"ಟ್ಯಾಟೂ ವರ್ಜಿನಲ್ಲೋ ಡೂಪ್ಲಿಕೇಟೋ ಸಾಕಾ"?: ಆಡಿಕೊಂಡವರಿಗೆ ಖಡಕ್ ಉತ್ತರ ಕೊಟ್ಟ ದರ್ಶನ್
ಇತ್ತೀಚೆಗೆ ನಟ ದರ್ಶನ್ ಎದೆ ಮೇಲಿನ 'ನನ್ನ ಪ್ರೀತಿಯ ಸೆಲೆಬ್ರಿಟೀಸ್' ಟ್ಯಾಟೂ ಬಗ್ಗೆ ಭಾರೀ ಚರ್ಚೆ ಆಗಿತ್ತು. ದರ್ಶನ ಟ್ಯಾಊ ಹಾಕಿಸಿಕೊಂಡಿಲ್ಲ, ಬರೀ ನಾಟಕ ಅಂತೆಲ್ಲಾ ಕೆಲವರು ಮಾತನಾಡಿದ್ದರು. ಅದಕ್ಕೆ ಕಾರಣ ದರ್ಶನ್ ಟ್ಯಾಟೂ ಹಾಕಿಸಿಕೊಳ್ಳುವುದಕ್ಕೂ ಮುನ್ನ ಶೂಟ್ ಮಾಡಿದ್ದ ವರ್ಕೌಟ್ ವಿಡಿಯೋ. ಇದೀಗ ಸ್ವತಃ ದರ್ಶನ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ದರ್ಶನ್ ವರ್ಕೌಟ್ ಮಾಡಿದ್ದ ವಿಡಿಯೋವೊಂದು ಇತ್ತೀಚೆಗೆ ರಿಲೀಸ್ ಆಗಿತ್ತು. ಚಾಲೆಂಜಿಂಗ್ ಸ್ಟಾರ್ ಡೆಡಿಕೇಷನ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ವೀಡಿಯೋ ಕೊನೆಗೆ ದರ್ಶನ್ ಶರ್ಟ್ ಬಿಚ್ಚಿದ್ಧಾಗ ಎದೆಮೇಲೆ ಟ್ಯಾಟೂ ಕಾಣಿಸಿಲ್ಲ. ಇದನ್ನು ನೋಡಿದ ಕೆಲವರು ದರ್ಶನ್ ಟ್ಯಾಟೂ ಹಾಕಿಸಿಕೊಂಡಿದ್ದೆಲ್ಲಾ ಸುಳ್ಳು. ಈ ಯಾಕೆ ಟ್ಯಾಟೂ ಮಾಯಾ ಆಯಿತು ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕೇಳಲು ಶುರು ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಅಭಿಮಾನಿಗಳು ಸಾಕ್ಷಿ ಸಮೇತ ಸ್ಪಷ್ಟನೆ ನೀಡಿದ್ದರು. ಈ ವಿಡಿಯೋ ಟ್ಯಾಟೂ ಹಾಕಿಸಿಕೊಳ್ಳುವುದನ್ನು ಮುನ್ನ ಶೂಟ್ ಮಾಡಿರೋದು ಎನ್ನುವುದನ್ನು ಸಾಬೀತು ಮಾಡಿದ್ದರು.

ಸ್ವತಃ ಟ್ಯಾಟೂ ಹಾಕಿದ್ದ ಗಿರೀಶ್ ಯಾವುದೇ ಕಾರಣಕ್ಕೆ ದರ್ಶನ್ ಅವರ ಎದೆ ಮೇಲಿನ ಟ್ಯಾಟೂ ಆಳಿಸೋಕೆ ಸಾಧ್ಯವಿಲ್ಲ. ನನ್ನ ಸೆಲೆಬ್ರಿಟಿಗಳು ಸದಾ ನನ್ನ ಎದೆ ಜೊತೆ ಇರಬೇಕು ಎನ್ನುವ ಕಾರಣಕ್ಕೆ ದರ್ಶನ್ ಅವರು ಈ ಟ್ಯಾಟೂ ಹಾಕಿಸಿಕೊಂಡಿದ್ದರು. ಇದನ್ನು ಲೇಸರ್‌ನಲ್ಲೂ ತೆಗೆಯೋಕೆ ಆಗುವುದಿಲ್ಲ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಇನ್ನು ಇತ್ತೀಚೆಗೆ ದರ್ಶನ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗಲೂ ಅವರ ಎದೆ ಮೇಲಿನ ಟ್ಯಾಟೂ ಫೋಟೊ ವೈರಲ್ ಆಗಿತ್ತು. ಇದೀಗ ಸ್ವತಃ ನಟ ದರ್ಶನ್ ಶರ್ಟ್ ಬಿಚ್ಚಿ ಟ್ಯಾಟೂ ಪ್ರದರ್ಶಿಸಿದ್ಧಾರೆ.
ದರ್ಶನ್ ಖಡಕ್ ಉತ್ತರ
ಬೊಮ್ಮನಹಳ್ಳಿಯಲ್ಲಿ 2ನೇ ದಿನ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ದರ್ಶನ್ ಪ್ರಚಾರ ನಡೆಸಿದರು. ರೋಡ್‌ಶೋ ವೇಳೆ ಉಮಾಪತಿ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಅಭಿಮಾನಿಗಳ ಮುಂದೆ "ಇದು ವರ್ಜಿನಲ್ಲೋ ಡೂಪ್ಲಿಕೇಟೋ ಸಾಕಾ"? ಎಂದು ಶರ್ಟ್ ಬಟನ್ ತೆಗೆದು ಎದೆ ಮೇಲಿನ ಟ್ಯಾಟೂ ತೋರಿಸಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಹಾಕಿದ್ದಾರೆ. ತನಗಾಗಿ ಇಷ್ಟೆ ಅಭಿಮಾನ, ಪ್ರೀತಿ ನೀಡುತ್ತಿರುವ ಅಭಿಮಾನಿಗಳಿಗೆ ಪ್ರತಿಯಾಗಿ ನಾನು ಏನಾದರೂ ಮಾಡಬೇಕು ಎಂದು ಈ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿ 'ನನ್ನ ಪ್ರೀತಿಯ ಸೆಲೆಬ್ರಿಟೀಸ್' ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು.

