For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನ ಮುಗ್ಗರಿಸಿದ 'ಕಾಲಾ': ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು.?

  By Bharath Kumar
  |

  ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರ ಸುಮಾರು 140 ಕೋಟಿ ಮೊತ್ತದಲ್ಲಿ ತಯಾರಾಗಿತ್ತು. ಹೀಗಾಗಿ, ಬಹುದೊಡ್ಡ ಬಜೆಟ್ ನಲ್ಲಿ ಸಿದ್ಧವಾಗಿದ್ದ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತು. ಲೆಕ್ಕಾಚಾರದ ಪ್ರಕಾರ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತೆ ಎಂದು ಅಂದಾಜಿಸಲಾಗಿತ್ತು.

  ಆ ಲೆಕ್ಕಾಚಾರಕ್ಕೆ ಅರ್ಧ ತಣ್ಣೀರೆರಚಿದ್ದು ಕರ್ನಾಟಕ. ಕಾವೇರಿ ವಿವಾದದಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಜನಿಕಾಂತ್ ಅವರ 'ಕಾಲಾ'ವನ್ನ ಮೊದಲ ದಿನ ಕರ್ನಾಟಕದಲ್ಲಿ ಬ್ಯಾನ್ ಮಾಡಲಾಯಿತು. ಇದರ ಪರಿಣಾಮ 'ಕಾಲಾ' ಕಲೆಕ್ಷನ್ ನಲ್ಲಿ ದೊಡ್ಡ ಮೊತ್ತಕ್ಕೆ ಕತ್ತರಿ ಬಿತ್ತು.

  ಕರ್ನಾಟಕದಲ್ಲಿ 'ಕಾಲಾ'ಗೆ ಹಿನ್ನಡೆ: ಇದರಿಂದ ಸಾಧಿಸಿದ್ದೇನು.? ಕರ್ನಾಟಕದಲ್ಲಿ 'ಕಾಲಾ'ಗೆ ಹಿನ್ನಡೆ: ಇದರಿಂದ ಸಾಧಿಸಿದ್ದೇನು.?

  ಕರ್ನಾಟಕ ಹೊರತು ಪಡೆಸಿದರೇ ಉಳಿದ ಕಡೆಯಲ್ಲೆಲ್ಲ 'ಕಾಲಾ' ಉತ್ತಮ ಗಳಿಕೆ ಕಂಡಿದೆ ಎಂದು ವಿಮ
  ರ್ಶಕರು ಹೇಳುತ್ತಿದ್ದಾರೆ. ಹಾಗಿದ್ರೆ, 'ಕಾಲಾ' ಮೊದಲ ದಿನದ ಕಲೆಕ್ಷನ್ ಎಲ್ಲಿ, ಎಷ್ಟಷ್ಟು.? ತಿಳಿಯಲು ಮುಂದೆ ಓದಿ....

  ಕರ್ನಾಟಕದಲ್ಲಿ 4-5 ಕೋಟಿ ನಷ್ಟ

  ಕರ್ನಾಟಕದಲ್ಲಿ 4-5 ಕೋಟಿ ನಷ್ಟ

  ಕರ್ನಾಟಕದಲ್ಲಿ 'ಕಾಲಾ' ಚಿತ್ರಕ್ಕೆ ಎಷ್ಟು ಲಾಭ ಬಂತು ಎನ್ನುವುದಕ್ಕಿಂತ ಎಷ್ಟು ನಷ್ಟವಾಯಿತು ಎಂಬುದಕ್ಕೆ ಉತ್ತರ ಸಿಗುತ್ತಿದೆ. ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಸುಮಾರು 4 ರಿಂದ 5 ಕೋಟಿ ಕಾಲಾ ಚಿತ್ರಕ್ಕೆ ನಷ್ಟವಾಗಿದೆ ಎನ್ನಲಾಗಿದೆ. ಕರ್ನಾಟಕದ ಒಳಗೆ ಮಾತ್ರವಲ್ಲ, ಗಡಿ ಪ್ರದೇಶಗಳಾದ ಚಾಮರಾಜನಗರ, ಆನೇಕಲ್‌, ಕೊಳ್ಳೇಗಾಲ, ಗುಂಡ್ಲುಪೇಟೆ, ಕೋಲಾರ, ಚಿಕ್ಕಬಳ್ಳಾಪುರ, ಕೆಜಿಎಫ್ ಎಲ್ಲಿಯೂ 'ಕಾಲಾ' ಬಿಡುಗಡೆಯಾಗಿಲ್ಲ. ಇದರಿಂದ ದೊಡ್ಡ ಮೊತ್ತ ನಷ್ಟ ಅನುಭವಿಸಬೇಕಾಯಿತು.

