»   » ಇದೇ ವಾರ ತೆರೆಗೆ ಬರುತ್ತಿದೆ 'ಕಾಫಿತೋಟ' ಸಿನಿಮಾ

ಇದೇ ವಾರ ತೆರೆಗೆ ಬರುತ್ತಿದೆ 'ಕಾಫಿತೋಟ' ಸಿನಿಮಾ

Posted By:
Subscribe to Filmibeat Kannada

ಟಿ.ಎನ್.ಸೀತಾರಾಮ್ ನಿರ್ದೇಶನದ 'ಕಾಫಿತೋಟ' ಚಿತ್ರ ನಾಳೆ (ಆಗಸ್ಟ್ 18)ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. 'ಮೀರಾ ಮಾಧವ ರಾಘವ' ಚಿತ್ರದ ನಂತರ ಟಿ.ಎನ್.ಸೀತಾರಾಮ್ ಅವರು 'ಕಾಫಿತೋಟ'ಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ.

ಸಸ್ಪೆನ್ಸ್ ಥ್ರಿಲ್ಲರ್ 'ಕಾಫಿತೋಟ'ದ ನಿರ್ದೇಶಕ ಸೀತಾರಾಮ್ ಸಂದರ್ಶನ

'ಕಾಫಿತೋಟ' ಸಿನಿಮಾ ಹಲವು ವಿಷಯಗಳಿಗೆ ಕುತೂಹಲ ಮೂಡಿಸಿರುವ ಚಿತ್ರ. ಈಗಾಗಲೇ ಸಿನಿಮಾದ ಟ್ರೇಲರ್ ಸೂಪರ್ ಹಿಟ್ ಆಗಿದ್ದು, ಹಾಡುಗಳು ಕೂಡ ಎಲ್ಲರ ಗಮನ ಸೆಳೆದಿದೆ. 'ಮನ್ವಂತರ ಚಿತ್ರ' ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡು, ಅಪೇಕ್ಷ ಪುರೋಹಿತ್, ಅಚ್ಯುತ್ ಕುಮಾರ್, ರಾಹುಲ್ ಮಾಧವ ಸೇರಿದಂತೆ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ.

'Kaafi Thota' Movie will be releasing tomorrow

ನಿರ್ದೇಶನದೊಂದಿಗೆ ಚಿತ್ರದ ಲಾಯರ್ ಪಾತ್ರದಲ್ಲಿ ಸೀತಾರಾಮ್ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು ಒಂದು ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಇನ್ನೊಂದು ಹಾಡಿಗೆ ಮಿದುನ್ ಮುಕುಂದನ್ ಸ್ವರ ಸಂಯೋಜಿಸಿದ್ದಾರೆ.

'Kaafi Thota' Movie will be releasing tomorrow

ಅಂದಹಾಗೆ, ಜಯಣ್ಣ ಫಿಲಂಸ್ ಚಿತ್ರದ ವಿತರಣೆ ಮಾಡಿದ್ದು, ಗಾಂಧಿನಗರದ ಅನುಪಮ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಸಿನಿಮಾ ನಾಳೆ ರಿಲೀಸ್ ಆಗಲಿದೆ.

English summary
T.N.Seetharam's 'Kaafi Thota' Movie will be releasing tomorrow (august 18). features raghu mukherjee, radhika chetan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada