twitter
    For Quick Alerts
    ALLOW NOTIFICATIONS  
    For Daily Alerts

    'ಸಲಗ' ದುನಿಯಾ ವಿಜಿ ಜೊತೆ ಸೇರಿದ ಟಗರು ಟೀಂ

    |

    ನಟ ದುನಿಯ ವಿಜಯ್ ತೆರೆ ಮೇಲೆ ಕಾಣಿಸಿಕೊಳ್ಳದೆ ವರ್ಷವೆ ಆಗಿದೆ. ಕಳೆದ ವರ್ಷ ರಿಲೀಸ್ ಆಗಿದ್ದ 'ಜಾನಿ ಜಾನಿ ಎಸ್ ಪಾಪ' ಚಿತ್ರದ ನಂತರ ವಿಜಿ ಚಿತ್ರಾಭಿಮಾನಿಗಳ ಮುಂದೆ ಬಂದಿಲ್ಲ. ಆದ್ರೆ ವಿಜಿ ಎರಡ್ಮೂರು ಚಿತ್ರಗಳಲ್ಲಿ ಬ್ಯುಸಿ ಇದ್ದರು. ಆ ಸಿನಿಮಾಗಳು ಸದ್ಯ ಯಾವ ಹಂತಕ್ಕೆ ಬಂದಿದೆ ಎನ್ನುವ ಮಾಹಿತಿ ಸಹ ಇಲ್ಲ.

    ಬ್ಲಾಕ್ ಕೋಬ್ರ 'ಕುಸ್ತಿ' ಚಿತ್ರದ ಮೂಲಕ ಪೈಲ್ವಾನ್ ಆಗಿ ಅಖಾಡಕ್ಕೆ ಇಳಿದಿದ್ದರು. ಈ ಸಿನಿಮಾ ಮೂಲಕ ಮಗನನ್ನು ಚಿತ್ರರಂಗಕ್ಕೆ ಎಂಟ್ರಿ ಮಾಡಿಸಿದ್ದರು. ಪೋಸ್ಟರ್ ಮೂಲಕ ಸದ್ದು ಮಾಡಿದ್ದ 'ಕುಸ್ತಿ' ಚಿತ್ರ ಕೂಡ ಕಾರಣಾಂತರಗಳಿಂದ್ದ ಅರ್ಧದಲ್ಲೆ ನಿಂತಿದೆ. ಕುಸ್ತಿಗೆ ಬ್ರೇಕ್ ಹಾಕಿ 'ಸಲಗ' ಆಗಲು ಹೊರಟಿದ್ದ ವಿಜಿಗೆ ಅಲ್ಲೂ ಅಡೆ-ತಡೆಗಳು ಎದುರಾಗಿದ್ದವು.

    ದುನಿಯಾ ವಿಜಯ್ ಗೆ ಟಕ್ಕರ್ ಕೊಡಲಿದ್ದಾರೆ ಡಾಲಿ ಧನಂಜಯ್.! ದುನಿಯಾ ವಿಜಯ್ ಗೆ ಟಕ್ಕರ್ ಕೊಡಲಿದ್ದಾರೆ ಡಾಲಿ ಧನಂಜಯ್.!

    ರಘು ಶಿವಮೊಗ್ಗ ನಿರ್ದೇಶನದಲ್ಲಿ ಮೂಡಿ ಬರಬೇಕಿದ್ದ ಸಲಗ ಪ್ರಾರಂಭದಲ್ಲಿ ನಿಂತುಹೋಗಿತ್ತು. ಕುಸ್ತಿಯನ್ನು ಮಧ್ಯದಲ್ಲೆ ನಿಲ್ಲಿಸಿ ಸಲಗ ಕೈಗೆತ್ತಿಕೊಂಡಿದ್ದ ರಘು ಸಿನಿಮಾದಿಂದ ಹೊರಬಂದಿದ್ದಾರೆ. ವಿವಾದಗಳ ಮೂಲಕವೆ ಸದ್ದು ಮಾಡುತ್ತಿದ್ದ ವಿಜಿ ಈಗ ಏನ್ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆದ್ರೀಗ ಬದಲಾದ ನಿರ್ದೇಶಕ ಮತ್ತು ನಿರ್ಮಾಪಕರೊಂದಿಗೆ ವಿಜಿ ಸಲಗ ಆಗಿ ಬರುತ್ತಿದ್ದಾರೆ. ಮುಂದೆ ಓದಿ..

