ನಿರ್ಮಾಪಕ ಕೆ ಮಂಜುಗೆ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ

By Rajendra

Producer K Manju
ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಆಕಾಂಕ್ಷಿಗಳಲ್ಲಿ ನಿರ್ಮಾಪಕ ಕೆ ಮಂಜು ಅವರು ಪ್ರಮುಖರು. ತಮ್ಮ ಸ್ವಸ್ಥಳ ತುರುವೇಕೆರೆಯಿಂದ ಅವರು ಕಣಕ್ಕಿಳಿಯುತ್ತಿರುವುದು ಗೊತ್ತೇ ಇದೆ. ಆದರೆ ಯಾವ ಪಕ್ಷದಿಂದ ಎಂಬುದು ಇನ್ನೂ ನಿಗೂಢವಾಗಿದೆ.

ಏತನ್ಮಧ್ಯೆ ಗಂಡುಗಲಿ ಮಂಜು ಅವರೇ ಹೇಳುವಂತೆ ತಮಗೆ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ ಎಂದಿದ್ದಾರೆ. ಈ ಹಿಂದೊಮ್ಮೆ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದಿಂದ (ಕೆಜೆಪಿ) ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು.

ಮಂಜು ಅವರು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಸಂಪರ್ಕಿಸಿ ಈ ಬಗ್ಗೆ ಮಾತುಕತೆಯೂ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಕಾಂಗ್ರೆಸ್ ಪಕ್ಷದ ಟಿಕೆಟ್ ಗ್ಯಾರಂಟಿ ಎಂಬ ಸುದ್ದಿ ಹರಿದಾಡುತ್ತಿದೆ.

ಕೆ.ಮಂಜು ಅವರು ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಸದ್ಯಕ್ಕೆ ಊಹಾಪೋಹಗಳಲ್ಲೇ ಇದೆ. ಅದು ಖಚಿತವಾಗುವ ತನಕ ಏನೂ ಹೇಳುವಂತಿಲ್ಲ. ಆದರೆ ಮಂಜು ಮಾತ್ರ ತಮಗೆ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ ಎಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ತುರುವೇಕೆರೆ ಕ್ಷೇತ್ರದಿಂದ ಕೊಬ್ರಿ ಮಂಜು ಕಣಕ್ಕಿಳಿದರೆ ಬಿಜೆಪಿ ಪಕ್ಷವೇನು ಕೈಕಟ್ಟಿ ಕೂರುವುದಿಲ್ಲ. ನವರಸ ನಾಯಕ ಜಗ್ಗೇಶ್ ಅವರನ್ನು ಮಂಜು ವಿರುದ್ಧ ಕಣಕ್ಕಳಿಸಲಿದೆ. ಸದ್ಯಕ್ಕೆ ಜೆಡಿ(ಎಸ್) ಭದ್ರಕೋಟೆಯಾಗಿರುವ ತುರುವೇಕೆರೆ ಕ್ಷೇತ್ರದಲ್ಲಿ ಎಂ.ಟಿ.ಕೃಷ್ಣಪ್ಪ ವಿರುದ್ಧ ಸೆಣೆಸುವುದು ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ಬರಿಗೂ ಸವಾಲಿನ ಪ್ರಶ್ನೆ. (ಏಜೆನ್ಸೀಸ್)

More from Filmibeat

English summary
Kannada films producer K Manju said to have got Congress party ticket from Turvekere ( Tumkur District) . Earlier it is said that, he is likely to join Karnataka Janata Party (KJP) headed by former Chief Minister B.S. Yeddyurappa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X