'ದರ್ಶನ್ ನಂಬಿಕೊಂಡು 200-300 ಕುಟುಂಬಗಳಿವೆ'- ತರುಣ್ ಸುಧೀರ್...!
ಅ 'ಪವಿತ್ರ' ಸಂಬಂಧಕ್ಕೆ ಹಾತೊರೆದು ಜೈಲು ಪಾಲಾಗಿ ಸದ್ಯ ಅನಾರೋಗ್ಯದಿಂದ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ದರ್ಶನ್‌ಗೆ ಪೂರ್ಣ ಪ್ರಮಾಣದ ಜಾಮೀನು ಕೊನೆಗೂ ಸಿಕ್ಕಿದೆ. ಸಹಜವಾಗಿ ಸುದ್ದಿಯನ್ನು ಕೇಳಿ ಅಭಿಮಾನಿ ಬಳಗ ಹುಚ್ಚೆದ್ದು ಕುಣಿಯುತ್ತಿದೆ.
ಇನ್ನೂ ದರ್ಶನ್ ಕನ್ನಡ ಚಿತ್ರರಂಗದ ನಂಬರ್ ಓನ್ ಹೀರೋ. ವರ್ಷಕ್ಕೆ ಎರಡು ಚಿತ್ರಗಳನ್ನು ಖಾಯಂ ಆಗಿ ಮಾಡುವ ಸ್ಟಾರ್. ಈ ಕಾರಣಕ್ಕೆ ದರ್ಶನ್ ಜೈಲು ಪಾಲಾದ ದಿನದಿಂದ ಅನೇಕರು ದರ್ಶನ್ ಅನುಪಸ್ಥಿತಿ ಕನ್ನಡ ಚಿತ್ರರಂಗಕ್ಕೆ ತುಂಬಾ ಕಾಡುತ್ತಿದೆ ಎಂದು ಅಲವತ್ತುಕೊಂಡಿದ್ದರು. ಕನ್ನಡ ಚಿತ್ರರಂಗ ಉದ್ಧಾರವಾಗಲಿ ಎಂದು ಪೂಜೆ ಪುನಸ್ಕಾರ ಮಾಡಿದರು. ದರ್ಶನ್ ಜೈಲಿನಲ್ಲಿರುವ ಕಾರಣದಿಂದ ಚಿತ್ರರಂಗವನ್ನೇ ನಂಬಿಕೊಂಡ ಅನೇಕ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಕೂಡ ಹೇಳಿದರು. ದರ್ಶನ್ ಅವರ ಗೆಳೆಯ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಕೂಡ ಈ ಮಾತನ್ನು ಅವತ್ತು ಹೇಳಿದ್ದರು. ಇವತ್ತು ಹೇಳಿದ್ದಾರೆ.

ಹೌದು, ದರ್ಶನ್‌ಗೆ ಜಾಮೀನು ಸಿಕ್ಕ ಖುಷಿಯಲ್ಲಿರುವ ತರುಣ್ ಸುಧೀರ್ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ನ್ಯಾಯಾಲಯಕ್ಕೆ ಧನ್ಯವಾದ ಹೇಳಿದ್ದಾರೆ. ಅವರಿಗೆ ಜಾಮೀನು ಸಿಕ್ಕಿರುವುದು ಮಾತ್ರ ಅಲ್ಲ ಆದಷ್ಟು ಬೇಗ ದರ್ಶನ್ ಅವರು ಆರೋಪ ಮುಕ್ತರಾಗಿ ಹೊರಗೆ ಬರಲಿ ಎಂದು ಪ್ರಾರ್ಥನೆಯನ್ನು ಮಾಡುತ್ತೇನೆ, ಅದು ಕೂಡ ಬೇಗ ಆಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿರುವ ತರುಣ್ ಸುಧೀರ್ ಅವರ ಆರೋಗ್ಯದ ಕುರಿತು ನಮಗೆ ತುಂಬಾ ಕಾಳಜಿ ಇದೆ ಎಂದು ಹೇಳಿದ್ದಾರೆ.
