ಬಿಡುಗಡೆಗೂ ಮುನ್ನ ಇತಿಹಾಸ ಸೃಷ್ಟಿಸಿದ ದರ್ಶನ್ ನಟನೆಯ 'ಕಾಟೇರ': ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲೇ ಕೋಟಿ ಕಲೆಕ್ಷನ್!

ಕರ್ನಾಟಕದಲ್ಲಿ ಸದ್ಯಕ್ಕೆ ಕಾಟೇರ ಹವಾ ಜೋರಾಗಿಯೇ ಇದೆ. ದರ್ಶನ್ ಅಭಿಮಾನಗಳ ಜೊತೆಗೆ ಇಡೀ ಕರುನಾಡು 'ಕಾಟೇರ'ನ ಜಪ ಮಾಡುತ್ತಿದೆ. ಡಿಸೆಂಬರ್‌ 29 ರಂದು ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12 ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ. ಈಗಾಗಲೇ ಅಡ್ವಾನ್ಸ್‌ ಬುಕಿಂಗ್‌ ಶುರುವಾಗಿದೆ.

ವರ್ಷಾಂತ್ಯಕ್ಕೆ 'ಕಾಟೇರ' ಸಿನಿಮಾ ತೆರೆಗೆ ಬರುತ್ತಿದ್ದು, ತರುಣ್ ಕಿಶೋರ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ಎರಡನೇ ಬಾರಿಗೆ ಈ ಜೋಡಿ ಕೈ ಜೋಡಿಸಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಮೂರು ಸಾಂಗ್ಸ್ ರಿಲೀಸ್ ಆಗಿದೆ. ಬಿಡುಗಡೆಗೂ ಮೊದಲೇ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ 'ಕಾಟೇರ' ಇತಿಹಾಸ ನಿರ್ಮಿಸಿದೆ.

Kaatera Booking : Kaatera Pre Booking Theater Collection Has Crossed One Crore

ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಇತಿಹಾಸ ನಿರ್ಮಿಸಿದ 'ಕಾಟೇರ' !

ದರ್ಶನ್ ತೂಗುದೀಪ ಅಭಿನಯದ 'ಕಾಟೇರ' ಸಿನಿಮಾ ಅದ್ವಾನ್ಸ್ ಬುಕ್ಕಿಂಗ್‌ಗೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಚಿತ್ರದಲ್ಲಿ ನಟ ದರ್ಶನ್ ಹಳ್ಳಿ ಹೈದನಾಗಿ ಕುಲುಮೆಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ವ್ಯವಸ್ಥೆಯ ವಿರುದ್ಧ ಹೋರಾಡುವ ನಾಯಕನಾಗಿ ಕಾಣಿಸಿಕೊಂಡಿರುವುದು ಟ್ರೈಲರ್‌ನಲ್ಲಿ ಕಾಣಿಸಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾವೊಂದು ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಇಂತಹ ದಾಖಲೆ ಮಾಡಿದೆ. ಹೌದು...ಬರೋಬ್ಬರಿ ಒಂದು ಕೋಟಿ ರೂಪಾಯಿಯ ಕಲೆಕ್ಷನ್ ಮಾಡಿದೆ ಕಾಟೇರ ತಂಡ. ಈ ಬಗ್ಗೆ ಕಾಟೇರ ಅಫಿಶಿಯಲ್ ಸೋಶಿಯಲ್ ಮಿಡಿಯಾ ಹ್ಯಾಂಡಲ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

50 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿದ ಕಾಟೇರ ತಂಡ

ಒಂದು ಕೋಟಿಗೂ ಹೆಚ್ಚು ಹಣ ಕಲೆಕ್ಟ್ ಮಾಡಿರುವ ಕಾಟೇರ ತಂಡ ಇಲ್ಲಿಯವರೆಗೆ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿದೆ. ಈ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಮಧ್ಯರಾತ್ರಿಯೇ 'ಕಾಟೇರ'ನ ಅಬ್ಬರ ಜಾಸ್ತಿಯಾಗುತ್ತಿದ್ದು, ಈಗಾಗಲೇ ಬೆಳಗಿನ ಜಾವ 5 ಗಂಟೆ ಹಾಗೂ 10 ಗಂಟೆಯ ಶೋಗಳು ಕೆಲವೆಡೆ ಸೋಲ್ಡೌಟ್ ಆಗಿವೆ.

Kaatera Booking : Kaatera Pre Booking Theater Collection Has Crossed One Crore

ಸಿನಿಮಾ ಯಾವ್ಯಾವ ಥಿಯೇಟರ್‌ಗಳಲ್ಲಿ ಹಾಕಲಾಗಿದೆಯೋ ಅಲ್ಲೇಲ್ಲ ಫಾಸ್ಟ್‌ಫಿಲ್ಲಿಂಗ್ ಆಗುತ್ತಿದೆ. ಈ ಬಗ್ಗೆಯೂ ಚಿತ್ರತಂಡ ಮಾಹಿತಿ ನೀಡಿದೆ. ಕೆಲವು ಕಡೆ ಮುಂಜಾನೆಯ ಶೋಗಳ ಟಿಕೆಟ್ ದರ 1000 ರೂ. ಮುಟ್ಟಿದೆ. ಹಲವು ಕಡೆಗಳಲ್ಲಿ ಈಗಾಗಲೇ ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆಗೆ ಸಕತ್ ಆಗಿಯೇ ಸಿದ್ಧತೆ ಮಾಡಿಕೊಂಡಿದ್ದಾರೆ.

More from Filmibeat

English summary
Kaatera pre booking collection has crossed one crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X