ರಾಷ್ಟ್ರ ಪ್ರಶಸ್ತಿ ಬರಬೇಕು ಎಂಬ ಕೂಗಿನ ನಡುವೆ, 'ಕಾಟೇರ' ಯಶಸ್ಸು ನನಗೆ ಆಸ್ಕರ್ ಪ್ರಶಸ್ತಿಗಿಂತ ಹೆಚ್ಚು ಎಂದ ನಟ ದರ್ಶನ್
ಸ್ಯಾಂಡಲ್‌ವುಡ್ ನಟ ದರ್ಶನ್ ಅವರ 'ಕಾಟೇರ' ಸಕತ್ ಹಿಟ್ ಆಗುತ್ತಿದೆ. ಈ ಸಿನಿಮಾ ಮೂಲಕ ನಟ ತಾನು 'ಬಾಕ್ಸ್ ಆಫೀಸ್ ಸುಲ್ತಾನ್' ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಕಾಟೇರದಲ್ಲಿನ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಇದೇ ವೇಳೆ ಪ್ರಶಸ್ತಿಗಳ ಬಗ್ಗೆ ನಟ ದರ್ಶನ್ ಮಾತನಾಡಿದ್ದಾರೆ.
ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಬ್ಯಾನರ್ ಅಡಿಯಲ್ಲಿ ಕಾಟೇರಾಕ್ಕೆ ರಾಕ್‌ಲೈನ್ ವೆಂಕಟೇಶ್ ಬಮಡವಾಳ ಹಾಕಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ವಿಷಯದಲ್ಲಿ ವಿತ್ರರಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕಾಟೇರ ಕಲೆಕ್ಷನ್ ಬಗ್ಗೆ ಮಾಹಿತಿ ದೊರೆಯುತ್ತಲೇ ಇದೆ. ಸಂಖ್ಯೆಗಳ ಬಗ್ಗೆ ಯಾವಾಗಲೂ ಬಿಗಿಯಾಗಿದ್ದರೂ, ಕನ್ನಡ ಡಿಸೆಂಬರ್ 29 ರಂದು ಸಿನಿಮಾ ಬಿಡುಗಡೆಯಾದಾಗಿನಿಂದ ಕನಿಷ್ಠ 86 ಕೋಟಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ.

ಆಸ್ಕರ್ ಪ್ರಶಸ್ತಿ ಗೆಲ್ಲುವುದಕ್ಕಿಂತ ಹೆಚ್ಚು: ದರ್ಶನ್
'ಕಾಟೇರ' ಸಿನಿಮಾದಲ್ಲಿ ದರ್ಶನ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ವಿಮರ್ಶಕರು, ಅಭಿಮಾನಿಗಳು ದರ್ಶನ್ ಅವರ ಅಭಿನಯವನ್ನು ಹೊಗಳಿದ್ದಾರೆ. ಸಿನಿಮಾ ನಟನೆಗಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ, ಇದೆ ವೇಳೆ ಚಾಲೆಂಜಿಂಗ್ ಸ್ಟಾರ್ ಅದಕ್ಕೆ ಸಂಪೂರ್ಣ ವಿಭಿನ್ನವಾದ ಉತ್ತರ ನೀಡಿದ್ದಾರೆ.
ಜನವರಿ 1 ರಂದು ನಡೆದ ಕಾಟೇರ ಸಕ್ಸಸ್ ಮೀಟ್‌ನಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ನಟ ದರ್ಶನ್, "ನಾನು ಕಮರ್ಷಿಯಲ್ ಸಿನಿಮಾಗಳನ್ನು ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಮಾಡುತ್ತೇನೆ. ನನಗೆ ಆಸ್ಕರ್ ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ಕಾಟೇರಾ ಚಿತ್ರದ ಯಶಸ್ಸು ಹೆಚ್ಚು. ನಟನೆಗಾಗಿ ಪ್ರಶಸ್ತಿಗಳನ್ನು ಗೆಲ್ಲುವ ಇರಾದೆ ನನಗಿದ್ದರೆ, ಪ್ರತಿಭೆಯನ್ನು ಪ್ರದರ್ಶಿಸಲು ಸಾಕಷ್ಟು ಸ್ಥಳಾವಕಾಶವಿರುವ ನಾನ್ ಕಮರ್ಷಿಯಲ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ" ಎಂದು ಹೇಳಿದ್ದಾರೆ.

