For Quick Alerts
  ALLOW NOTIFICATIONS  
  For Daily Alerts

  ''ಹೊಸ ನಿರ್ಮಾಪಕರು ಸಿನಿಮಾ ಮಾಡುವುದು ವೇಸ್ಟ್'' : ಕೆ ಮಂಜು ಗುಡುಗು

  |

  ''ಹೊಸ ನಿರ್ಮಾಪಕರು ಚಿತ್ರರಂಗಕ್ಕೆ ಬರಬೇಡಿ. ಇಲ್ಲಿ ಬಂದು ಸುಮ್ಮನೆ ನಿಮ್ಮ ದುಡ್ಡು ಹಾಳು ಮಾಡಿಕೊಳ್ಳಬೇಡಿ. ಇಲ್ಲಿ ಪ್ರತಿಯೊಂದಕ್ಕೂ ದಂಧೆ ನಡೆಯುತ್ತದೆ.'' ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು ನಿರ್ಮಾಪಕ ಕೆ ಮಂಜು.

  ನಿರ್ಮಾಪಕ ಕೆ ಮಂಜು ಕನ್ನಡಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ವರ್ಷಗಳಿಂದ ಇದ್ದಾರೆ. ಹೀಗಿದ್ದರೂ ಅವರಿಗೆ ಅವರ ಮಗನ ಸಿನಿಮಾ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಆಗುತ್ತಿಲ್ಲವಂತೆ.

  Paddehuli Review: ಸೋತು ಗೆದ್ದ ರಾಕ್ ಸ್ಟಾರ್

  ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ 'ಪಡ್ಡೆ ಹುಲಿ' ಸಿನಿಮಾ ಕಳೆದ ಶುಕ್ರವಾರ ಬಿಡುಡಗೆಯಾಗಿದ್ದು, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಗಳು ಹಾಗೂ ಬುಕ್ ಮೈ ಶೋ ದಿಂದ ಸಿನಿಮಾಗೆ ತೊಂದರೆ ಆಗುತ್ತಿದೆಯಂತೆ. ಚಿತ್ರಕ್ಕೆ ಆಗುತ್ತಿರುವ ಸಮಸ್ಯೆ ಬಗ್ಗೆ ನಿರ್ಮಾಪಕ ಕೆ ಮಂಜು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಮುಂದೆ ಓದಿ...

  ನಿರ್ಮಾಪಕ ಕೆ ಮಂಜು ಬೇಸರ

  ನಿರ್ಮಾಪಕ ಕೆ ಮಂಜು ಬೇಸರ

  'ಪಡ್ಡೆಹುಲಿ' ಸಿನಿಮಾದ ಸಕ್ಸಸ್ ಮೀಟ್ ನಡೆಯುತ್ತಿತ್ತು. ಆದರೆ, ಕಾರ್ಯಕ್ರಮದಲ್ಲಿ ಸಿಹಿ ವಿಚಾರಕ್ಕಿಂತ ಬೇಸರ ಸಂಗತಿಯನ್ನೇ ಚಿತ್ರತಂಡ ಹಂಚಿಕೊಳ್ಳುವ ಪರಿಸ್ಥಿತಿ ಇತ್ತು. ನಿರ್ಮಾಪಕ ಕೆ. ಮಂಜು ತಮ್ಮ ಮಗನ ಸಿನಿಮಾಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಗುಡುಗಿದರು. ಚಿತ್ರದ ನಾಯಕ ಶ್ರೇಯಸ್, ನಿರ್ದೇಶಕ ಗುರು ದೇಶಪಾಂಡೆ ಹಾಗೂ ನಿರ್ಮಾಪಕ ರಮೇಶ್ ಸಹ ಕಾರ್ಯಕ್ರಮದಲ್ಲಿ ಇದ್ದರು.

  'ಬುಕ್ ಮೈ ಶೋ' ದಿಂದ ಅನ್ಯಾಯ

  'ಬುಕ್ ಮೈ ಶೋ' ದಿಂದ ಅನ್ಯಾಯ

  ಕೆ ಮಂಜು ಹೇಳುವ ಪ್ರಕಾರ 'ಪಡ್ಡೆ ಹುಲಿ' ಸಿನಿಮಾಗೆ ಬುಕ್ ಮೈ ಶೋ ಸರಿಯಾದ ರೇಟಿಂಗ್ ನೀಡುತ್ತಿಲ್ಲವಂತೆ. ಅಲ್ಲದೆ ರಿವ್ಯೂವನ್ನು ಕೂಡ ಹಾಕಿರಲಿಲ್ಲವಂತೆ. ಮಲ್ಟಿಪ್ಲೆಕ್ಸ್ ನಲ್ಲಿ ಅವರಿಗೆ ಬೇಕಾದಾಗ ಶೋ ಸಮಯವನ್ನು ಬದಲಿ ಮಾಡುತ್ತಿದ್ದರಂತೆ. ಬೆಳಗ್ಗೆ 9.30ಕ್ಕೆ ರಾತ್ರಿ 10 ಗೆ ಸಿನಿಮಾಗೆ ಶೋ ನೀಡಿದರೆ ಯಾರು ಬರುತ್ತಾರೆ ಎನ್ನುತ್ತಾರೆ ಕೆ ಮಂಜು.