    ಸಲಗ ಚಿತ್ರಕ್ಕೆ ಕೆ ಪಿ ಶ್ರೀಕಾಂತ್ ನಿರ್ಮಾಣ

    ಸಲಗ ಚಿತ್ರಕ್ಕೆ ಕೆ ಪಿ ಶ್ರೀಕಾಂತ್ ನಿರ್ಮಾಣ

    ದುನಿಯ ವಿಜಿ ಅಭಿನಯದ 'ಸಲಗ' ಚಿತ್ರಕ್ಕೆ ಕೆ ಪಿ ಶ್ರೀಕಾಂತ್ ಬಂಡವಾಳ ಹೂಡುತ್ತಿದ್ದಾರೆ. 'ಸಲಗ' ಸಿನಿಮಾ ಪ್ರಾರಂಭದಲ್ಲೆ ನಿಂತು ಹೋಗಿತ್ತು. ಚಿತ್ರಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಫೋಟೋ ಶೂಟ್ ಕೂಡ ಮಾಡಿ ಮುಗಿಸಿದ್ದ 'ಸಲಗ' ಟೀಂ ಚಿತ್ರವನ್ನು ಅರ್ಧದಲ್ಲೆ ನಿಲ್ಲಿಸಿತ್ತು. ಆದ್ರೀಗ ಟಗರು ಖ್ಯಾತಿಯ ನಿರ್ಮಾಪಕ ಕೆ ಪಿ ಶ್ರೀಕಾಂತ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಮತ್ತೆ ಪ್ರಾರಂಭ ಮಾಡಿದ್ದಾರೆ.

    'ಸಲಗ' ನಿರ್ದೇಶಕ ಚೇಂಜ್, ವಿಜಿ ಮುಂದಿನ ಸಿನಿಮಾನೂ ಚೇಂಜ್'ಸಲಗ' ನಿರ್ದೇಶಕ ಚೇಂಜ್, ವಿಜಿ ಮುಂದಿನ ಸಿನಿಮಾನೂ ಚೇಂಜ್

    ಸಲಗ ಚಿತ್ರದಲ್ಲಿ ಟಗರು ಟೀಂ

    ಸಲಗ ಚಿತ್ರದಲ್ಲಿ ಟಗರು ಟೀಂ

    ದುನಿಯಾ ವಿಜಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 'ಸಲಗ' ಚಿತ್ರದಲ್ಲಿ ಬಹುತೇಕ 'ಟಗರು' ಚಿತ್ರದಲ್ಲಿ ಕೆಲಸ ಮಾಡಿದ್ದವರೆ ಇರಲಿದ್ದಾರೆ. ಕೆ ಪಿ ಶ್ರೀಕಾಂತ್ ಬಂಡವಾಳ ಹೂಡಿದ್ರೆ, 'ಟಗರು' ಚಿತ್ರದ ಸಹ ನಿರ್ದೇಶಕ ಅಭಿ, ಸಂಗೀತ ನಿರ್ದೇಶಕ ಚರಣ್ ರಾಜ್, ಸಂಭಾಷಣೆ ಬರೆದಿದ್ದ ಮಾಸ್ತಿ 'ಸಲಗ' ಚಿತ್ರದಲ್ಲೂ ಮುಂದುವರೆಯಲಿದ್ದಾರೆ. ಕಳೆದ ವರ್ಷ 'ಟಗರು' ಅಂತ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದ ಈ ಟೀಂ ಈ ವರ್ಷದಲ್ಲಿ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಡುವ ತಯಾರಿಯಲ್ಲಿದ್ದಾರೆ.

    ವಿಜಿಗೆ ವಿಲನ್ ಆದ ಧನಂಜಯ್

    ವಿಜಿಗೆ ವಿಲನ್ ಆದ ಧನಂಜಯ್

    'ಸಲಗ'ನ ಜೊತೆ ಡಾಲಿ ಧನಂಜಯ್ ಫೈಟ್ ಮಾಡಲಿದ್ದಾರೆ. 'ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಟಕ್ಕರ್ ಕೊಟ್ಟಿದ್ದ ಧನಂಜಯ್ 'ಸಲಗ' ಚಿತ್ರದಲ್ಲಿ ದುನಿಯಾ ವಿಜಿ ವಿರುದ್ಧ ತೊಡೆತಟ್ಟಲಿದ್ದಾರೆ. ಧನಂಜಯ್ ಜೊತೆಗೆ 'ಟಗರು' ಚಿತ್ರದಲ್ಲಿ ಕಾಕ್ರೋಚ್ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಸುಧಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ವಿಜಯ್ ದುನಿಯಾದಲ್ಲಿ ಸ್ನೇಹ, ಪ್ರೀತಿ ಶಕ್ತಿ ಮತ್ತು ಭಕ್ತಿ..!ವಿಜಯ್ ದುನಿಯಾದಲ್ಲಿ ಸ್ನೇಹ, ಪ್ರೀತಿ ಶಕ್ತಿ ಮತ್ತು ಭಕ್ತಿ..!

    ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಸಿನಿಮಾ

    ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಸಿನಿಮಾ

    ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು 'ಸಲಗ' ಸಿನಿಮಾ ಕತೆ ತಯಾರಾಗಿದೆಯಂತೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಜೊತೆಗೆ ಭೂಗತ ಲೋಕದ ಬಗ್ಗೆಯು ಚಿತ್ರದಲ್ಲಿರಲಿದೆಯಂತೆ. ವಿಶೇಷ ಅಂದ್ರೆ 'ಟಗರು' ಚಿತ್ರದಲ್ಲಿ ಕಾಣಿಸಿದ ರಾ ಫೀಲ್ 'ಸಲಗ' ಚಿತ್ರದಲ್ಲೂ ಸಿಗಲಿದೆ. ಬಹುತೇಕ 'ಟಗರು' ಚಿತ್ರತಂಡವೆ ಮುಂದುವರೆಯುತ್ತಿರುವುದರಿಂದ 'ಸಲಗ' ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

    ಮುಂದಿನ ತಿಂಗಳು ಸಿನಿಮಾಗೆ ಮುಹೂರ್ತ

    ಮುಂದಿನ ತಿಂಗಳು ಸಿನಿಮಾಗೆ ಮುಹೂರ್ತ

    ಸದ್ಯ ಚಿತ್ರದ ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕ, ಸಂಭಾಷಣೆಗಾರ ಕೆಲವು ತಂತ್ರಜ್ಞನ ಬಗ್ಗೆ ಬಹಿರಂಗ ಪಡಿಸಿರುವ 'ಸಲಗ' ಟೀಂ ನಿರ್ದೇಶಕನ ಬಗ್ಗೆ ಮಾಹಿತಿ ನೀಡಿಲ್ಲ. ಆದ್ರೆ ಇನ್ನೊಂದು ವಾರದಲ್ಲೆ ನಿರ್ದೇಶಕನ ಬಗ್ಗೆ ಮಾಹಿತಿ ನೀಡಲಿದ್ದಾರಂತೆ. ಮುಂದಿನ ತಿಂಗಳು ಮೊದಲ ವಾರದಲ್ಲೆ ಮುಹೂರ್ತ ನಡೆಯಲಿದಂತೆ. ಮುಹೂರ್ತ ನಂತರ ಚಿತ್ರೀಕರಣ ಶುರುವಾಗಲಿದೆ.

    ರಘು ಶಿವಮೊಗ್ಗ ನಿರ್ದೇಶನ ಮಾಡಬೇಕಿದ್ದ ಸಿನಿಮಾ

    ರಘು ಶಿವಮೊಗ್ಗ ನಿರ್ದೇಶನ ಮಾಡಬೇಕಿದ್ದ ಸಿನಿಮಾ

    'ಚೂರಿಕಟ್ಟೆ' ಖ್ಯಾತಿಯ ನಿರ್ದೇಶಕ ರಘು ಶಿವಮೊಗ್ಗ 'ಸಲಗ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. 'ಸಲಗ' ಚಿತ್ರವನ್ನು ಪ್ರಾರಂಭಮಾಡಿದ್ದು ರಘು. ವಿಜಿ 'ಕುಸ್ತಿ' ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದ ರಘು 'ಕುಸ್ತಿ'ಯನ್ನು ಮುಂದಕ್ಕೆ ಹಾಕಿ 'ಸಲಗ' ಕೈಗೆತ್ತಿಕೊಂಡಿದ್ದರು. ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ ಫೋಟೋ ಶೂಟ್ ಮಾಡಿ ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಿದ್ದ ರಘು ಚಿತ್ರದಿಂದ ಹೊರನಡೆದಿದ್ದರು. 'ಸಲಗ' ಅಲ್ಲಿಗೆ ನಿಂತು ಹೋಯಿತು ಎನ್ನುವಷ್ಟೊತ್ತಿಗೆ ಕೆ ಪಿ ಶ್ರೀಕಾಂತ್ ಕೈಗೆತ್ತಿಕೊಂಡಿದ್ದಾರೆ.

    English summary
    Tagaru film fame producer K P Srikanth kick starts a Duniya Vijay starrer 'Salaga' film. salaga movie will be starting next month. Dhananjay playing the villain role in this movie.
    Tuesday, May 7, 2019, 13:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X