100 ಕೋಟಿ ಕ್ಲಬ್ ಸೇರಿ 'ಕಾಟೇರ' ದಾಖಲೆ: ಮೊದಲ ವಾರ ಮಾರಾಟವಾದ ಒಟ್ಟು ಟಿಕೆಟ್ ಎಷ್ಟು?

ದರ್ಶನ್ ನಟನೆಯ 'ಕಾಟೇರ' ಸಿನಿಮಾ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಒಂದೇ ವಾರಕ್ಕೆ ಸಿನಿಮಾ ಈ ಸಾಧನೆ ಮಾಡಿರುವುದು ವಿಶೇಷ. 2ನೇ ವಾರವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುವ ಸುಳಿವು ಸಿಗುತ್ತಿದೆ.

ತರುಣ್ ಸುಧೀರ್ ನಿರ್ದೇಶನದ ಈ ಪೀರಿಯಡ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲೀಗ 'ಕಾಟೇರ'ನ ಭಜನೆ ಶುರುವಾಗಿದೆ. ಇತ್ತೀಚೆಗೆ ಸಿನಿಮಾ ತಾರೆಯರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಉಪೇಂದ್ರ, ಶ್ರೀಮುರಳಿ, ಬಿ. ಸರೋಜಾ ದೇವಿ, ರಕ್ಷಿತಾ ಪ್ರೇಮ್, ಧನಂಜಯ್ ಸೇರಿದಂತೆ ಹಲವರು 'ಕಾಟೇರ'ನಿಗೆ ಜೈ ಎಂದಿದ್ದರು.

Kaatera box office: Darshan Starrer action drama enters Rs 100 crore club in 7 days

'ಕಾಟೇರ' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲೇ 58 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿತ್ತು. ಇದೀಗ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿದೆ. ಇದು ಅಭಿಮಾನಿಗಳ ಸಂಭ್ರಮ ದುಪ್ಪಟ್ಟು ಮಾಡಿದೆ. ಕಳೆದ ಶುಕ್ರವಾರ ಮಧ್ಯರಾತ್ರಿ ಆರಂಭವಾದ ಫ್ಯಾನ್ಸ್ ಶೋಗಳಿಂದಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನೋಡ ನೋಡುತ್ತಲೇ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಿತು. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ಪ್ರೇಕ್ಷಕರು 'ಕಾಟೇರ'ನನ್ನು ಅಪ್ಪಿಕೊಂಡರು.

ತರುಣ್ ನಿರ್ದೇಶನ, ದರ್ಶನ್ ನಟನೆ, ಮಾಸ್ತಿ ಸಂಭಾಷಣೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರ್ಶನ್ ಮಾತ್ರವಲ್ಲ ನಾಯಕಿ ಆರಾಧನಾ, ಶ್ರುತಿ, ಕುಮಾರ್ ಗೋವಿಂದ್, ಬಿರಾದಾರ್ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಂದೊಳ್ಳೆ ಕಂಟೆಂಟ್ ಜೊತೆಗೆ ದರ್ಶನ್ ಅಭಿಮಾನಿಗಳು ಕೇಳುವ ಮಾಸ್ ಅಂಶಗಳನ್ನು ಸೇರಿಸಿ ತರುಣ್ ಸಿನಿಮಾ ಮಾಡಿ ಗೆದ್ದಿದ್ದಾರೆ.

7ನೇ ದಿನ 9.52 ಕೋಟಿ ರೂ. ಜಮೆ ಆಗಿದ್ದು ಮೊದಲ ವಾರವೇ ಸಿನಿಮಾ 104.58 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಬರೀ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸಿದೆ. ಕೇವಲ ಒಂದು ವಾರದಲ್ಲಿ 52 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿರುವ ಅಂದಾಜಿದೆ. ಈ ಮೂಲಕ 'ಕಾಟೇರ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

Kaatera box office: Darshan Starrer action drama enters Rs 100 crore club in 7 days

70ರ ದಶಕದಲ್ಲಿ ಹಳ್ಳಿಗಳ ನೈಜ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಹೇಳಿ ಚಿತ್ರತಂಡ ಗೆದ್ದಿದೆ. ರೈತರ ಮೇಲೆ ಜಮೀನ್ದಾರರ ದಬ್ಬಾಳಿಕೆ, ಕೆಳ ವರ್ಗದವರ ಮೇಲೆ ಮೇಲ್ವರ್ಗದವರ ದೌರ್ಜನ್ಯವನ್ನು ಎಳೆ ಎಳೆಯಾಗಿ ತೆರೆ ತರಲಾಗಿದೆ. ಇನ್ನು 'ಉಳುವವನೆ ಭೂಮಿಯ ಒಡೆಯ ಕಾಯ್ದೆ' ಜಾರಿ ಆದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷದ ಚಿತ್ರಣ ಚಿತ್ರದಲ್ಲಿದೆ. ಜೊತೆಗೆ ಮರ್ಯಾದಾ ಹತ್ಯೆಯಂತಹ ಘೋರ ವಿಚಾರದ ಬಗ್ಗೆಯೂ ಚಿತ್ರದಲ್ಲಿ ಚರ್ಚಿಸಲಾಗಿದೆ.

ದರ್ಶನ್ ಅಭಿಮಾನಿಗಳು ಮಾತ್ರವಲ್ಲ ಸಾಮಾನ್ಯ ಪ್ರೇಕ್ಷಕರು ಕೂಡ 'ಕಾಟೇರ' ಸಿನಿಮಾ ನೋಡಿ ಬಹುಪರಾಕ್ ಎನ್ನುತ್ತಿದ್ದಾರೆ. ಇವತ್ತಿನ ಕಾಲದಲ್ಲಿ ದರ್ಶನ್ ರೀತಿಯ ಸ್ಟಾರ್ ನಟರೊಬ್ಬರು ಇಂತಹ ಸೂಕ್ಷ್ಮ ವಿಚಾರದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅದ್ಭುತವಾಗಿ ನಟಿಸಿದ್ದಕ್ಕೆ ಮೆಚ್ಚಿ ಕೊಂಡಾಡುತ್ತಿದ್ದಾರೆ. 72 ಮಲ್ಟಿಪ್ಲೆಕ್ಸ್‌ಗಳು ಹಾಗೂ 406 ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಒಂದು ವಾರಕ್ಕೆ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. 'ಸಲಾರ್', 'ಡಂಕಿ' ರೀತಿಯ ದೊಡ್ಡ ಸಿನಿಮಾಗಳ ನಡುವೆಯೂ 'ಕಾಟೇರ'ನ ದರ್ಬಾರ್ ಜೋರಾಗಿದೆ.

ಈಗಾಗಲೇ ಪರಭಾಷೆಗಳಿಂದಲೂ ಸಿನಿಮಾ ಡಬ್ ಮಾಡಿಕೊಡುವಂತೆ ಬೇಡಿಕೆ ಇದೆ. ಶೀಘ್ರದಲ್ಲೇ ತೆಲುಗು, ತಮಿಳಿನಲ್ಲೂ 'ಕಾಟೇರ' ಆರ್ಭಟ ಶುರುವಾಗಲಿದೆ. ಈ ವಾರವೇ ಸಿನಿಮಾ ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗ್ತಿದೆ.

More from Filmibeat

English summary
Darshan, Aradhana's Kaatera grosses over Rs 100 cr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X