ಅನನ್ಯ ತಾರೆಯರ ಅನೂಹ್ಯ ಮಿಲನ

By Super

ಭಾವನಾತ್ಮಕವಾಗಿರುವುದು ಜಾಗತಿಕ ಪ್ರಕ್ರಿಯೆ. ಮನಸ್ಸು ಕೆಲವರಿಗಾಗಿ ತುಡಿಯುವುದು ಒಲವಿನ ವೀಣೆಯ ಶೃತಿ. ಪತ್ನಿಗಾಗಿ ಪತಿ, ಅವಳಿಗಾಗಿ ಅವನು....ಹೀಗೆ. ಆದರೆ ತಂದೆ- ತಾಯಿ ಬಗ್ಗೆ ಸುಪ್ತ ಭಾವನೆ, ಪ್ರೀತಿ ಇರುತ್ತದಲ್ಲ ಅದು ಅನನ್ಯವಾದದ್ದು. ನಮ್ಮ ಸಿನೆಮಾ ಬಿಂಬಿಸಲಿರುವುದು ಅದನ್ನೇ. ...

ಕರಣ್‌ ಜೋಹರ್‌ ಜೋಷ್‌ನಲ್ಲಿದ್ದರು. ಗುರುವಾರ ಬೆಂಗಳೂರಲ್ಲಿ ಅವರದ್ದೇ ಸೊಲ್ಲು. ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನೂ ಮೀರಿಸಬಲ್ಲ ಚಾಕಚಕ್ಯತೆ ತೋರಿರುವ ಕರಣ್‌, ತಮ್ಮ ನಿರ್ದೇಶನದ ಹೊಸ ಚಿತ್ರ ಕಭಿ ಖುಷಿ ಕಭಿ ಗಮ್‌ನ ಸಂಗೀತವನ್ನು ದೇಶಕ್ಕೆ ಕೊಟ್ಟರು. ಅಮಿತಾಬ್‌ ಹಾಗೂ ಜಯಾ ಅಪ್ಪ- ಅಮ್ಮ. ಶಾರುಖ್‌ ಖಾನ್‌, ಹೃತಿಕ್‌ ಅವರ ಮಕ್ಕಳು. ಕಾಜೋಲ್‌- ಕರೀನಾ ಈ ಇಬ್ಬರಿಗೆ ಜೋಡಿ. ಇದು ಕರಣ್‌ರ ಹೊಸ ಮೋಡಿ.

ಅಪರೂಪದ ಈ ತಾರಾಬಳಗ ಚಿತ್ರಕ್ಕೆ ಟ್ರಂಪ್‌ಕಾರ್ಡ್‌ ಆದರೆ, ಸಂಗೀತದಲ್ಲಿ ಹೊಸತನ್ನು ಕೊಡಲು ಜತಿನ್‌- ಲಲಿತ್‌ ಜೊತೆಗೆ ಆದೇಶ್‌ ಶ್ರೀವಾಸ್ತವ್‌ ಹಾಗೂ ಸಂದೇಶ್‌ ಶಾಂಡಿಲ್ಯರನ್ನೂ ಸೇರಿಸಿದ್ದಾರೆ ಕರಣ್‌. ಸೋನಿ ಮ್ಯೂಸಿಕ್‌ ಹಾಡುಗಳನ್ನು ಸುರುಳಿಗೆ ತುಂಬಿಸಿದೆ.

ಸಮಾರಂಭದಲ್ಲಿ ಕರಣ್‌ ಆಡಿದ ಚೊಕ್ಕ ಮಾತುಗಳು ಹೀಗಿವೆ...

ಲತಾ ಟೈಟಲ್‌ ಸಾಂಗ್‌ ಹಾಡಿದ್ದಾರೆ. ಅದು ಅದ್ಭುತವಾಗಿದೆ. ಸಿನಿಮಾದ ಭಾವನೆಗಳ ಮಿಡಿತ ಚಿತ್ರ ಸಂಗೀತ. ಹಾಡುಗಳಲ್ಲಿ ಅಡಗಿದೆ ಜೀವನ ಸಂದೇಶ. ಚಿತ್ರದಲ್ಲಿ ದೊಡ್ಡ ತಾರೆಯರಿದ್ದಾರೆ. ನಾವೆಲ್ಲಾ ಒಂದೇ ಕುಟುಂಬದವರಂತೆ ಕೆಲಸ ಮಾಡಿದೆವು. ನಮ್ಮ ಕುಟುಂಬದಲ್ಲಿ ನಂಬರ್‌ ಒನ್‌ ಪಟ್ಟ ಅಮಿತಾಬ್‌ ಅವರಿಗೇ ಸಲ್ಲುತ್ತದೆ. ಅವರೊಬ್ಬ ಪರಿಪೂರ್ಣ ನಟ.

ಚಿತ್ರ ನೋಡುವ ಅಪ್ಪ- ಮಕ್ಕಳು ತಮ್ಮ ಆಂತರ್ಯದಲ್ಲಿನ ಪ್ರೀತಿಗೆ ಮತ್ತೆ ಚಾಲನೆ ಕೊಡುವರೆಂಬುದು ನಮ್ಮ ಬಲವಾದ ನಂಬುಗೆ. ಅದು ಅಪ್ಪ- ಅಮ್ಮ ಹಾಗೂ ಮಕ್ಕಳ ನಡುವಿನ ಪ್ರೀತಿ, ಜೀವನದ ನೀತಿ. ಗ್ಲ್ಯಾಮರ್‌ಗೂ ಇಲ್ಲ ಕೊರತೆ. ಇದೆ ಸೌಂದರ್ಯ- ಹೊಳಹಿನ ಒರತೆ. ಮೌಲ್ಯಗಳು ಹಾಗೂ ಕಮರ್ಷಿಯಲ್‌ ಅಂಶಗಳ ಸಮತೋಲನ ಈ ಸಿನಿಮಾ.

