Darshan: ಇಮ್ಮಡಿ ಪುಲಿಕೇಶಿ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್: ಪೋಸ್ಟರ್ ಫುಲ್ ವೈರಲ್

ಸ್ಯಾಂಡಲ್‌ವುಡ್‌ನಲ್ಲಿ 'ಕಾಟೇರ'ನ ಆರ್ಭಟ ಶುರುವಾಗುತ್ತಿದೆ. ಗಣೇಶ ಹಬ್ಬಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. 'ಕಾಟೇರ' ಬಳಿಕ ದರ್ಶನ್ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಇಮ್ಮಡಿ ಪುಲಿಕೇಶಿ ಲುಕ್‌ನಲ್ಲಿ ದರ್ಶನ್ ಸ್ಪೆಷಲ್ ಪೋಸ್ಟರ್ ವೈರಲ್ ಆಗ್ತಿದೆ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪೌರಾಣಿಕ, ಐತಿಹಾಸಿಕ ಪಾತ್ರಗಳಿಗೆ ದರ್ಶನ್ ಹೆಸರು ಮೊದಲು ಕೇಳಿಬರುತ್ತಿದೆ. ದುರ್ಯೋಧನನಾಗಿ, ಸಂಗೊಳ್ಳಿ ರಾಯಣ್ಣನಾಗಿ ದರ್ಶನ್ ದರ್ಬಾರ್ ನೋಡಿದ ಸಿನಿರಸಿಕರು ಫಿದಾ ಆಗಿದ್ದರು. ಇನ್ನು ಡಿ. ರಾಜೇಂದ್ರ ಸಿಂಗ್‌ಬಾಬು ನಿರ್ದೇಶನದ 'ರಾಜಾ ವೀರಮದಕರಿ ನಾಯಕ' ಚಿತ್ರದಲ್ಲೂ ದರ್ಶನ್ ನಟಿಸಬೇಕಿತ್ತು. ಒಂದು ವಾರ ಚಿತ್ರೀಕರಣದ ಬಳಿಕ ಸಿನಿಮಾ ನಿಂತಿತ್ತು.

Kaatera Actor Darshan as Immadi Pulikeshi, AI Art goes viral

ಕೊರೊನಾ ಹಾವಳಿ ಹಿನ್ನೆಲೆಯಲ್ಲಿ 'ರಾಜಾ ವೀರಮದಕರಿ ನಾಯಕ' ಸಿನಿಮಾ ನಿಂತಿದ್ದು ಮುಂದೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದೊಳ್ಳೆ ಪಾತ್ರದಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುವಂತಾಯಿತು. ಚಾಲುಕ್ಯ ವಂಶದ ಪ್ರಸಿದ್ದ ರಾಜ ಇಮ್ಮಡಿ ಪುಲಿಕೇಶಿ ಲುಕ್‌ನಲ್ಲಿ ದರ್ಶನ ಕಾಣಿಸಿಕೊಂಡಿರುವ AI ಪೋಸ್ಟರ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳು ಈ ಫೋಟೊವನ್ನು ಸಿಕ್ಕಾಪಟ್ಟೆ ಶೇರ್ ಮಾಡುತ್ತಿದ್ದಾರೆ.

ದರ್ಶನ್ ಗತ್ತು ಗೈರತ್ತಿಗೆ ಹೇಳಿ ಮಾಡಿಸಿದ ಪಾತ್ರ ಇಮ್ಮಡಿ ಪುಲಿಕೇಶಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಗ್ರಾಫಿಕ್ಸ್ ಡಿಸೈನರ್ ದೀಪೇಶ್ ಉಪ್ಪಾಲ ಈ AI ಪೋಸ್ಟರ್‌ ಸಿದ್ಧಪಡಿಸಿದ್ದಾರೆ. ಇಮ್ಮಡಿ ಪುಲಿಕೇಶಿ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಚಿಕ್ಕಂದಿನಿಂದಲೂ ಹೋರಾಟದ ಜೀವನ ನಡೆಸಿದ ಪುಲಿಕೇಶಿ ತನ್ನ ರಾಜ್ಯವನ್ನು ವಿಸ್ತರಿಸಿದ. ಉತ್ತರ ಭಾರತವನ್ನು ವಶಪಡಿಸಿಕೊಳ್ಳು ಇಂಗಿತ ಇತ್ತು. ಆದರೆ ಹರ್ಷವರ್ಧನನೇ ಯುದ್ಧ ಸಾರಿದಾಗ ಪುಲಿಕೇಶಿ ಎದುರು ಸೋತು ಸಂಧಿ ಮಾಡಿಕೊಂಡಿದ್ದ. 60 ರ ದಶಕದಲ್ಲೇ ಅಣ್ಣಾವ್ರು ಸಿನಿಮಾದಲ್ಲಿ ನಟಿಸಿದ್ದರು.

ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳು ಇಮ್ಮಡಿ ಪುಲಿಕೇಶಿ ಜೀವನ ಚರಿತ್ರೆಯಲ್ಲಿದೆ. ದರ್ಶನ್ ಆ ಪಾತ್ರದಲ್ಲಿ ನಟಿಸಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಆದರೆ ಸದ್ಯಕ್ಕೆ ಅಂತಹ ಯಾವುದೇ ಸಿನಿಮಾ ವಿಚಾರ ಚರ್ಚೆ ಆಗ್ತಿಲ್ಲ. ಇದು ಕೇವಲ ಡಿಸೈನರ್ ದೀಪೇಶ್ ಉಪ್ಪಾಲ ಕಲ್ಪನೆಯ ಪೋಸ್ಟರ್ ಅಷ್ಟೇ. ಇತ್ತೀಚೆಗೆ ಕನ್ನಡ ಕಲಾವಿದರನ್ನು ಮಹಾಭಾರತದ ಪಾತ್ರಗಳಲ್ಲಿ ಕಲ್ಪಿಸಿಕೊಂಡು ದೀಪೇಶ್ ಪೋಸ್ಟರ್‌ಗಳನ್ನು ಡಿಸೈನ್ ಮಾಡಿದ್ದರು. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

Kaatera Actor Darshan as Immadi Pulikeshi, AI Art goes viral

ಶ್ರೀಕೃಷ್ಣನಾಗಿ ಸುದೀಪ್, ಕರ್ಣನಾಗಿ ಯಶ್, ದುರ್ಯೋಧನನಾಗಿ ದರ್ಶನ್‌, ಅರ್ಜುನನಾಗಿ ದಿವಂಗತ ನಟ ಪುನೀತ್ ರಾಜ್‌ಕುಮಾರ್, ಭೀಮನಾಗಿ ಧ್ರುವ ಸರ್ಜಾ, ಭೀಷ್ಮನಾಗಿ ರಿಷಬ್ ಶೆಟ್ಟಿ, ದ್ರೋಣಚಾರ್ಯರಾಗಿ ಶಿವಣ್ಣ, ದ್ರೌಪದಿಯಾಗಿ ರಚಿತಾ ರಾಮ್, ಶಕುನಿಯಾಗಿ ರಾಜ್‌. ಬಿ ಶೆಟ್ಟಿ ಹೀಗೆ ಮಹಾಭಾರತದ ಮುಖ್ಯ ಪಾತ್ರಗಳಲ್ಲಿ ಕನ್ನಡ ಕಲಾವಿದರ ಪೋಸ್ಟರ್‌ಗಳು ಸಖತ್ ವೈರಲ್ ಆಗಿತ್ತು.

ಸದ್ಯ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸ್ತಿದ್ದು ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. 'ರಾಜಾ ವೀರಮದಕರಿ ನಾಯಕ' ನಿಂತ ಬಳಿಕ ರಾಕ್‌ಲೈನ್‌ ವೆಂಕಟೇಶ್ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ದರ್ಶನ್ ಮಿಲನಾ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ತಾರಕ್' ಸಿನಿಮಾ ಬಂದಿತ್ತು.

ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲೂ ನಟಿಸೋಕೆ ದರ್ಶನ್ ಒಪ್ಪಿದ್ದಾರೆ. ಸ್ಪೆಷಲ್ ವಿಡಿಯೋ ಮೂಲಕ ಇತ್ತೀಚೆಗೆ ಆ ವಿಚಾರವನ್ನು ರಿವೀಲ್ ಮಾಡಲಾಗಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಆ ಸಿನಿಮಾ ನಿರ್ಮಿಸಲಿದೆ. 'ಕರಿಯ' ಚಿತ್ರದಲ್ಲಿ ದಶಕಗಳ ಹಿಂದೆ ದರ್ಶನ್- ಪ್ರೇಮ್ ಒಟ್ಟಿಗೆ ಕೆಲಸ ಮಾಡಿದ್ದರು.

More from Filmibeat

English summary
AI Art poster work of Darshan as Immadi Pulikeshi goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X