ಒಟಿಟಿಯಲ್ಲಿ ಇದ್ದರೂ ಚಿತ್ರಮಂದಿರದಲ್ಲಿ ಕಡಿಮೆಯಾಗಿಲ್ಲ ಕಾಟೇರ ಹವಾ ; ಇನ್ನೂ ಎಲ್ಲೆಲ್ಲಿದೆ ಸಿನಿಮಾ..?

ವಾರಕ್ಕೆ ಅರ್ಧ ಡಜನ್ ಸಿನಿಮಾ. ಯಾವ ಸಿನಿಮಾ, ಯಾವಾಗ ತೆರೆಗೆ ಬಂತು, ಅದ್ಯಾವಾಗ ಬಂದು ಯಾವಾಗ ಹೋಯಿತು ಎಂದು ಗೊತ್ತಾಗದ ಈ ಕಾಲದಲ್ಲಿ ಕಾಟೇರ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಲುವಿನ ಬಾವುಟ ನೆಟ್ಟಿದ್ದಾರೆ. ಐತಿಹಾಸಿಕ ದಾಖಲೆಯನ್ನೂ ಬರೆದಿದ್ದಾರೆ.

ಇನ್ನೂ.. ಕಾಟೇರ ಒಟಿಟಿಯಲ್ಲಿ ಕೂಡ ತೆರೆಗೆ ಬಂದಿದೆ. ಈ ವಿಚಾರ ನಿಮಗೆ ಗೊತ್ತೇ ಇದೆ. ಆದರೆ ನಿಮಗೆ ಗೊತ್ತಾ ಒಟಿಟಿಯಲ್ಲಿ ತೆರೆಗೆ ಬಂದರೂ ಕೂಡ ಚಿತ್ರಮಂದಿರದಲ್ಲಿ ಕಾಟೇರ ಹವಾ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಕಾಟೇರ ಚಿತ್ರಮಂದಿರದಲ್ಲಿ ಏಳನೇ ವಾರಕ್ಕೆ ಕಾಲಿಟ್ಟಿದೆ. ಯಶಸ್ವೀ ಪ್ರದರ್ಶನವನ್ನೂ ಕಾಣ್ತಿದೆ.

Kaatera Continues Its Theatrical Run Even After The Ott Release

ಬೆಂಗಳೂರಿನ ಅನುಪಮಾ, ಪ್ರಸನ್ನ, ಸಿದ್ದೇಶ್ವರದಲ್ಲಿ ಪ್ರದರ್ಶನ ಕಾಣ್ತಿರುವ ಕಾಟೇರ, ಬೆಂಗ್ಳೂರಿನ ಅನೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ನೂ ಇದೆ. 06ವಾರ ಕಳೆದರೂ, ಮೈಸೂರಿನ ವುಡ್ ಲ್ಯಾಂಡ್ ಚಿತ್ರಮಂದಿರದಲ್ಲಿ ಚಿತ್ರ ನಾಲ್ಕು ಆಟಗಳ ಪ್ರದರ್ಶನವನ್ನ ಕಾಣುತ್ತಿದೆ. ಇನ್ನೂ ನಿಮಗೆ ಗೊತ್ತು, ಕಾಲಾನುಕಾಲದಿಂದ ತಮಿಳು, ತೆಲುಗು ಮತ್ತು ಹಿಂದಿಯ ದೊಡ್ಡ ಸಿನಿಮಾಗಳು ಕನ್ನಡದ ಚಿತ್ರಗಳನ್ನು ತುಳಿದುತುಳಿದೇ ಮಲ್ಟಿಪ್ಲೆಕ್ಸ್ ಅಂಗಳದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿವೆ. ಈ 06 ವಾರಗಳಲ್ಲಿ ಪರಭಾಷೆಯ ಅನೇಕ ಸಿನಿಮಾಗಳು ಮಲ್ಟಿಪ್ಲೆಕ್ಸ್ ನಲ್ಲಿ ಬಂದು ಹೋಗಿವೆ. ಆದರೂ ಕೂಡ ಕಾಟೇರ ನಿಂತ ನೆಲ ಅಲುಗಾಡಿಸಲು ಸಾಧ್ಯವಾಗಿಲ್ಲ.

ಕೇವಲ ಬೆಂಗಳೂರು, ಮೈಸೂರು ಅಷ್ಟೇ ಅಲ್ಲ ಕಾಟೇರ ಚಿತ್ರವನ್ನ ನೋಡುವ ಉತ್ಸಾಹ ಉತ್ತರ ಕರ್ನಾಟಕದಲ್ಲಿ ಕೂಡ ಇನ್ನೂ ಇದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಬಿಜಾಪುರ, ರಾಣೆಬೆನ್ನೂರು ಹೀಗೆ ಅನೇಕ ಕಡೆ ಕಾಟೇರ ಉತ್ಸವ ಇನ್ನೂ ನಡೆಯುತ್ತಿದೆ.

Kaatera Continues Its Theatrical Run Even After The Ott Release

200 ಕೋಟಿ ಕೊಳ್ಳೆ ಹೊಡೆದಿರುವ ಕಾಟೇರ..?

ಈ 06 ವಾರಗಳಲ್ಲಿ ಕಾಟೇರ 200 ಕೋಟಿಗೂ ಅಧಿಕ ಹಣವನ್ನ ಕೊಳ್ಳೆ ಹೊಡೆದಿದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳಾಗಿವೆ. ಆದರೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇಲ್ಲಿಯವರೆಗೆ ಚಿತ್ರದ ಗಳಿಕೆಯ ಪಕ್ಕ ಲೆಕ್ಕವನ್ನ ನೀಡಿಲ್ಲ.

Kaatera Continues Its Theatrical Run Even After The Ott Release

ಒಟ್ಟಿನಲ್ಲಿ ಚಿತ್ರವೊಂದು 50 ದಿನ ಪೂರೈಸುವುದು ಅಸಾಧ್ಯ ಎಂಬ ಕಾಲಘಟ್ಟದಲ್ಲಿ ಕಾಟೇರ 50 ದಿನಗಳ ಯಶಸ್ವೀ ಪ್ರದರ್ಶನವನ್ನ ಕಾಣಲಿದೆ. ಒಟಿಟಿಯಲ್ಲಿ ಚಿತ್ರ ಇದ್ದರೂ ಕೂಡ, ಚಿತ್ರಮಂದಿರದಲ್ಲಿ ಕಾಟೇರ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇದೇ ಅಲ್ಲವೇ ನಿಜವಾದ ಗೆಲುವು

More from Filmibeat

English summary
Challenging Star Darshan Starrer Kaatera, Directed By Tharun Sudhir Has Achived Remarkable feet by running successfully in theatres, even after its ott release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X