ದರ್ಶನ್ ಪತ್ನಿ ವಿಜಯಲಕ್ಷ್ಮೀ ಬರ್ತ್‌ಡೇ ಪಾರ್ಟಿಯ ಮತ್ತಷ್ಟು ಎಕ್ಸ್‌ಕ್ಲೂಸಿವ್ ಫೋಟೊಗಳು
ನಟ ದರ್ಶನ್ ಸಿನಿಮಾ ಕೆಲಸಗಳನ್ನು ಬಿಟ್ಟು ತಮ್ಮ ಬಹುತೇಕ ಸಮಯವನ್ನು ಆಪ್ತರ ಜೊತೆ ಕಳೆಯುತ್ತಾರೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಂಭ್ರಮಗಳಲ್ಲಿ ಭಾಗಿ ಆಗುತ್ತಾರೆ. ಇತ್ತೀಚೆಗೆ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಕೆಲವೇ ಸ್ನೇಹಿತರ ಆಪ್ತರ ಸಮ್ಮುಖದಲ್ಲಿ ವಿಜಯಲಕ್ಷ್ಮೀ ದರ್ಶನ್ ಕೇಕ್ ಕತ್ತಿರಿಸಿ ಖುಷಿಪಟ್ಟಿರುವ ಫೋಟೊಗಳು ವೈರಲ್ ಆಗ್ತಿದೆ.
ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿಜಯಲಕ್ಷ್ಮೀ ದರ್ಶನ್‌ಗೆ ಅಭಿಮಾನಿಗಳು ಶುಭ ಹಾರೈಸಿದ್ದರು. ಇದೀಗ ಹುಟ್ಟುಹಬ್ಬ ಆಚರಣೆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಖುಷಿಪಡುತ್ತಿದ್ದಾರೆ. ಅದರಲ್ಲೂ ವಿಜಯಲಕ್ಷ್ಮಿ ಪತಿಯ ಗಲ್ಲ ಹಿಡಿದು ನಿಂತಿರುವ ಫೋಟೊ ರಾರಾಜಿಸುತ್ತಿದೆ. ರೆಸ್ಟೋರೆಂಟ್‌ವೊಂದರಲ್ಲಿ ಬರ್ತ್‌ಡೇ ಪಾರ್ಟಿ ಆಯೋಜಿಸಿರುವುದು ಗೊತ್ತಾಗುತ್ತಿದೆ.

ವಿಜಯಲಕ್ಷ್ಮೀ ದರ್ಶನ್ ಬರ್ತ್‌ಡೇ ಪಾರ್ಟಿಯಲ್ಲಿ ಅಭಿಷೇಕ್ ಅಂಬರೀಶ್- ಅವಿವಾ ದಂಪತಿ, ನಟಿ ಕಾವ್ಯ ಗೌಡ ದಂಪತಿ, ಡಾಕ್ಟರ್ ಹಾಗೂ ರೂಪದರ್ಶಿ ಆಗಿರುವ ಶ್ರುತಿ ಸೇರಿದಂತೆ ಕೆಲವೇ ಆಪ್ತರು ಭಾಗಿ ಆಗಿದ್ದಾರೆ. ಬರ್ತ್‌ಡೇ ಸೆಲೆಬ್ರೇಷನ್ ಫೋಟೊಗಳು ಈಗ ಅಭಿಮಾನಿಗಳ ಇನ್‌ಸ್ಟಾ, ವಾಟ್ಸಪ್, ಫೇಸ್‌ಬುಕ್ ಪೇಜ್‌ಗಳಲ್ಲಿ ಹರಿದಾಡುತ್ತಿದೆ.
ಕೆಲವೇ ದಿನಗಳ ಹಿಂದೆ ದರ್ಶನ್ - ವಿಜಯಲಕ್ಷ್ಮಿ ದಂಪತಿ 'ಆಶಿಕಿ- 2' ಚಿತ್ರದ 'ಹಮ್ ತೇರೆ ಬಿನ್ ಅಬ್ ರೆಹ್ ನಹೀ ಸಕ್ತೆ' ಹಾಡಿಗೆ ಕುಣಿದಿದ್ದ ವಿಡಿಯೋ ವೈರಲ್ ಆಗಿತ್ತು. ಖಾಸಗಿ ಕಾರ್ಯಕ್ರಮದಲ್ಲಿ ಜೋಡಿ ಸಿಂಪಲ್ ಹೆಜ್ಜೆ ಹಾಕಿ ರಂಗೇರಿಸಿದ್ದರು. ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ಪ್ರೀತಿಸಿ ಮದುವೆ ಆದವರು. ದರ್ಶನ್- ವಿಜಯಲಕ್ಷ್ಮಿ 2003, ಮೇ 19 ರಂದು ಧರ್ಮಸ್ಥಳದಲ್ಲಿ ಇಬ್ಬರು ಹೊಸ ಬಾಳಿಗೆ ಕಾಲಿಟ್ಟಿದ್ದರು. 20 ವರ್ಷಗಳ ದಾಂಪತ್ಯ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ.
ವಿಜಯಲಕ್ಷ್ಮಿ 'ಮೈ ಫ್ರೆಶ್ ಬಾಸ್ಕೆಟ್' ಎಂಬ ಆನ್‌ಲೈನ್ ಆಪ್ ಸ್ಥಾಪಿಸಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರಿಗೆ ನೆರವಾಗುವಂತಹ ವ್ಯಾಪಾರ ಆರಂಭಿಸಿದ್ದಾರೆ. ಈ ಆಪ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಇತ್ತೀಚೆಗೆ ವಿಜಯಲಕ್ಷ್ಮಿ ಪ್ರವಾಸಕ್ಕೆ ಹೋಗಿ ಬಂದಿದ್ದ ಫೋಟೊಗಳು ಸಖತ್ ವೈರಲ್ ಆಗಿತ್ತು.

