For Quick Alerts
  ALLOW NOTIFICATIONS  
  For Daily Alerts

  ಒಂದು ವಾರದ ನಂತರ 'ಕಾಲಾ' ಕಲೆಕ್ಷನ್ ದಾಖಲೆ.?

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ವಿವಾದಗಳ ಮಧ್ಯೆಯೇ ಬಿಡುಗಡೆಯಾಗಿತ್ತು. ಕರ್ನಾಟಕ ಹೊರತುಪಡಿಸಿ ಉಳಿದ ಎಲ್ಲ ಕಡೆ ಒಳ್ಳೆ ಒಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಕ್ಕ ಮಟ್ಟಿಗೆ ಸಕ್ಸಸ್ ಕಂಡಿದೆ.

  'ಕಾಲಾ' ಸಿನಿಮಾ ಜಗತ್ತಿನಾದ್ಯಂತ ಸುಮಾರು 2000 ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು. ಈ ಹಿಂದೆ ರಜನಿ ಸಿನಿಮಾಗಳಂತೆ 'ಕಾಲಾ' ಅಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್, ನಿರೀಕ್ಷೆ ಹುಟ್ಟಿಸಿರಲಿಲ್ಲ. ಹೀಗಿದ್ದರೂ 'ಕಬಾಲಿ' ಸಿನಿಮಾಗಿಂತ ಸ್ವಲ್ಪ ಕಮ್ಮಿಯೇ 'ಕಾಲಾ' ಹವಾ ಮಾಡಿತ್ತು.

  ಮೊದಲ ದಿನ ಮುಗ್ಗರಿಸಿದ 'ಕಾಲಾ': ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು.?ಮೊದಲ ದಿನ ಮುಗ್ಗರಿಸಿದ 'ಕಾಲಾ': ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು.?

  ಆರಂಭದಲ್ಲಿ ಸ್ವಲ್ಪ ನಿಧಾನವಾದರೂ, ಒಂದು ವಾರದ ಬಳಿಕ 'ಕಾಲಾ' ಕಲೆಕ್ಷನ್ ನಲ್ಲಿ ಚೇತರಿಕೆ ಕಂಡಿದೆ. ಸದ್ಯದ ವರಿದ ಪ್ರಕಾರ 'ಕಾಲಾ' ಸಿನಿಮಾ ಮೊದಲ ವಾರಾಂತ್ಯಕ್ಕೆ (ಮೊದಲ ನಾಲ್ಕು ದಿನಕ್ಕೆ) ಸುಮಾರು 112 ಕೋಟಿ ಗಳಿಕೆ ಕಂಡಿದೆಯಂತೆ. ಈ ಮೂಲಕ ಮತ್ತೊಂದು ರಜನಿಕಾಂತ್ ಸಿನಿಮಾ ನೂರು ಕೋಟಿ ಕ್ಲಬ್ ಗೆ ಸೇರಿದೆ. ಒಟ್ಟಾರೆ ಕಲೆಕ್ಷನ್ ನೋಡುವುದಾರೇ 136 ಕೋಟಿ ಆಗಿದೆಯಂತೆ.

  ಅಂದ್ಹಾಗೆ, 'ಕಾಲಾ' ಚಿತ್ರದ ಆಲ್ ಓವರ್ ವರ್ಲ್ಡ್ ವಿತರಣೆಯ ಹಕ್ಕು 165 ಕೋಟಿಗೆ ಮಾರಾಟವಾಗಿದೆ. ಈ ಮೊತ್ತ ವಾಪಸ್ ಬರುತ್ತೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಹೀಗಾಗಿ, ಸಿನಿಮಾದಿಂದ ನಷ್ಟವಾದರೇ, ತಲೈವಾ ಕೊಡಬಹುದು ಎಂಬ ಆತಂಕ ಬಹುಶಃ ಸದ್ಯಕ್ಕೆ ದೂರವಾಗಿರಬಹುದು. ಆದ್ರೆ, ಮುಂದಿನ ದಿನಗಳಲ್ಲಿ ಅದು ಹೇಗೆ ಪರಿಣಾಮ ಬೀರುತ್ತೆ ಎಂದು ಹೇಳಲು ಸಾಧ್ಯವಿಲ್ಲ.

  ಇನ್ನುಳಿದಂತೆ 'ಕಬಾಲಿ' ಖ್ಯಾತಿಯ ಪಾ ರಂಜಿತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸುಮುದ್ರಕಣಿ, ನಾನಾ ಪಟೇಕರ್, ಈಶ್ವರಿ ರಾವ್, ಸೇರಿದಂತೆ ಹಲವರು ನಟಿಸಿದ್ದಾರೆ. ಮುಂಬೈನಲ್ಲಿ ನಡೆದ ನೈಜಕಥೆಯಾಧರಿತ ಸಿನಿಮಾ ಇದಾಗಿದ್ದು, ಕಥೆ-ಚಿತ್ರಕಥೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಜೂನ್ 7 ರಂದು ಕಾಲಾ ಸಿನಿಮಾ ಬಿಡುಗಡೆಯಾಗಿತ್ತು.

  English summary
  Rajinikanth's Kaala has completed its first week on a decent note in Tamil Nadu and a few other overseas centres. The movie has entered its second weekend with a bang with the hopes of doing good business.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X