Kaatera 3rd day box office: ವೀಕೆಂಡ್‌ನಲ್ಲಿ ಅಬ್ಬರಿಸಿದ 'ಕಾಟೇರ': ಮೂರೇ ದಿನದಲ್ಲಿ 60 ಕೋಟಿ ಬುಟ್ಟಿಗೆ!

ತರುಣ್ ಕಿಶೋರ್ ಸುಧೀರ್ ಮತ್ತು ನಟ ದರ್ಶನ್ ಕಾಂಬಿನೇಷನ್‌ನ 'ಕಾಟೇರ' ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಅವರ ಸಿನಿಮಾವನ್ನು ಈ ರೀತಿಯಾಗಿ ಫ್ಯಾಮಿಲಿ ಆಡಿಯನ್ಸ್ ಸಂಭ್ರಮಿಸುತ್ತಿರುವುದು ಇದೇ ಮೊದಲು ಇರಬೇಕು. ರಾಜ್ಯದಲ್ಲಿ ಎಲ್ಲಾ ಥಿಯೇಟರ್‌ಗಳಲ್ಲಿಯೂ ಬಹುತೇಕ ಹೌಸ್‌ಫುಲ್ ಬೋರ್ಡ್ ಕಾಣಿಸುತ್ತಿದೆ.

ನೈಟ್‌ ಶೋಗಳಲ್ಲಿಯೂ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗುತ್ತಿರುವುದು 'ಕಾಟೇರ'ನ ಅಬ್ಬರ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಕಾಟೇರನ ಗಳಿಕೆಯು ಹೆಚ್ಚಾಗುತ್ತಿದೆ. ಹಳ್ಳಿಗಾಡಿನ ಕಥೆಯನ್ನು ಜನ ಮೆಚ್ಚಿಕೊಂಡಿದ್ದು, ಸಿನಿಮಾ ಬರೀ ಮೂರೇ ದಿನದಲ್ಲಿ 60 ಕೋಟಿ ಗಡಿಗೆ ಬಂದು ನಿಂತಿದೆ.

Kaatera box office collection: Darshan, Aaradhana Ram Starrer Kaatera Collects 58.8 crore in 3 days

ಮೂರು ದಿನದಲ್ಲಿ 'ಕಾಟೇರ'ನ ಬುಟ್ಟಿಗೆ ಬಂದಿದ್ದು ಇಷ್ಟು!

ದರ್ಶನ್ ತೂಗುದೀಪ ಮತ್ತು ಆರಾಧನಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ತರುಣ್ ಸುಧೀರ್ ನಿರ್ದೇಶಿಸಿರುವ ಸಿನಿಮಾ 'ಕಾಟೇರ' ಡಿಸೆಂಬರ್ 29 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿರುವ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ಓಟ ಮುಂದುವರೆಸಿದೆ. ಸಿನಿಮಾ ಈ ವೀಕೆಂಡ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೂರನೇ ದಿನ 'ಕಾಟೇರ' 20.94 ಕೋಟಿ ರೂಪಾಯಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ಶನಿವಾರ ಮತ್ತು ಭಾನುವಾರ ಎಲ್ಲಾ ಥಿಯೇಟರ್‌ಗಳು ಹೌಸ್‌ಫುಲ್ ಆಗಿದ್ದವು. ಸಿನಿಮಾ ಬಿಡುಗಡೆಯಾದ ಮೊದಲ ದಿನ ಕಾಟೇರ ಗಳಿಸಿದ್ದು 19.79 ಕೋಟಿ, ಎರಡನೇ ದಿನ 17.35 ಕೋಟಿ ಗಳಿಸಿತ್ತು. ಡಿಸೆಂಬರ್ 31 ಭಾನುವಾರ ಮೂರನೇ ದಿನ ಕಾಟೇರ 20.94 ಕೋಟಿ ರೂಪಾಯಿ ಗಳಿಸಿದೆ. ಎಲ್ಲವೂ ಸೇರಿ ಮೂರೇ ದಿನದಲ್ಲಿ 58.8 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಜೀತ ಪದ್ಧತಿ, ಜಾತಿ ತಾರತಮ್ಯ ಮತ್ತು ಬಡ ಮತ್ತು ಗೇಣಿದಾರ ರೈತರನ್ನು ಶೋಷಿಸುವ ಭೂಮಾಲೀಕರು ಮತ್ತು ಉಳುವವನೇ ಭೂಮಿಯ ಒಡೆಯ ಕಾಯ್ದೆಯ ಕುರಿತು ಮಾತನಾಡುವ 'ಕಾಟೇರ' ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಮಾಸ್ತಿ ಅವರ ಸಂಭಾಷಣೆ, ಜಡೇಶ ಅವರ ಕಥೆ, ತರುಣ್ ಸುಧೀರ್ ಅವರ ನಿರ್ದೇಶನ ಮತ್ತು ಚಿತ್ರದ ಎಲ್ಲರ ಅಭಿನಯಕ್ಕೆ ಜನ ಫಿದಾ ಆಗಿದ್ದಾರೆ.

Kaatera box office collection: Darshan, Aaradhana Ram Starrer Kaatera Collects 58.8 crore in 3 days

ಕಾಟೇರ ಚಿತ್ರದಲ್ಲಿ ದರ್ಶನ್ 'ಕಾಟೇರ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರಾಧನಾ ರಾಮ್ ಶಾನುಭೋಗರ ಮಗಳು ಪ್ರಭಾವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ವಿನೋದ್ ಆಳ್ವಾ, ಕುಮಾರ್ ಗೋವಿಂದ್, ಶ್ರುತಿ, ಚೋಂಗ್ಲಾ ಆಗಿ ಬಿರಾದಾರ್ ಮತ್ತು ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಕಾಟೇರನಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಸುಧಾಕರ್ ಛಾಯಾಗ್ರಹಣ ಮತ್ತು ಎಸ್.ರಾಜ್, ಕೆ.ಎಂ.ಪ್ರಕಾಶ್ ಸಂಕಲನದ ಹೊಣೆ ಹೊತ್ತಿದ್ದಾರೆ.

More from Filmibeat

English summary
Kaatera collection: Darshan, Aaradhana ram starrer Kaatera collects 58.8 crore in 3 days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X