ಕುಂಬಿ ಅಂಬಾರಿ ಏರಿದ ಜಗ್ಗು; ತರುಣ್ ಹೊಸ ಬಿಎಂಡಬ್ಲ್ಯೂ ಕಾರ್ ಚಲಾಯಿಸಿದ ದರ್ಶನ್, ವಿಡಿಯೋ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಡಿಸೆಂಬರ್ 29ಕ್ಕೆ ತೆರೆಕಂಡ ಸಿನಿಮಾ ಹೊಸ ವರ್ಷದಲ್ಲಿ ಭರ್ಕರಿ ಹಿಟ್ ಆಗಿತ್ತು. ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ನೇಮು ಫೇಮು ತಂದುಕೊಟ್ಟಿತ್ತು. ಇನ್ನು 'ಕಾಟೇರ' ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್ ಹೊಸ ಕಾರು ಖರೀದಿಸಿದ್ದಾರೆ.
ತರುಣ್ ಸುಧೀರ್ BMW X1 ಕಾರ್ ಖರೀದಿಸಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ನಟ ದರ್ಶನ್ ಆ ಕಾರು ಏರಿ ರೌಂಡ್ ಹೊಡೆದಿರುವ ವೀಡಿಯೋ ಹೊರ ಬಿದ್ದಿದೆ. ಖ್ಯಾತ ಖಳನಟರಾದ ತೂಗುದೀಪ ಶ್ರೀನಿವಾಸ್ ಹಾಗೂ ಸುಧೀರ್ ಸ್ನೇಹಿತರಾಗಿದ್ದರು. ಅವರ ಮಕ್ಕಳು ದರ್ಶನ್ ಹಾಗೂ ತರುಣ್ ಸ್ನೇಹವೂ ಚಿತ್ರರಂಗಕ್ಕೆ ಬರುವ ಮುಂಚೆಯೇ ಶುರುವಾಗಿತ್ತು. ಬಳಿಕ ಒಟ್ಟಿಗೆ ಕೆಲಸ ಮಾಡಿ ಇನ್ನಷ್ಟು ಹತ್ತಿರವಾಗಿದ್ದಾರೆ.

ನಟ ದರ್ಶನ್ ಎಡಗೈ ನೋವಿನಿಂದ ಬಳಲುತ್ತಿದ್ದಾರೆ. ಆ ನೋವಿನ ನಡುವೆಯೂ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ತರುಣ್ ತಮ್ಮ ಹೊಸ ಕಾರ್ ಅನ್ನು ಸೆಟ್ ಬಳಿಗೆ ಕೊಂಡೊಯ್ದಿದ್ದಾರೆ. ದರ್ಶನ್ ಕೂಡ ಹೊರ ಬಂದು ಕೈ ನೋವಿನ ನಡುವೆಯೂ ಕಾರ್ ಏರಿ ಒಂದು ರೌಂಡ್ ಹೊಡೆದಿದ್ದಾರೆ. ಆ ವಿಡಿಯೋವನ್ನು ಇದೀಗ ಸ್ವತಂ ತರುಣ್ ಸುಧೀರ್ ಹಂಚಿಕೊಂಡಿದ್ದಾರೆ.
'ನವಗ್ರಹ' ಚಿತ್ರದಲ್ಲಿ ಜಗ್ಗು, ಕುಂಬಿ ಆಗಿ ದರ್ಶನ್, ತರುಣ್ ನಟಿಸಿದ್ದರು. ಬಳಿಕ ತರುಣ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಬಳಿಕ ಈ ಜೋಡಿ 'ರಾಬರ್ಟ್' ಹಾಗೂ 'ಕಾಟೇರ' ರೀತಿಯ ಸೆನ್ಸೇಷನಲ್ ಹಿಟ್ ಸಿನಿಮಾಗಳನ್ನು ಕೊಟ್ಟು ಗೆದ್ದಿದೆ. 'ಸಿಂಧೂರ ಲಕ್ಷ್ಮಣ' ಚಿತ್ರಕ್ಕಾಗಿ 4ನೇ ಬಾರಿ ಜೊತೆಯಾಗುತ್ತಿದ್ದಾರೆ.