  ಕರ್ನಾಟಕದಲ್ಲಿ 'ಕಾಲಾ'ಗೆ ಹಿನ್ನಡೆ: ಇದರಿಂದ ಸಾಧಿಸಿದ್ದೇನು.?ಕರ್ನಾಟಕದಲ್ಲಿ 'ಕಾಲಾ'ಗೆ ಹಿನ್ನಡೆ: ಇದರಿಂದ ಸಾಧಿಸಿದ್ದೇನು.?

  ಮೊದಲ ದಿನ ಕಲೆಕ್ಷನ್ ಎಷ್ಟು.?

  ಮೊದಲ ದಿನ ಕಲೆಕ್ಷನ್ ಎಷ್ಟು.?

  ಇದನ್ನ ಹೊರತು ಪಡಿಸಿದರೇ ವರ್ಲ್ಡ ವೈಡ್ 'ಕಾಲಾ' ಕಲೆಕ್ಷನ್ ಎಷ್ಟಾಗಿರಬಹುದು ಎಂದು ನೋಡಿದ್ರೆ, ಸುಮಾರು 45 ರಿಂದ 50 ಕೋಟಿ ಎನ್ನಲಾಗಿದೆ. ಮೂಲಕ ರಜನಿ ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ. ಈ ಹಿಂದೆ ತೆರೆಕಂಡಿದ್ದ 'ಕಬಾಲಿ' ಸುಮಾರು 87 ಕೋಟಿ ಮೊದಲ ದಿನ ಗಳಿಸಿತ್ತು.

  ಪ್ರಾಂತ್ಯವಾರು ನೋಡುವುದಾದರೇ

  ಪ್ರಾಂತ್ಯವಾರು ನೋಡುವುದಾದರೇ

  ತಮಿಳುನಾಡಿನಲ್ಲಿ ಸುಮಾರು 17 ಕೋಟಿವರೆಗೂ 'ಕಾಲಾ' ಚಿತ್ರ ಗಳಿಸಿದೆಯಂತೆ. ತೆಲುಗು ರಾಜ್ಯಗಳಲ್ಲಿ 7 ಕೋಟಿಯವರೆಗೂ ಕಲೆಕ್ಷನ್ ಮಾಡಿದೆ. ಕೇರಳದಲ್ಲಿ ಸುಮಾರು 3 ಕೋಟಿ ಗಳಿಕೆ ಕಂಡಿದೆಯಂತೆ. ರೆಸ್ಟ್ ಆಫ್ ಇಂಡಿಯಾದಲ್ಲಿ 6 ಕೋಟಿ ಕಲೆಕ್ಷನ್ ಆಗಿದೆ ಎಂಬುದು ಟಾಕ್. ಹೀಗಾಗಿ, ಓವರ್ ಸೀಸ್ ನಲ್ಲಿ ಕೂಡ ನಿರೀಕ್ಷೆ ಮಾಡಿದಷ್ಟೇ ಹಣ ವಾಪಸ್ ಬಂದಿಲ್ಲ ಎನ್ನುವುದು ವರದಿ.

  155 ಕೋಟಿಗೆ ವಿತರಣೆ ಹಕ್ಕು ಮಾರಾಟ

  155 ಕೋಟಿಗೆ ವಿತರಣೆ ಹಕ್ಕು ಮಾರಾಟ

  ಸದ್ಯದ ಮಾಹಿತಿ ಪ್ರಕಾರ 'ಕಾಲಾ' ಚಿತ್ರದ ವಿತರಣೆಯ ಹಕ್ಕು ಸುಮಾರು 155 ಕೋಟಿಗೆ ಸೇಲ್ ಆಗಿದೆ. ಇಷ್ಟೊಂದು ಮೊತ್ತ ವಾಪಸ್ ಆಗುತ್ತಾ ಎಂಬ ಅನುಮಾನ ಕಾಡುತ್ತಿದೆ. ಒಂದು ವೇಳೆ ಈ ಕಲೆಕ್ಷನ್ ಆಗಿಲ್ಲ ಅಂದ್ರೆ, ವಿತರಕರಿಗೆ ರಜನಿ ನೆರವಾಗ್ತಾರಾ ಎಂಬುದು ಮತ್ತೊಂದು ಕುತೂಹಲ.

  English summary
  Rajinikanth's Kaala has released in 2000 screens across the globe. Much to the shock of everyone, Kaala has registered the lowest-ever box office opening for a Rajinikanth-starrer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X