»   » 'ರಾಜಕುಮಾರ'ನನ್ನ ನೋಡಿ ರಿಲೀಫ್ ಆದ ಕೆ.ಎಸ್ ಈಶ್ವರಪ್ಪ

'ರಾಜಕುಮಾರ'ನನ್ನ ನೋಡಿ ರಿಲೀಫ್ ಆದ ಕೆ.ಎಸ್ ಈಶ್ವರಪ್ಪ

Posted By:
Subscribe to Filmibeat Kannada

ಮೊನ್ನೆ ತಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ 'ಬಾಹುಬಲಿ-2, ಮತ್ತು 'ನಿರುತ್ತರ' ಚಿತ್ರವನ್ನ ನೋಡಿದ್ದರು. ಈಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನ ವೀಕ್ಷಿಸಿದ್ದಾರೆ.[ಸಾವಿರ ರೂಪಾಯಿ ಕೊಟ್ಟು ಗೋಲ್ಡ್ ಕ್ಲಾಸ್ ನಲ್ಲಿ ಕೂತು 'ಬಾಹುಬಲಿ-2' ನೋಡಿದ ಸಿ.ಎಂ ಸಿದ್ದು.! ]

ಶಿವಮೊಗ್ಗದ ಭದ್ರಾವತಿಯಲ್ಲಿರುವ ವೆಂಕಟೇಶ್ವರ (ಸತ್ಯಂ) ಚಿತ್ರ ಮಂದಿರದಲ್ಲಿ 'ರಾಜಕುಮಾರ' ಪ್ರದರ್ಶನ ಕಾಣುತ್ತಿದೆ. ತಮ್ಮ ಬಿಡುವಿಲ್ಲದ ಕಾರ್ಯಗಳು, ರಾಜಕೀಯ ಜಂಜಾಟಗಳ ನಡುವೆಯೂ ಬುಧವಾರ ಕುಟುಂಬ ಸಮೇತವಾಗಿ ಈಶ್ವರಪ್ಪ ಅವರು ಸಿನಿಮಾ ನೋಡಿ ರಿಲೀಫ್ ಆಗಿದ್ದಾರೆ.

K S Eshwarappa Watched Raajakumara Movie

ಇನ್ನು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ 'ರಾಜಕುಮಾರ' ಚಿತ್ರವನ್ನ ನೋಡಿ, ಚಿತ್ರತಂಡವನ್ನು ಕರೆಸಿಕೊಂಡು ಅಭಿನಂದಿಸಿದ್ದರು.['ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!]

English summary
Karnataka BJP Leader K S Eshwarappa watched Puneeth Rajkumar Starrer Raajakumar movie With Family at Sathya Theater in Badravathi.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X