಿಕ್ಕಿರುವ ಮತ ಎಷ್ಟು?

  'ಪಡ್ಡೆಹುಲಿ' ಚಿತ್ರದ ನಾಯಕ ಶ್ರೇಯಸ್ ಗೆ ಇದುವರೆಗೂ 35916 ಮತಗಳ ಸಿಕ್ಕಿದ್ರೆ, ಅಮರ್ ಚಿತ್ರದ ನಾಯಕ ಅಭಿಷೇಕ್ ಗೆ 27270 ಮತ ಬಂದಿದೆ.

  ರೇಸ್ ನಲ್ಲಿ ಯಾರೆಲ್ಲಾ ಇದ್ದಾರೆ?

  ರೇಸ್ ನಲ್ಲಿ ಯಾರೆಲ್ಲಾ ಇದ್ದಾರೆ?

  ಶ್ರೇಯಸ್, ಅಭಿಷೇಕ್ ಹೊರತುಪಡಿಸಿ ಮತ್ತಷ್ಟು ಪ್ರತಿಭಾನ್ವಿತ ಯುವನಟರು ರೇಸ್ ನಲ್ಲಿದ್ದಾರೆ. ಬಜಾರ್ ಚಿತ್ರದ ನಟ ಧನ್ವಿರ್, ಕಿಸ್ ಚಿತ್ರದ ನಟ ವಿರಾಟ್, ಫೇಸ್ ಟು ಫೇಸ್ ಚಿತ್ರದ ನಟ ರೋಹಿತ್ ಭಾನುಪ್ರಕಾಶ್, ಫ್ಯಾನ್ ಚಿತ್ರದ ನಟ ಆರ್ಯನ್ ಗೌಡ, ಗಂಟುಮೂಟೆ ಚಿತ್ರದ ನಟ ನಿಶ್ಚಿತ್ ಕರೋಡಿ ಪಟ್ಟಿಯಲ್ಲಿದ್ದಾರೆ.

  ಜನವರಿ ಅಂತ್ಯದವರೆಗೂ ವೋಟಿಂಗ್ ಇದೆ

  ಜನವರಿ ಅಂತ್ಯದವರೆಗೂ ವೋಟಿಂಗ್ ಇದೆ

  ನಿಮ್ಮ ನೆಚ್ಚಿನ ಯುವನಟರನ್ನು ಆಯ್ಕೆ ಮಾಡಲು ಇನ್ನೂ ನಿಮಗೆ ಅವಕಾಶ ಇದೆ. ಜನವರಿ ಅಂತ್ಯದವರೆಗೂ ವೋಟಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇಲ್ಲಿಯವರೆಗೂ ಶ್ರೇಯಸ್ ಮತ್ತು ಅಭಿಷೇಕ್ ನಡುವೆ ಭಾರಿ ಪೈಪೋಟಿ ನಡೆದಿದ್ದು, ದೊಡ್ಡ ಸಂಖ್ಯೆಯ ಅಂತರ ಕಾಯ್ದುಕೊಂಡಿದ್ದಾರೆ ಶ್ರೇಯಸ್.

  ಕ್ಲಿಕ್ ಮಾಡಿ

  English summary
  Producer K Manju son Shreyas takes lead in best debutant section at filmibeat kannada polls. abhishek ambarish stands in second place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X