For Quick Alerts
  ALLOW NOTIFICATIONS  
  For Daily Alerts

  'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳಿನ 'ಕಾಲಾ' ಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಕಲ್ಪಿಸಿಕೊಡುವಂತೆ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

  ಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕನ್ನಡ ಪರ ಸಂಘಟನೆಗಳು ರಜನಿಯ 'ಕಾಲಾ' ಚಿತ್ರವನ್ನು ಕನ್ನಡ ನಾಡಿನಲ್ಲಿ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

  ಇದನ್ನ ಪ್ರಶ್ನಿಸಿದ ನಿರ್ಮಾಪಕ ಧನುಷ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದ್ದು, ಡಿಐಜಿ, ಐಜಿಪಿಗಳು ಭದ್ರತೆಯ ಮೇಲುಸ್ತುವಾರಿ ವಹಿಸಬೇಕು ಎಂದಿದೆ. ಅಲ್ಲದೆ ಚಿತ್ರತಂಡವು ಚಿತ್ರ ಪ್ರದರ್ಶನದ ವಿವರಗಳನ್ನು ಪೊಲೀಸ್‌ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ಸೂಚಿಸಿದೆ.

  ಕರ್ನಾಟಕದಲ್ಲಿ 'ಕಾಲಾ' ರಿಲೀಸ್ ಆಗಿಲ್ಲ ಅಂದ್ರೆ ಎಷ್ಟು ಕೋಟಿ ನಷ್ಟವಾಗುತ್ತೆ.?ಕರ್ನಾಟಕದಲ್ಲಿ 'ಕಾಲಾ' ರಿಲೀಸ್ ಆಗಿಲ್ಲ ಅಂದ್ರೆ ಎಷ್ಟು ಕೋಟಿ ನಷ್ಟವಾಗುತ್ತೆ.?

  ಪಾ ರಂಜಿತ್ ನಿರ್ದೇಶಕ 'ಕಾಲಾ' ಜೂನ್ 7 ರಂದು ಜಗತ್ತಿನಾದ್ಯಂತ ತೆರೆಕಾಣುತ್ತಿದೆ. ರಜನಿಕಾಂತ್ ನಟಿಸಿರುವ ಚಿತ್ರದಲ್ಲಿ ಹುಮಾ ಖುರೇಶಿ ನಾಯಕಿಯಾಗಿದ್ದು, ಧನುಶ್ ನಿರ್ಮಾಣ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಸಿನಿಮಾ ಮಾಡಲಾಗಿದ್ದು, ಸುಮಾರು 140 ಕೋಟಿ ಬಜೆಟ್ ನಲ್ಲಿ ತಯಾರಾಗಿದೆ.

  English summary
  Karnataka High court give indication to state government to give proper protection to Kaala movie in the state. Yesterday Kaala movie producers moved to high court seeking protection over the film release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X