'ಮಹಾನಟಿ' ಎನ್ನುವ ಕಿರುತೆರೆ ಕಾರ್ಯಕ್ರಮದ ತೀರ್ಪುಗಾರರಾಗಿಯೂ ನಿರ್ದೇಶಕ ತರುಣ್ ಸುಧೀರ್ ವೀಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಶೋ ಆರಂಭವಾಗಿದೆ. ವೀಕೆಂಡ್‌ಗಳಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಶೋ ಆರಂಭವಾಗಿದೆ. ವೀಕೆಂಡ್‌ಗಳಲ್ಲಿ ಈ ಶೋ ಪ್ರಸಾರವಾಗಲಿದೆ. ರಮೇಶ್ ಅರವಿಂದ್, ಪ್ರೇಮಾ, ನಿಶ್ವಿಕಾ ನಾಯ್ಡು ಕೂಡ ತೀರ್ಪುಗಾರರಾಗಿ ಸಾಥ್ ನೀಡಿದ್ದಾರೆ.
ಇನ್ನು ಹೊಸ ಕಾರು ಖರೀದಿಸಿರುವ ಬಗ್ಗೆ ತರುಣ್ ಸುಧೀರ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ಅಮ್ಮನನ್ನು ಖುಷಿಪಡಿಸುವುದೇ ಎಲ್ಲರ ಕರ್ತವ್ಯ. ಇಲ್ಲಿಯವರೆಗೂ ಯಾವುದೇ ಐಷಾರಾಮಿ ಕಾರು ಖರೀದಿಸಿರಲಿಲ್ಲ. ಈಗ ದೇವರು ಅನುಕೂಲ ಮಾಡಿಕೊಟ್ಟಿದ್ದಾನೆ. ಅದಕ್ಕೆ ಅಮ್ಮನನ್ನು ಕರ್ಕೊಂಡು ಹೋಗಿ ಕಾರು ತಂದ್ವಿ. 'ಕಾಟೇರ' ಸಕ್ಸಸ್ ಬಳಿಕ ಎಲ್ಲವೂ ಆಗುತ್ತಿದೆ. ನನ್ನದು ಒಂದಷ್ಟು ಸೇವಿಂಗ್ಸ್ ಇತ್ತು. ಈಗ ಲೈಫ್ ಬೆಟರ್ ಆಗಿದೆ. ಇದೆಲ್ಲಾ 'ಕಾಟೇರ' ಬಳಿಕ ಅಂತಾನು ಹೇಳಬಹುದು" ಎಂದಿದ್ದಾರೆ.

ಸದ್ಯ ತರುಣ್ ಸುಧೀರ್ 'ಸಿಂಧೂರ ಲಕ್ಷ್ಮಣ' ಸಿನಿಮಾ ಕಡೆ ಗಮನ ಹರಿಸಿದ್ದಾರೆ. ಶೈಲಜಾ ನಾಗ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ಲಾನಿಂಗ್ ನಡೀತಿದೆ. 'ಡೆವಿಲ್' ಬಳಿಕ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಆ ನಂತ್ರ ಸಿಂಧೂರ ಲಕ್ಷ್ಮಣ ಸಿನಿಮಾ ಶುರುವಾಗುವ ಸಾಧ್ಯತೆಯಿದೆ. ಈ ಹಿಂದೆ ಶೈಲಜಾ ನಾಗ್ ನಿರ್ಮಾಣದಲ್ಲಿ 'ಯಜಮಾನ' ಹಾಗೂ 'ಕ್ರಾಂತಿ' ಸಿನಿಮಾಗಳು ಮೂಡಿ ಬಂದಿವೆ.
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ 'ಸಿಂಧೂರ ಲಕ್ಷ್ಮಣ' ಜೀವನವನ್ನಾಧರಿಸಿ ಸಿನಿಮಾ ಮಾಡುವ ಪ್ರಯತ್ನ ಬಹಳ ದಿನಗಳಿಂದ ನಡೆಯುತ್ತಿದೆ. ಈ ಹಿಂದೆ ಬೇರೆ ನಿರ್ದೇಶಕರು ಪ್ರಯತ್ನಿಸಿದ್ದರು. ಬಳಿಕ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಈ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. ತರುಣ್ ಸುಧೀರ್ ನಿರ್ದೇಶಕರು ಎನ್ನಲಾಗಿತ್ತು. ಇನ್ನು ತರುಣ್ ತಂದೆ ಸುಧೀರ್ 'ಸಿಂಧೂರ ಲಕ್ಷ್ಮಣ' ನಾಟಕಗಳಲ್ಲಿ ಅಭಿನಯಿಸಿದ್ದರು. ಹಾಗಾಗಿ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











