Kaatera box office: ಮೊದಲ ದಿನವೇ 'ದರ್ಶನ್' ಅಬ್ಬರ ಸಕತ್ ಜೋರು...ಕೋಟಿ ಕೋಟಿ ಬುಟ್ಟಿಗೆ ಹಾಕಿಕೊಂಡ 'ಕಾಟೇರ'
ನಟ ದರ್ಶನ್ ಮತ್ತು ನಟಿ ಆರಾಧನಾ ರಾಮ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ಕಾಟೇರ' ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಡಿಸೆಂಬರ್ 29 ರಂದು ಮಧ್ಯರಾತ್ರಿಯೇ ರಿಲೀಸ್ ಆಗಿದೆ. ಮಧ್ಯರಾತ್ರಿಯ ಎಲ್ಲಾ ಶೋಗಳು ಹೌಸ್ ಫುಲ್ ಆಗಿದ್ದವು. ಈಗ ಡಿಸೆಂಬರ್ 30 (ಶನಿವಾರ) ರ ಬಹುತೇಕ ಶೋಗಳು ಹೌಸ್ಫುಲ್ ಆಗಿವೆ. ಹೀಗಾಗಿ ಕರುನಾಡಿನಲ್ಲಿ ಕಾಟೇರನ ಅಬ್ಬರ ಸಕತ್ ಜೋರಾಗಿಯೇ ಇದೆ.
ತರುಣ್ ಕಿಶೋರ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಸಿನಿಮಾಕ್ಕೆ ವಿಮರ್ಶಕರು ಹಾಗೂ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಎರಡನೇ ದಿನವು ಸಿನಿಮಾ ಹೌಸ್ ಫುಲ್ ಆಗಿದ್ದು, ಮೊದಲ ದಿನ 'ಕಾಟೇರ' ತೆಗೆದ ಬೆಳೆ ಎಷ್ಟು ಎನ್ನುವ ಲೆಕ್ಕಾಚಾರಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ಇದಕ್ಕೆ ಉತ್ತರವಾಗಿ ಮೊದಲ ದಿನವೇ ದರ್ಶನ್ ಚಿತ್ರ ಬರೋಬ್ಬರಿ 19.79 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಮೊದಲ ದಿನ 19.79 ಕೋಟಿ ಬಾಚಿಕೊಂಡ 'ಕಾಟೇರ'
'ಕಾಟೇರ' ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಇದು ಅಪ್ಪಟ ಕನ್ನಡಿಗರ ಸಿನಿಮಾ ಎಂದೂ, ಕನ್ನಡದ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಇಲ್ಲಿನ ನೆಲ, ಜನ, ಭಾಷೆ, ರೈತರು, ಉಳುವವನೇ ಭೂಮಿಯ ಒಡೆಯ ಕಾಯ್ದೆಗಳನ್ನು ಆಧಾರವಾಗಿಟ್ಟುಕೊಂಡು, ನೈಜ್ಯ ಘಟನೆಗಳ ಸುತ್ತ ಹೆಣೆದಿರುವ ಚಿತ್ರ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಸಿನಿಮಾ 'ಕಾಟೇರ'.ಅಭಿಮಾನಿಗಳು ಸಿನಿಮಾಗಾಗಿ ಕಾತುರದಿಮದ ಕಾಯುತ್ತಿದ್ದರು. ಇದಕ್ಕೆ ದರ್ಶನ್ ನಿರಾಸೆ ಮಾಡಿಲ್ಲ. ಹಾಗೆಯೇ ದರ್ಶನ್ ಅವರ ನಂಬಿಕೆಗೂ ಯಾವುದೇ ಪೆಟ್ಟು ಬಿದ್ದಿಲ್ಲ. ಕಾಟೇರ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ 19 ಕೋಟಿ 79 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಹಲವು ದಾಖಲೆಗಳನ್ನು ಮುರಿದಿದೆ. ಕನ್ನಡಿಗರು 'ಕಾಟೇರ'ನನ್ನು ಅಪ್ಪಿಕೊಂಡಿದ್ದಾರೆ.

ಇನ್ನು, ರಾಜ್ಯದ ಸಿಂಗಲ್ ಸ್ಕ್ರೀನ್ ಪರದೆಗಳಲ್ಲಿ, ಮಲ್ಟಿ ಪ್ಲೆಕ್ಸ್ ಅಲ್ಲದ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಸಾಮಾನ್ಯ ಥಿಯೇಟರ್‌ಗಳಲ್ಲಿಯೂ 'ಕಾಟೇರ' ಬಿಡುಗಡೆಯಾಗಿದೆ. ಅವುಗಳ ಲೆಕ್ಕಾ ಇನ್ನೂ ಸರಿಯಾಗಿ ಸಿಕ್ಕಿರುವುದಿಲ್ಲ. ಹೀಗಾಗಿ, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ.
ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ದಾಖಲೆ ಮಾಡಿದ್ದ 'ಕಾಟೇರ'
ಇನ್ನು, 'ಕಾಟೇರ' ಬಿಡುಗಡೆಗೂ ಮುನ್ನವೇ ಕೋಟ್ಯಾಂತರ ರೂಪಾಯಿ ಬಾಚಿಕೊಂಡಿತ್ತು. ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿಯೇ ಕೋಟಿ ರೂಪಾಯಿ ಗಳಿಸಿತ್ತು. ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾವೊಂದರ ಸಾಧನೆ ಇದು ಎಂದು ಎಲ್ಲರು ಹುಬ್ಬೇರಿಸಿದ್ದರು. 'ಕಾಟೇರ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದರೇ ಅದರ ಬಾಕ್ಸ್ ಆಫಿಸ್ ಕಲೆಕ್ಷನ್ ಇನ್ನೂ ಜಾಸ್ತಿ ಇರುತ್ತಿತ್ತು. ಆದರೆ, ಇದು ಬರಿ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರೂ, ರಾಜ್ಯದ ಎಲ್ಲಾ ಕಡೆ ಚಿತ್ರಮಂದಿರ ತುಂಬಿದೆ ಎಂಬ ಬೋರ್ಡ್‌ಗಳು ರಾರಾಜಿಸುತ್ತಿವೆ.
ಕಾಟೇರ ಸಿನಿಮಾ ಮೂಲಕ ಕನಸಿನ ರಾಣಿ ನಟಿ ಮಾಲಾಶ್ರೀ ಮತ್ತು ನಿರ್ಮಾಪಕ ಕೋಟಿ ರಾಮು ಅವರ ಮಗಳು ಆರಾಧನಾ ರಾಮ್ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಚಿತ್ರದಲ್ಲಿ ಜಗಪತಿ ಬಾಬು, ಶೃತಿ, ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ವಿನೋದ್ ಆಳ್ವಾ ಅವರ ನಟನೆಯನ್ನು ಕೊಂಡಾಡಲಾಗುತ್ತಿದೆ. ನಟ ದರ್ಶನ್ ಯಾವುದೇ ಬಿಲ್ಡಪ್ ಇಲ್ಲದೆ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಮಾತುಗಳು ಡಿಬಾಸ್ ಫ್ಯಾನ್ಸ್ ಹೇಳುತ್ತಿದ್ದಾರೆ.


Click it and Unblock the Notifications











