ಮಂಗಳವಾರದ ಪರೀಕ್ಷೆಯಲ್ಲೂ ಪಾಸಾದ 'ಕಾಟೇರ': 5 ದಿನಕ್ಕೆ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಾಣ

ರಾಜ್ಯಾದ್ಯಂತ 'ಕಾಟೇರ'ನ ವಿಜಯೋತ್ಸವ ಮುಂದುವರೆದಿದೆ. ಶುಕ್ರವಾರದಿಂದಲೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಎಲ್ಲೆಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಫಸ್ಟ್‌ ವೀಕೆಂಡ್ ಬಳಿಕ ಸೋಮವಾರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವ ಕುತೂಹಲ ಇತ್ತು. ಆದರೆ ಹೊಸ ವರ್ಷದ ಸಂಭ್ರಮದಲ್ಲಿ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ಇನ್ನು ಮಂಗಳವಾರವೂ 'ಕಾಟೇರ'ನ ದರ್ಬಾರ್ ಜೋರಾಗಿತ್ತು.

ಬಹಳ ದಿನಗಳ ಬಳಿಕ ಮತ್ತೆ ರಾಜ್ಯದಾದ್ಯಂತ ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿದೆ. ಸಿನಿಮಾ ಪ್ರದರ್ಶಕರು ಇದರಿಂದ ಖುಷಿಯಾಗಿದ್ದಾರೆ. ಎಲ್ಲೆಲ್ಲೂ 'ಕಾಟೇರ' ದರ್ಶನ್ ಕಾರುಬಾರು ನಡೀತಿದೆ. ಒಂದೊಳ್ಳೆ ಸದಭಿರುಚಿಯ ಸಿನಿಮಾ ಕೊಟ್ಟು ಚಿತ್ರತಂಡ ಗೆದ್ದಿದೆ. ಕುಟುಂಬ ಸಮೇತ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿದ್ದಾರೆ. ಯಾರ ಬಾಯಲ್ಲಿ ನೋಡಿದರೂ 'ಕಾಟೇರ'ನ ಜಪ ನಡೀತಿದೆ. ಸಿನಿಮಾ ನೋಡಿದವರು ಮತ್ತಷ್ಟು ಜನರನ್ನು ನೋಡುವಂತೆ ಪ್ರೇರೇಪಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಸದ್ದು ಮಾಡುತ್ತಿದೆ.

Kaatera collection day 5: Darshan continues roar at at the box office

ಇತ್ತೀಚೆಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ 'ಕಾಟೇರ' ಕಲೆಕ್ಷನ್ ಬಗ್ಗೆ ನೀಡಿದ್ದ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕೆಲವರು ಸಿನಿಮಾ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಎಲ್ಲಾ ಗೊಂದಲಕ್ಕೆ ನಿರ್ದೇಶಕ ತರುಣ್ ಸುಧೀರ್ ಬ್ರೇಕ್ ಹಾಕಿದ್ದರು. ಮಂಗಳವಾರ ಕೂಡ ಸಿನಿಮಾ ಹಲವು ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. 9 ಕೋಟಿ 24 ಲಕ್ಷ ರೂ. ಕಲೆಕ್ಷನ್ ಮಾಡಿದ್ದು ಆ ಮೂಲಕ ಚಿತ್ರದ ಒಟ್ಟು 5 ದಿನಗಳ ಗಳಿಕೆ 86 ಕೋಟಿ ರೂ. ತಲುಪಿದೆ ಎಂದು ಹೇಳಲಾಗುತ್ತಿದೆ.

