ಮೊದಲ ವಾರ ಥಿಯೇಟರ್‌ಗಳಲ್ಲಿ ಅಬ್ಬರಿಸಿ ಬೊಬ್ಬಿರಿದ 'ಕಾಟೇರ'ನ ಕಥೆ ಎರಡನೇ ವಾರ ಏನಾಯ್ತು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ'ನ ಸಿನಿಮಾ ಅಭೂತಪೂರ್ವ ಪ್ರದರ್ಶನ ಕಾಣುತ್ತಿದೆ. ಸದ್ಯ ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿಕೊಂಡಿದೆ. ಇದು ಚಿತ್ರತಂಡ ಹಾಗೂ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ.

ಕೆಲವೆಡೆ ಅಭಿಮಾನಿಗಳು ಟ್ರ್ಯಾಕ್ಟರ್ ಏರಿ ಬಂದು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಎತ್ತುಗಳನ್ನು ಚಿತ್ರಮಂದಿರಕ್ಕೆ ಕರೆತಂದು ಸಿನಿಮಾ ನೋಡಿದವರು ಇದ್ದಾರೆ. ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಮುಖಂಡರು ಸಹ 'ಕಾಟೇರ' ಸಿನಿಮಾ ನೋಡಿ ಜೈ ಎಂದಿದ್ದಾರೆ. ಕೆಲವೆಡೆ ಸಂಜೆ ಶೋಗಳು ಹೌಸ್‌ಫುಲ್ ಆಗುತ್ತಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾ ಒಂದೇ ವಾರಕ್ಕೆ 100 ಕೋಟಿ ರೂ. ಗಳಿಸಿ ಹೊಸ ದಾಖಲೆ ನಿರ್ಮಿಸಿದೆ.

Kaatera box office collection Day 7: Darshans film gets more screens in Week 2

'ಕಾಟೇರ' ಮೊದಲ ವಾರದ ಬಾಕ್ಸಾಫೀಸ್ ರಿಪೋರ್ಟ್

ದಿನ ಗ್ರಾಸ್ ಕಲೆಕ್ಷನ್

ಮೊದಲ ದಿನ 19.79 ಕೋಟಿ ರೂ.
ಎರಡನೇ ದಿನ 17.35 ಕೋಟಿ ರೂ.
ಮೂರನೇ ದಿನ 20.94 ಕೋಟಿ ರೂ.
ನಾಲ್ಕನೇ ದಿನ 18.29 ಕೋಟಿ ರೂ.
ಐದನೇ ದಿನ 9.24 ಕೋಟಿ ರೂ.
ಆರನೇ ದಿನ 9.78 ಕೋಟಿ ರೂ.
ಏಳನೇ ದಿನ 9.52 ಕೋಟಿ ರೂ.

ಮೊದಲ ವಾರ ಒಟ್ಟು 104.58 ಕೋಟಿ ರೂ.

ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಕೆಲವೆಡೆ 'ಕಾಟೇರ' ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೀಗ ವಿದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಒಮನ್ ದೇಶದಲ್ಲಿ ಕನ್ನಡಿಗರು 'ಕಾಟೇರ' ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಒಟ್ನಲ್ಲಿ ಎಲ್ಲೆಲ್ಲೂ 'ಕಾಟೇರ'ನ ದರ್ಬಾರ್ ನಡೀತಿದೆ. ಮೊದಲ ವಾರ ಭರ್ಜರಿ ಪ್ರದರ್ಶನ ಕಂಡ ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟು ಉತ್ತಮ ಪ್ರದರ್ಶನ ಕಾಣುತ್ತಿದೆ.

ಇನ್ನು ಮೊದಲ ವಾರ 'ಕಾಟೇರ' ಚಿತ್ರ 406 ಸಿಂಗಲ್ ಸ್ಕ್ರೀನ್ ಹಾಗೂ 72 ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಎರಡನೇ ವಾರ 56 ಸ್ಕ್ರೀನ್‌ಗಳು ಹೊಸದಾಗಿ ಸೇರ್ಪಡೆಗೊಂಡಿದೆ. ಈಗ ಒಟ್ಟು 462 ಸಿಂಗಲ್ ಸ್ಕ್ರೀನ್ ಹಾಗೂ 72 ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳು ಬಿಡುಗಡೆ ಬೆನ್ನಲ್ಲೇ 'ಕಾಟೇರ' ಬರುವುದರಿಂದ ಸ್ಕ್ರೀನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತೋ ಇಲ್ಲವೋ ಎನ್ನುವ ಅನುಮಾನ ಕೆಲವರಲ್ಲಿತ್ತು. ಆದರೆ ಒಳ್ಳೆ ಸಿನಿಮಾ ಬಂದರೆ ಬೇಡಿಕೆಗೆ ಸಹಜವಾಗಿಯೇ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗುತ್ತದೆ.

Kaatera box office collection Day 7: Darshans film gets more screens in Week 2

ಬೇಡಿಕೆಗೆ ತಕ್ಕಂತೆ ಪೂರೈಕೆ. ಹೌದು, ತಿಂಗಳ ಹಿಂದೆ 'ಕಾಟೇರ' ಚಿತ್ರತಂಡ ದಿಢೀರನೇ ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಿತ್ತು. ಇದು ಅಭಿಮಾನಿಗಳು ಶಾಕ್ ತಂದಿತ್ತು. ಪ್ರಚಾರ ಮಾಡುವುದಕ್ಕೂ ಸಮಯ ಸಾಕಾಗಲ್ಲ. ಎರಡು ದೊಡ್ಡ ಸಿನಿಮಾಗಳ ಬೆನ್ನಲ್ಲೇ ಬರುವುದರಿಂದ ಹೆಚ್ಚು ಸ್ಕ್ರೀನ್ಸ್ ಸಿಗಲ್ಲ ಅಂತೆಲ್ಲಾ ಮಾತಾಡಿಕೊಂಡಿದ್ದರು. ಸಿನಿಮಾ ಚೆನ್ನಾಗಿದ್ದರೆ ಜನ ಬಂದೇ ಬರುತ್ತಾರೆ. ಸೋಷಿಯಲ್ ಮೀಡಿಯಾ ಜಮಾನದಲ್ಲಿ ಹೆಚ್ಚು ಪ್ರಚಾರದ ಅಗತ್ಯವಿಲ್ಲ. ಮೌತ್‌ಟಾಕ್ ಸಾಕು. ಇನ್ನು ಸಿನಿಮಾ ಚೆನ್ನಾಗಿದ್ದರೆ ಸ್ಕ್ರೀನ್‌ಗಳ ಸಂಖ್ಯೆ ಸಹಜವಾಗಿ ಹೆಚ್ಚು ಮಾಡಬಹುದು ಎಂದು ಫಿಲ್ಮಿಬೀಟ್ ವರದಿ ಮಾಡಿತ್ತು. 'ಕಾಟೇರ' ವಿಚಾರದಲ್ಲಿ ಅದು ನಿಜವಾಗಿದೆ. ದರ್ಶನ್ ಕರ್ನಾಟಕದಲ್ಲಿ ಕನ್ನಡ ಸಿನಿಮಾ ಬಿಡುಗಡೆ ಮಾಡಲು ಯಾಕೆ ಹೆದರಿಕೊಳ್ಳಬೇಕು ಎಂದಿದ್ದರು.

More from Filmibeat

English summary
Darshan starrer Kaatera Screen Count Details for the Second Week;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X