ತೂಗುದೀಪ ಕುಟುಂಬದ ಸಂಭ್ರಮದಲ್ಲಿ ಅಭಿಷೇಕ್ ಅಂಬರೀಶ್ ದಂಪತಿ ಕೂಡ ಭಾಗಿ ಆಗಿದ್ದಾರೆ. ಅಭಿ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚೆಗೆ ನಟ ದರ್ಶನ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇತ್ತೀಚೆಗೆ ಜಯನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. 'ಬ್ಯಾಡ್ ಮ್ಯಾನರ್ಸ್' ಟ್ರೈಲರ್ ಕೂಡ ರಿಲೀಸ್ ಮಾಡಿ ದರ್ಶನ್ ತಂಡಕ್ಕೆ ಶುಭ ಕೋರಿದ್ದರು.
ಸದ್ಯ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊನೆ ಹಂತದ ಚಿತ್ರೀಕರಣ ನಡೀತಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. 70 ಕತೆ ಆಧರಿಸಿದ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಇನ್ನು ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ 2ನೇ ವಾರ ಪ್ರದರ್ಶನ ಕಾಣುತ್ತಿದೆ.
ನಟ ದರ್ಶನ್ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ದರ್ಶನ್ ಮನೆಯ ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದ್ದು ಭಾರೀ ಸುದ್ದಿಯಾಗಿತ್ತು. ದೂರು ದಾಖಲಾಗಿ ದರ್ಶನ್ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹೋಗಿಬರುವಂತಾಯಿತು. ಇದೀಗ ಸಾರ್ವಜನಿಕ ಸ್ಥಳದಲ್ಲಿ ಲಾಂಚ್ ಹಿಡಿದು ದರ್ಶನ್ ಪೋಸ್ ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜಯನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಭಿಮಾನಿಗಳು ಬೆಳ್ಳಿ ಕಿರೀಟ, ಬೆಳ್ಳಿ ಖಡ್ಗ ನೀಡಿದ್ದರು. ಆದರೆ ಲಾಂಗ್ ರೀತಿ ಕಾಣುವ ಕತ್ತಿಯನ್ನು ಹಿಡಿದು ದರ್ಶನ್ ಪೋಸ್ ಕೊಟ್ಟಿರುವುದು ಈಗ ಸಂಕಷ್ಟ ತಂದೊಡ್ಡಿದೆ.


Click it and Unblock the Notifications