  ಕರ್ನಾಟಕ ದಿನಪತ್ರಿಕೆಗಳಲ್ಲಿ ಕಂಡಂತೆ 'ಪಡ್ಡೆಹುಲಿ' ಚಿತ್ರದ ವಿಮರ್ಶೆ

  ಎಲ್ಲ ಸೇರಿ ಸಿನಿಮಾವನ್ನು ಕೊಲ್ಲುತ್ತಾರೆ

  ಎಲ್ಲ ಸೇರಿ ಸಿನಿಮಾವನ್ನು ಕೊಲ್ಲುತ್ತಾರೆ

  ''ಬುಕ್ ಮೈ ಶೋ ಹಾಗೂ ಚಿತ್ರಮಂದಿರದ ಮಾಲೀಕಯರು ಸೇರಿ ಸಿನಿಮಾವನ್ನು ಕೊಲ್ಲುತ್ತಾರೆ. ಬೇರೆ ಭಾಷೆಯ ಸಿನಿಮಾ ಹಾಕುವ ಉದ್ದೇಶದಿಂದ ಕನ್ನಡ ಸಿನಿಮಾ ಚೆನ್ನಾಗಿ ಇದ್ದರೂ ಎತ್ತಂಗಡಿ ಮಾಡುತ್ತಿದ್ದಾರೆ. ಈ ರೀತಿಯ ದಂಧೆ ಈಗ ಹೆಚ್ಚಾಗಿ ನಡೆಯುತ್ತಿದೆ. ಕನ್ನಡ ಸೆಂಟರ್ ನಲ್ಲಿಯೂ ಬೇರೆ ಭಾಷೆಯ ಚಿತ್ರಗಳನ್ನು ಹಾಕುತ್ತಿದ್ದಾರೆ'' ಎಂದು ಕೆ ಮಂಜು ಅಸಮಾಧಾನ ವ್ಯಕ್ತ ಪಡಿಸಿದರು.

  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ

  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ

  ''ಐಪಿಎಲ್ ಹಾಗೂ ಚುನಾವಣೆ ಇರುವ ಕಾರಣ ಕೆಲವು ಚಿತ್ರಮಂದಿರಲ್ಲಿ ಜನರು ಬರುವುದು ಕಡಿಮೆ ಆಗಿರಬಹುದು. ಆದರೆ, ಸಿನಿಮಾ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಾಗಿದ್ದರೂ ಈ ರೀತಿ ಸಿನಿಮಾವನ್ನು ತೆಗೆಯುವುದು ಸರಿಯಲ್ಲ. ಇದರ ವಿರುದ್ಧ ಸರ್ಕಾರಕ್ಕೆ ದೂರು ನೀಡುತ್ತೇನೆ.'' ಎಂದು ಕೆ ಮಂಜು ತಿಳಿಸಿದ್ದಾರೆ.

  ಹೊಸ ನಿರ್ಮಾಪಕರು ಸಿನಿಮಾ ಮಾಡುವುದು ವೇಸ್ಟ್

  ಹೊಸ ನಿರ್ಮಾಪಕರು ಸಿನಿಮಾ ಮಾಡುವುದು ವೇಸ್ಟ್

  ''ನಾನು ಈ ವರೆಗೆ 45 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ನಮ್ಮಂತರವರಿಗೆ ಹೀಗಾದರೆ ಹೊಸಬರಿಗೆ ಪರಿಸ್ತಿತಿ ಏನು. ಇಲ್ಲಿ ದೊಡ್ಡ ದಂಧೆಯೇ ಇದೆ. ಹೊಸ ನಿರ್ಮಾಪಕರು ಸಿನಿಮಾ ಮಾಡುವುದು ವೇಸ್ಟ್. ದಯವಿಟ್ಟು ಸಿನಿಮಾ ಮಾಡಿ, ನಿಮ್ಮ ಹಣವನ್ನು ಕೆದುಕೊಳ್ಳಬೇಡಿ ಎಂದು ಹೊಸ ನಿರ್ಮಾಪಕರಿಗೆ ನಾನು ಕೇಳಿಕೊಳ್ಳುತ್ತೇನೆ.'' ಎಂದು ಚಿತ್ರರಂಗದ ಪರಿಸ್ಥಿತಿಯನ್ನು ವಿವರಿಸಿದರು.

  English summary
  Kannada producer K Manju unhappy with book my show rating and multiplex show timing for his son 'Padde Huli' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X