'ಕಾಲಾ' ನಿಷೇಧಿಸಲು ದೇವೇಗೌಡರು ಬಿಡುವುದಿಲ್ಲ ಎಂದ ರಜನಿಕಾಂತ್
ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ 'ಕಾಲಾ' ಬಿಡುಗಡೆಯಾಗುತ್ತೋ ಇಲ್ವೋ ಎಂಬ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದೇ ವಾರ ತೆರೆಕಾಣಬೇಕಿರುವ ಚಿತ್ರವನ್ನ ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿದೆ.
ಆದ್ರೆ, ಅತ್ತ ನಟ ರಜನಿಕಾಂತ್ ಮಾತ್ರ ''ಕಾಲಾ ಚಿತ್ರಕ್ಕೆ ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಆಗಲ್ಲ. ರಿಲೀಸ್ ಆಗುತ್ತೆ'' ಎನ್ನುತ್ತಿದ್ದಾರೆ. ಕರ್ನಾಟಕ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೆ ಎಂದಿರುವ ರಜನಿ, ''ದೇವೇಗೌಡರು ಇದ್ದಾರೆ, ಸಿನಿಮಾಗೆ ತೊಂದರೆಯಾಗಲು ಬಿಡುವುದಿಲ್ಲ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಹಾಗಿದ್ರೆ, ರಜನಿಕಾಂತ್ ಹೇಳುವ ರೀತಿಯಲ್ಲಿ ದೇವೇಗೌಡರ ಮಧ್ಯೆ ಪ್ರವೇಶ ಆಗುತ್ತಾ.? ಕಾಲಾ ಚಿತ್ರದ ವಿವಾದಕ್ಕೆ ಮಾಜಿ ಪ್ರಧಾನಿಗಳು ಬರ್ತಾರ.? ಹೀಗೊಂದು ಅನುಮಾನಗಳನ್ನ ತಲೈವಾ ಹುಟ್ಟಿಹಾಕಿದ್ದಾರೆ. ಇನ್ನು ರಜನಿಕಾಂತ್ ಅವರು ಈ ಬಗ್ಗೆ ಏನಂದ್ರು ಎಂಬ ಪೂರ್ತಿ ಮಾಹಿತಿ ತಿಳಿಯಲು ಮುಂದೆ ಓದಿ....

'ಕಾಲಾ' ಸಿನಿಮಾಗೆ ತೊಂದರೆಯಾಗಲ್ಲ
ಕರ್ನಾಟಕದಲ್ಲಿ ಕಾಲಾ ಬಿಡುಗಡೆಯಾಗುತ್ತಾ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಜನಿಕಾಂತ್ ''ಕರ್ನಾಟಕದಲ್ಲಿ ಕಾಲಾ ಸಿನಿಮಾಕ್ಕೆ ಯಾವುದಾದರೂ ಸಮಸ್ಯೆ ಎದುರಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಕರ್ನಾಟಕದಲ್ಲಿರುವ ತಮಿಳು ಜನರು ಮಾತ್ರವಲ್ಲ, ಆದರೆ ಬೇರೆ ಭಾಷೆ ಮಾತನಾಡುವ ಜನರೂ ಸಿನಿಮಾ ನೋಡಲು ಬಯಸಿದ್ದಾರೆ'' ಎಂದಿದ್ದಾರೆ.

ದೇವೇಗೌಡರು ಇದ್ದಾರೆ ಬಿಡಿ
''ಕರ್ನಾಟಕ ಸರ್ಕಾರ ಚಿತ್ರಮಂದಿರ ಮತ್ತು ಪ್ರೇಕ್ಷಕರಿಗೆ ಸೂಕ್ತ ಭದ್ರತೆಯನ್ನು ನೀಡಲಿದೆ ಎಂಬುದಾಗಿ ನಾನು ನಂಬಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯರಾದ ದೇವೇಗೌಡ ಅವರು ಅಲ್ಲಿದ್ದಾರೆ. ಸಿನಿಮಾದ ನಿಷೇಧಕ್ಕೆ ಅವರು ಖಂಡಿತಾ ಅವಕಾಶ ನೀಡುವುದಿಲ್ಲ'' ಎಂದು ರಜನಿಕಾಂತ್ ಹೇಳಿಕೆ ನೀಡಿದ್ದಾರೆ.

ವಿರೋಧ ನಿರೀಕ್ಷೆ ಮಾಡಿದ್ದೆ
''ನಾನು ಬಹಳ ವಿರೋಧವನ್ನು ನಿರೀಕ್ಷೆ ಮಾಡಿದ್ದೆ. ಆದರೆ, ಅದರ ಪ್ರಮಾಣ ತೀರಾ ಕಡಿಮೆ ಇದೆ. ಸಿನಿಮಾದಲ್ಲಿ ನಿಜಕ್ಕೂ ಒಳ್ಳೆಯ ಕಥೆಯಿದೆ. ಅದು ಚೆನ್ನಾಗಿ ಓಡಲಿದೆ. ಒಳ್ಳೆಯದನ್ನು ಪ್ರೇಕ್ಷಕರು ಖಂಡಿತಾ ಇಷ್ಟಪಡುತ್ತಾರೆ. ಚೆನ್ನಾಗಿಲ್ಲದಿದ್ದರೆ ಅವರು ಅದನ್ನು ಕೈಬಿಡುತ್ತಾರೆ' ಎಂದು ರಜನಿ ಹೇಳಿದ್ದಾರೆ.

ಹೈ ಕೋರ್ಟ್ ಮೊರೆ ಹೋದ ನಿರ್ಮಾಪಕ
ಮತ್ತೊಂದೆಡೆ 'ಕಾಲಾ' ಸಿನಿಮಾಗೆ ಅಡ್ಡಿಯಾಗದಂತೆ ರಕ್ಷಣೆ ನೀಡಬೇಕು ಎಂದು ನಿರ್ಮಾಪಕರು ಕರ್ನಾಟಕ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರ ಅಧಿಕೃತವಾಗಿ ನಿಷೇಧ ಮಾಡಿಲ್ಲ. ಹೀಗಾಗಿ, ಕೋರ್ಟ್ ತೀರ್ಮಾನದ ಬಗ್ಗೆ ಕುತೂಹಲ ಹೆಚ್ಚಾಗಿದೆ.


Click it and Unblock the Notifications