ಉಮಾಪತಿ ಹೇಳಿಕೆಗೆ ದರ್ಶನ್ ತಿರುಗೇಟು
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸ್ಪರ್ಧಿಸಿದ್ದಾರೆ. ಪ್ರಚಾರದ ವೇಳೆ ದರ್ಶನ್ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಉಮಾಪತಿ ವ್ಯಂಗ್ಯವಾಡಿದ್ದರು. ಅದಕ್ಕೆ ದರ್ಶನ್ ತಿರುಗೇಟು ನೀಡಿದ್ದಾರೆ. "ಸ್ಟಾರ್‌ಗಳು ಏನು ಮೇಲಿಂದ ಉದುರುತ್ತಾರಾ? ನಿರ್ಮಾಪಕರು ಇದ್ದರೇನೇ ಸಿನಿಮಾ, ಸ್ಟಾರ್‌ಗಳು 500 ರೂಪಾಯಿ ದಾನ ಮಾಡಿದರೂ ಅದು ನಿರ್ಮಾಪಕರ ದುಡ್ಡು ಎಂದು ಹೇಳಿದ್ದಾರೆ. ಈ ಕ್ಷೇತ್ರದ ನಿರ್ಮಾಪಕರು ಅವರು. ಕಲಾವಿದರು ಯಾರೇ ಆಗಿರಲಿ ಅವರ ಬಗ್ಗೆ ಮಾತನಾಡುವ ಮುಂಚೆ ಕಲಾವಿದರು ನಾವೆಲ್ಲಾ ಒಂದೇ. ನಮ್ಮ ತಾಯಿ ಕುಂತಿ ಅಲ್ಲ ಪೂಜೆ ಮಾಡಿದ ತಕ್ಷಣ ಬರೋಕೆ. ಪ್ರಕೃತಿ ನಿಯಮವಾಗಿ ಹೆಂಗ್ ಹುಟ್ಟ್‌ಬೇಕೊ ಹಂಗೆ ಹುಟ್ಟಿರೋದು"
ಯಾರು ಸುಮ್ನೆ ಕೂರಿಸಿ ಸಿನಿಮಾ ಕೊಡಲ್ಲ
"ನಿರ್ಮಾಪಕರು ಇದ್ದೇನೆ ಸ್ಟಾರ್‌ಗಳು ಅಂತೆ. ಅದು ತಪ್ಪು ಸ್ವಾಮಿ. ಹೌದು ನಿರ್ಮಾಪಕರು ಇದ್ದರೆ ಒಂದು ಸಿನಿಮಾ ಆಗುತ್ತೆ. ಆದರೆ ಸೆಲೆಬ್ರೆಟಿಗಳು, ಅಭಿಮಾನಿಗಳು, ಸಿನಿಪ್ರೇಮಿಗಳು ಇದ್ದರೆ ಮಾತ್ರ ಒಬ್ಬ ಕಲಾವಿದ ಸ್ಟಾರ್ ಆಗೋಕೆ ಸಾಧ್ಯ. ಒಬ್ಬ ಸ್ಟಾರ್ 500 ರೂಪಾಯಿ ದಾನ ಮಾಡಿದರೂ ನಿರ್ಮಾಪಕರ ದುಡ್ಡು ಎನ್ನುವುದು ತಪ್ಪು. ಏನು ಧರ್ಮಕ್ಕೆ ಕೊಡ್ತಾರಾ ನಮಗೆ? ಬೆಳಗ್ಗೆಯಿಂದ ಸಂಜೆವರೆಗೂ ಕತ್ತೆ ರೀತಿ ದುಡಿಯುತ್ತೇವೆ. ನಮ್ಮ ಕಷ್ಟ ನಮ್ಮ ಅಕ್ಕ ಪಕ್ಕ ಇರುವವರಿಗೆ ಗೊತ್ತಾಗುತ್ತೆ. ಆದರೂ ಪುನಃ ಬೆಳಗ್ಗೆ ಬಂದು ಕೆಲಸ ಮಾಡ್ತೀವಿ" ಎಂದಿದ್ದರು.


Click it and Unblock the Notifications