ಮುಂದುವರೆದು ಕನ್ನಡ ಚಿತ್ರರಂಗದಲ್ಲಿ ಇನ್ನೂರು, ಮೂನ್ನೂರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಸ್ಟಾರ್ ಅವರು, ಅವರನ್ನು ನಂಬಿಕೊಂಡು ಹಲವಾರು ಕುಟುಂಬಗಳ ಕೆಲಸ ನಡೆಯುತ್ತೆ ಹಾಗಾಗಿ ಚಿತ್ರರಂಗಕ್ಕೆ ಅವರು ತುಂಬಾನೇ ಮುಖ್ಯವಾದವರು ಎಂದು ಹೇಳಿರುವ ತರುಣ್ ಸುಧೀರ್ ಈ ಕಾರಣದಿಂದ ಅವರ ಆರೋಗ್ಯ ತುಂಬಾ ಮುಖ್ಯವಾಗುತ್ತೆ ಹೀಗಾಗಿ ಆದಷ್ಟು ಬೇಗ ಅವರು ಗುಣಮುಖರಾಗಲಿ ಮೊದಲಿನ ತರ ವಾಪಸು ಬರಲಿ ಎಂದು ಹೇಳಿದ್ದಾರೆ.
ಇನ್ನೂ ದರ್ಶನ್ ಮೇಲೆ ಮೊದಲಿಂದ ಅಭಿಮಾನಿಗಳಿಗೆ ತುಸು ಹೆಚ್ಚಿನ ಅಭಿಮಾನ ಇದೆ. ದರ್ಶನ್ ಅವರಿಗೆ ಕೂಡ ತಮ್ಮ ಅಭಿಮಾನಿಗಳ ಅಭಿಮಾನದ ಮೇಲೆ ಅಭಿಮಾನ ಇದೆ. ಈ ಅಭಿಮಾನದ ಬಗ್ಗೆಯೂ ಮಾತನಾಡಿರುವ ತರುಣ್ ಸುಧೀರ್ ಇಂತಹ ಅಭಿಮಾನಿಗಳನ್ನು ಪಡೆಯಲು ದರ್ಶನ್ ಪುಣ್ಯ ಮಾಡಿದ್ದರಾ ಅಥವಾ ದರ್ಶನ್ ಪಡೆಯಲು ಅಭಿಮಾನಿಗಳು ಪುಣ್ಯ ಮಾಡಿದ್ದರಾ ಗೊತ್ತಿಲ್ಲ. ಆದರೆ ಇಬ್ಬರ ನಡುವೆ ಸಂಬಂಧ ತುಂಬಾ ಸ್ಟ್ರಾಂಗ್ ಆಗಿದೆ ಎಂದು ಹೇಳಿದ್ದಾರೆ. ಅಭಿಮಾನಿಗಳೇ ದರ್ಶನ್ ಅವರ ನಿಜವಾದ ಶಕ್ತಿ ಎಂದಿದ್ದಾರೆ.
ಅಂದ್ಹಾಗೇ ಎಲ್ಲವೂ ಅಂದುಕೊಂಡತೆ ಆಗಿದ್ದರೆ, ದರ್ಶನ್ ಜೈಲು ಪಾಲಾಗದೇ ಇದ್ದಿದ್ದರೆ, ಡೆವಿಲ್ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಇಷ್ಟೊತ್ತಿಗೆ ದರ್ಶನ್ ವೀರ ಸಿಂಧೂರ ಲಕ್ಷ್ಮಣನ ಅವತಾರವೆತ್ತಬೇಕಿತ್ತು. ತರುಣ್ ಸುಧೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ, ಅದು ಆಗಲಿಲ್ಲ. ಆದರೆ ಈಗ ದರ್ಶನ್ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಕಾರಣಕ್ಕೆ ವೀರ ಸಿಂಧೂರ ಲಕ್ಷ್ಮಣ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ತರುಣ್ ಸುಧೀರ್ ಅವರೇ ಉತ್ತರವನ್ನು ನೀಡಬೇಕಿದೆ. ಇನ್ನುಳಿದಂತೆ "ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ"ಯನ್ನು ತರುಣ್ ಸುಧೀರ್ ಚಿತ್ರ ಮಾಡಲು ಹೊರಟಿದ್ದಾರೆ. ನಿರ್ಮಾಪಕರಾಗಿ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರವನ್ನು ಪುನೀತ್ ರಂಗಸ್ವಾಮಿ ನಿರ್ದೇಶನ ಮಾಡಲಿದ್ಧಾರೆ.


Click it and Unblock the Notifications