ಪ್ಯಾನ್ ಇಂಡಿಯಾ ಸಿನಿಮಾಗಳು 5 ದಿನಕ್ಕೆ 80 ಕೋಟಿ ಗಳಿಕೆ ಮಾಡುವುದನ್ನು ನೋಡಿದ್ದೇವೆ. ಆದರೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ಈ ಮಟ್ಟಿಗೆ ಕಲೆಕ್ಷನ್ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ. ಇನ್ನು 'ಕಾಟೇರ' ಸಿನಿಮಾ ಕರ್ನಾಟಕ ಬಿಟ್ಟು ಹೊರ ರಾಜ್ಯಗಳಲ್ಲೂ ಅಷ್ಟಾಗಿ ಬಿಡುಗಡೆ ಆಗಿಲ್ಲ. ಆದರೆ ನಿಧಾನವಾಗಿ ಚಿತ್ರಕ್ಕೆ ಬೇಡಿಕೆ ಶುರುವಾಗಿದೆ. ತಮಿಳುನಾಡಿನ ಹೊಸೂರಿನ ಗ್ರ್ಯಾಂಡ್‌ ಸಿನಿಮಾಸ್ ಚಿತ್ರಮಂದಿರದಲ್ಲಿ ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಗೋವಾ ಹಾಗೂ ಪುಣೆಯಲ್ಲೂ ಕನ್ನಡದ 'ಕಾಟೇರ' ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ.

'ಕಾಟೇರ' 5 ದಿನಗಳ ಬಾಕ್ಸಾಫೀಸ್ ರಿಪೋರ್ಟ್

ದಿನ ಗ್ರಾಸ್ ಕಲೆಕ್ಷನ್
ಮೊದಲ ದಿನ 19.79 ಕೋಟಿ
ಎರಡನೇ ದಿನ 17.35 ಕೋಟಿ
ಮೂರನೇ ದಿನ 20.94 ಕೋಟಿ
ನಾಲ್ಕನೇ ದಿನ 18.29 ಕೋಟಿ
ಐದನೇ ದಿನ 9.24 ಕೋಟಿ

ಶುಕ್ರವಾರ, ಶನಿವಾರ, ಭಾನುವಾರ ವೀಕೆಂಡ್ ಆಗಿದ್ದ ಕಾರಣ 'ಕಾಟೇರ'ನ ಅಬ್ಬರ ಜೋರಾಗಿತ್ತು. ಸೋಮವಾರ ಸಿನಿಮಾ ಗಳಿಕೆ ಏನಾಗುತ್ತದೋ? ಎನ್ನುವ ಕುತೂಹಲ ಕೆಲವರಲ್ಲಿತ್ತು. ಆದರೆ ಅಂದು ಕೂಡ ಜನ ಸಿನಿಮಾ ನೋಡಲು ದೊಡ್ಡಮಟ್ಟದಲ್ಲಿ ಥಿಯೇಟರ್‌ಗಳಿಗೆ ಬಂದಿದ್ದರು. 5ನೇ ದಿನವೂ ಜನರ ಉತ್ಸಾಹ ಕಮ್ಮಿ ಆಗರಲಿಲ್ಲ. ಇನ್ನು 6ನೇ ದಿನವೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

Kaatera collection day 5: Darshan continues roar at at the box office

ಈಗಾಗಲೇ ತಮಿಳು, ತೆಲುಗಿನಿಂದಲೂ ಸಿನಿಮಾ ಡಬ್ ಮಾಡಿ ಕೊಡುವಂತೆ ಬೇಡಿಕೆ ಶುರುವಾಗಿದೆ. ಎರಡ್ಮೂರು ವಾರಗಳಲ್ಲಿ ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ 'ಕಾಟೇರ'ನ ಆರ್ಭಟ ಶುರುವಾಗುವ ಸಾಧ್ಯತೆಯಿದೆ. ಇನ್ನು ವಿದೇಶಗಳಲ್ಲಿ ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗಲಿದೆ. ತರುಣ್ ಸುಧೀರ್ ನಿರ್ದೇಶನ, ದರ್ಶನ್- ಆರಾಧನಾ ನಟನೆ ಹಾಗೂ ಮಾಸ್ಟಿ ಸಂಭಾಷಣೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತರುಣ್-ಜಡೇಶ್ ಕಥೆ, ಚಿತ್ರಕಥೆ ಚಿತ್ರಕ್ಕೆ ಪ್ಲಸ್ ಆಗಿದೆ.

More from Filmibeat

English summary
Kaatera box office day 5: steady numbers after a historic weekend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X