ಪ್ಯಾನ್-ಇಂಡಿಯಾ ಮಟ್ಟದಲ್ಲಿ ಕಾಟೇರ ಬಿಡುಗಡೆ ಏಕಿಲ್ಲ...?
ಕಾಟೇರ ಸಿನಿಮಾದ ಕಥೆ 1970 ರ ದಶಕದಲ್ಲಿ ನಡೆಯುವ ರೈತ ಹೋರಾಟದ ಕಥೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರನ್ನು ಇದು ಸುಲಭವಾಗಿ ತಲುಪಬಹುದು ಆದರೂ ಸಿನಿಮಾವನ್ನು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈಗ ಸಿನಿಮಾಗೆ ಸಿಗುತ್ತಿರುವ ಮನ್ನಣೆ ಮತ್ತು ಬೇಡಿಕೆಯನ್ನು ಆಧರಿಸಿ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲು ಸಿದ್ಧರೆ ನಡೆಸಲಾಗಿದೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.
ಇನ್ನು, ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡಲು ಏಕೆ ಪ್ರಾಮುಖ್ಯತೆ ನೀಡುತ್ತೇನೆ ಎಂಬುದಕ್ಕೆ ನಟ ದರ್ಶನ್ ಉತ್ತರಿಸಿದ್ದಾರೆ. "ಉದಾಹರಣೆಗೆ, ಪಂಜಾಬ್ ಪ್ರದೇಶದ ರೈತನು ವಿಭಿನ್ನವಾದ ಡ್ರೆಸ್ ಮತ್ತು ಪದ್ಧತಿಗಳನ್ನು ಹೊಂದಿದ್ದಾನೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕಾದ ಸಂದರ್ಭದಲ್ಲಿ, ಕಥೆಯನ್ನು ಎಲ್ಲರಿಗೂ ಬೇಕಾಗುವಂತೆ ಸಮರ್ಥಿಸುವುದು ಸುಲಭವಲ್ಲ. ವಿಶೇಷವಾಗಿ ಅಂತಹ ಸಂದರ್ಭಗಳಲ್ಲಿ ಸ್ಕ್ರಿಪ್ಟ್‌ನ ಆತ್ಮ ಮತ್ತು ಸಾರವು ಕಳೆದುಹೋಗುವ ಸಾಧ್ಯತೆಗಳಿವೆ" ಎಂದು ಹೇಳಿದ್ದಾರೆ .ಕಾಟೇರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಕೂಡ ಇದನ್ನೇ ಹೇಳಿದ್ದಾರೆ.
ವಿದೇಶದಲ್ಲಿ ಕಾಟೇರ
ಕಾಟೇರ ಸಿನಿಮಾ ವಿದೇಶಗಳಲ್ಲಿಯೂ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವು ಶೀಘ್ರದಲ್ಲೇ ಗಲ್ಫ್, ಯುರೋಪ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಜನವರಿ 7 ರಂದು ದುಬೈನಲ್ಲಿ ಕಾಟೇರಾ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ದರ್ಶನ್ ಮತ್ತು ಅವರ ತಂಡ ಸ್ಕ್ರೀನಿಂಗ್‌ಗೆ ಹಾಜರಾಗುವ ನಿರೀಕ್ಷೆಯಿದೆ. ಜನವರಿ 4 ರಂದು ಕತಾರ್, ಬಹ್ರೇನ್ ಮತ್ತು ಒಮಾನ್‌ನಲ್ಲಿ ಮತ್ತು ಜನವರಿ 5 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications










