ನಟ ದರ್ಶನ್ ಲಕ್ಕಿ ಥಿಯೇಟರ್ ನರ್ತಕಿಯಲ್ಲಿ 'ಕಾಟೇರ' ಬಿಡುಗಡೆಯಾಗದಿರಲು ಕಾರಣವೇನು ಗೊತ್ತಾ...?
ಚಂದನವನದಲ್ಲಿ ಸದ್ಯಕ್ಕೆ 'ಕಾಟೇರ' ಸದ್ದು ಮಾಡುತ್ತಿದೆ. ಯಾವ ಪ್ಯಾನ್ ಇಂಡಿಯಾ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಹವಾ ಸೃಷ್ಟಿಸಿದೆ. ಈಗಾಗಲೇ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ಸಾಬೀತು ಮಾಡುತ್ತಿದೆ. ನಟ ದರ್ಶನ್ ಅಭಿಮಾನಿಗಳು ಹಬ್ಬ ಮಾಡಲು ಸಿದ್ದರಾಗಿದ್ದಾರೆ.
ಇದೇ ಶುಕ್ರವಾರ ಸಿನಿಮಾ ತೆರೆಗೆ ಬರುತ್ತಿದ್ದು, ಕನ್ನಡಿಗರಿಗೆ ಒಂದು ಭರ್ಜರಿ ಹಿಟ್ ಸಿನಿಮಾ ಮೂಲಕ ಈ ವರ್ಷವನ್ನು ಸಂಭ್ರಮಿಸುವಂತೆ ಮಾಡಲು 'ಕಾಟೇರ' ತಂಡ ಸಿದ್ದವಾಗಿದೆ. ಇನ್ನು, ಕೆಜೆ ರಸ್ತೆಯ ನರ್ತಕಿ ಥಿಯೇಟರ್‌ನಲ್ಲಿ 'ಕಾಟೇರ' ಬಿಡುಗಡೆಯಾಗಯತ್ತಿಲ್ಲ. ದರ್ಶನ್ ಅವರ ಲಕ್ಕಿ ಥಿಯೇಟರ್ ಎಂದು ಇದನ್ನು ಕರೆಯಲಾಗುತ್ತದೆ. ಇದಕ್ಕೆ ಡಿ ಬಾಸ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು.

ನರ್ತಕಿ ಥಿಯೇಟರ್‌ನಲ್ಲಿ 'ಕಾಟೇರ'ನ ದರ್ಶನವಿಲ್ಲ!
ನರ್ತಕಿ ಕಾಟೇರ ಮೇನ್ ಥಿಯೇಟರ್ ಆಗುತ್ತದೆ ಎಂಬ ಆಸೆಯಲ್ಲಿ ಫ್ಯಾನ್ಸ್ ಇದ್ದರು. ಆದರೆ, ನರ್ತಕಿಯಲ್ಲಿ ಸಿನಿಮಾ ರಿಲೀಸ್ ಆಗದ ಕಾರಣ. ಅನುಪಮಾ ಚಿತ್ರಮಂದಿರದಲ್ಲಿ ಕಾಟೇರನ ದರ್ಶನವಾಗುತ್ತಿದೆ. ನರ್ತಕಿಯಲ್ಲಿ ಪ್ರಭಾಸ್ ನಟನೆಯ 'ಸಲಾರ್' ಕನ್ನಡ ವರ್ಷನ್ ಸಿನಿಮಾ ಪ್ರದರ್ಶನವಾಗುತ್ತಿದೆ. ಇದು ಡಿ ಬಾಸ್ ಫ್ಯಾನ್ಸ್‌ಗೆ ಬೇಸರ ತರಿಸಿತ್ತು.
ಇತ್ತೀಚಿಗೆ 'ಮೇನ್ ಥಿಯೇಟರ್' ಎಂಬ ಕಾನ್ಸೆಪ್ಟ್ ಕಡಿಮೆ ಆಗುತ್ತಿದೆ. ಆದರೆ, ಗಾಂಧಿನಗರದ ನರ್ತಕಿ, ಸಂತೋಷ್, ಭೂಮಿಕಾ, ಅನುಪಮ ಚಿತ್ರಮಂದಿರಗಳ ಮುಂದೆ ಸಿನಿಮಾ ಬಿಡುಗಡೆ ದಿನ ಜಾತ್ರೆಯೇ ನಡೆಯುತ್ತದೆ. ನೆಚ್ಚಿನ ನಟನ ಚಿತ್ರವನ್ನು ಸಂಭ್ರಮಿಸುತ್ತಾರೆ ಫ್ಯಾನ್ಸ್. ಅಂತಹದರಲ್ಲಿ ನರ್ತಕಿಯಿಂದ ಸಲಾರ್ ತೆಗೆದು ಕಾಟೇರ ಸಿನಿಮಾ ಹಾಕದ್ದಕ್ಕೆ ಅಸಮಾಧಾನ ವ್ಯಕ್ತವಾಗಿತ್ತು.