ಇವನ್ನೆಲ್ಲಾ ಹೇಳಲು ಸೋನಿ ಬೆಂಗಳೂರಿಗೆ ಬಂದದ್ದಾದರೂ ಯಾತಕ್ಕೆ?!

ಸಮಾರಂಭದಲ್ಲಿ ಮಾತನಾಡಿದ ಸೋನಿ ಮ್ಯೂಸಿಕ್‌ನ ಮೇನೇಜಿಂಗ್‌ ಡೈರೆಕ್ಟರ್‌ ವಿಜಯ್‌ ಸಿಂಗ್‌, ಕರಣ್‌ ಅವರನ್ನು ಕೊಂಡಾಡಿದರು. 'ಕಭಿ ಖುಷಿ ಕಭಿ ಗಮ್‌"ನ ಸಂಗೀತ ನವನೀತ. ತಮ್ಮ ಮೊದಲ ಚಿತ್ರ 'ಕುಛ್‌ ಕುಛ್‌ ಹೋತಾ ಹೈ"ನಲ್ಲೇ ಕರಣ್‌ ಸಂಗೀತದ ಅಭಿರುಚಿ ಮೆರೆದವರು. ಆ ಸಿನಿಮಾದ 80 ಲಕ್ಷಕ್ಕೂ ಹೆಚ್ಚು ಕೆಸೆಟ್ಟುಗಳು ಜಗತ್ತಿನಾದ್ಯಂತ ಬಿಕರಿಯಾಗಿವೆ. ಅವರ ಹೊಸ ಸಿನಿಮಾ ಕೂಡ ಹಿಟ್‌ ಆಗುವುದರಲ್ಲಿ ಅನುಮಾನವಿಲ್ಲ ಎಂದರು.

ತಮ್ಮ ಕೆಸೆಟ್‌ ಕಂಪನಿಯ ಅಗ್ಗಳಿಕೆಯನ್ನು ಬಣ್ಣಿಸಿದ ಸಿಂಗ್‌, ಭಾರತದ ಎರಡನೇ ದೊಡ್ಡ ಕೆಸೆಟ್‌ ಕಂಪನಿ ತಮ್ಮದು. ಕಳೆದ ತಿಂಗಳು ಶಾರುಖ್‌ ನಿರ್ಮಾಣದ ಅಶೋಕ ಚಿತ್ರದ ಕೆಸೆಟ್ಟನ್ನು ಕಂಪನಿ ಹೊರತಂದಿದೆ. ಮೈಕೆಲ್‌ ಜಾಕ್ಸನ್‌ರ 'ಇನ್‌ವಿನ್ಸಿಬ್‌ಲ್‌" ಪೈಪ್‌ಲೈನ್‌ನಲ್ಲಿದೆ. ಚಿತ್ರನಿರ್ಮಾಣಕ್ಕೂ ನಮ್ಮ ಕಂಪನಿ ಕೈಹಾಕಲಿದ್ದು, ಮುಂದಿನ 3 ವರ್ಷಗಳಲ್ಲಿ 20 ಕೋಟಿ ರುಪಾಯಿ ಬಂಡವಾಳ ಹರಿಸಲಿದೆ ಎಂದು ಹೇಳಿದರು.

ಕೊಸರು : ಅಂದಹಾಗೆ, ಬೆಂಗಳೂರು ಈಚೆಗೆ ಸಂಗೀತ ನಗರಿಯೂ ಆಗುತ್ತಿದೆ. ವಸುಂಧರಾ ದಾಸ್‌ ತಮ್ಮ ಮೊದಲ ಪಾಪ್‌ ಆಲ್ಬಂ ಬಿಡುಗಡೆ ಮಾಡಿದ್ದು, ಆ್ಯಡಂಸ್‌ ಸಂಗೀತ ಸಂಜೆಗಾಗಿ ಟ್ರಾಫಿಕ್‌ ಜಾಮ್‌ ಆಗಿದ್ದು, ಕವಿತಾ ಕೃಷ್ಣಮೂರ್ತಿ ಹಾಗೂ ಅವರ ಪತಿ ಪಿಟೀಲು ಸುಬ್ರಹ್ಮಣ್ಯಂ ಎಲ್ಲೆಲ್ಲಿ ಸುತ್ತಿ ಬಂದರೂ ಇದೇ ನಮ್ಮೂರು ಅನ್ನುತ್ತಿರುವುದು ಬೆಂಗಳೂರೇ. ಇದೊಂದು ಸ್ವಾಗತಾರ್ಹ ಬೆಳವಣಿಗೆಯಲ್ಲವೇ?

(ಪಿಟಿಐ/ಇನ್ಫೋ ಇನ್‌ಸೈಟ್‌)

English summary
Its Kabhi Khushi Kbhi Gam : Amitabh, Sharukh, Hruthik and Kareena show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X