ನರ್ತಕಿಯಲ್ಲಿ ಏಕೆ ಕಾಟೇರನ ದರ್ಶನವಿಲ್ಲ!
ನರ್ತಕಿ ಥಿಯೇಟರ್‌ನಲ್ಲಿ ಏಕೆ 'ಕಾಟೇರ' ಬಿಡುಗಡೆಯಾಗುತ್ತಿಲ್ಲ ಎಂಬುದು ಹಲವರ ಪ್ರಶ್ನೆಯಾಗಿತ್ತು. ಇದಕ್ಕೆ ಸಲಾರ್ ಕಾರಣ ಎಂದೂ ಆರೋಪಗಳು ಕೇಳಿ ಬಂದಿತ್ತು. ಆದರೆ, ಅದಕ್ಕೆ ಅಸಲಿ ಕಾರಣ ಈಗ ತಿಳಿದಿದೆ. ನರ್ತಕಿ ಥಿಯೇಟರ್ ಮಾಲೀಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಿನಿವರ್ಸ್ ಯೂಟ್ಯೂಬ್ ಚಾನೆಲ್ ಈ ಬಗ್ಗೆ ಥಿಯೇಟರ್ ಮಾಲೀಕರನ್ನು ಮಾತನಾಡಿಸಿದ್ದಾರೆ. "ಒಂದು ತಿಂಗಳ ಮುಂಚೆ ಬಾಸ್ ಸಿನಿಮಾ ಇಲ್ಲಿಗೆ ಬಂದಿತ್ತು. ಆದರೆ, ಅಡ್ವಾನ್ಸ್ ಜಾಸ್ತಿ ಕೇಳಿದರು. ಇಲ್ಲಿ ಬಿಡುಗಡೆಯಾಗಿರುವ ದರ್ಶನ್ ಅವರ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ಆದರೆ, ಈಗ ಏನಾಗಿದೆ ಎಂದರೇ, ಮೆಜೆಸ್ಟಿಕ್‌ನಲ್ಲಿ ಸಕತ್ ಕಾಂಪಿಟೇಷನ್ ಆಗಿದೆ. ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅಲ್ಲಿಗೆ ಸಿನಿಮಾ ಹೋಗುತ್ತವೆ" ಎಂದಿದ್ದಾರೆ.
ಮುಂದುವರಿದು, "ನಮ್ಮ ಬಾಸ್ ಫಿಲಂಯಿಂದ ನಾವು ಜೀವನ ಮಾಡಿದ್ದೇವೆ. ಆದರೆ, ನಾವು ಸಿನಿಮಾಗೆ ಇಪ್ಪತ್ತು (20) ಲಕ್ಷ ಕೊಡೋಕೆ ರೆಡಿ ಇದ್ದೇವು. ಆದರೆ, ಅವರು 35 ಲಕ್ಷ ಕೊಟ್ಟಿದ್ದಾರೆ. ಅದಕ್ಕೆ ಸಿನಿಮಾ ಅಲ್ಲಿಗೆ ಹೋಗಿದೆ. ಒಂದು ಸಿನಿಮಾಗೆ ಹಣ, ಬಂಡವಾಳ ಹಾಕಿ ಸಿನಿಮಾ ಮಾಡಿರುತ್ತಾರೆ. ಅವರಿಗೆ ಎಲ್ಲಿ ಜಾಸ್ತಿ ದುಡ್ಡು ಸಿಗುತ್ತೋ ಅಲ್ಲೊಗೆ ಹೋಗ್ತಾರೆ. ಮತ್ತೆ ಸಿನಿಮಾ ಇಲ್ಲಿಗೆ ಬರುವುದಾದರೇ ನಾವು ತೆಗೆದುಕೊಳ್ಳುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.
ಇನ್ನು, ಬಿಡುಗಡೆಗೂ ಮುನ್ನವೇ ಕಾಟೇರ ಸಿನಿಮಾ ಕಲೆಕ್ಷನ್ ವಿಷಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದೆ. ಜೊತೆಗೆ ಐವತ್ತು ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಸಿನಿಮಾ ತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.


Click it and Unblock the Notifications











