'ಕಾಟೇರ' ಸಕ್ಸಸ್ ಪಾರ್ಟಿ? FIR ದಾಖಲು: ಸ್ಟಾರ್ ನಟನೂ ಅಲ್ಲಿದ್ರಾ?

ಇತ್ತೀಚೆಗೆ ಪಬ್‌ವೊಂದರಲ್ಲಿ 'ಕಾಟೇರ' ಚಿತ್ರದ ಸಕ್ಸಸ್ ಪಾರ್ಟಿ ನಡೀತು. ಈ ಪಾರ್ಟಿ ಹಿನ್ನೆಲೆ ಬೆಂಗಳೂರಿನ ಪಬ್‌ವೊಂದರ ಮೇಲೆ ಎಫ್‌ಐಆರ್ ದಾಖಲಾಗಿದೆ. ಬಣ್ಣದಲೋಕದಲ್ಲಿ ಪಾರ್ಟಿಗಳು ಸರ್ವೇ ಸಾಮಾನ್ಯ. ಆದರೆ ನಿಮಯ ಉಲ್ಲಂಘಿಸಿ ಪಾರ್ಟಿ ನಡೆಸಿದ ಕಾರಣ ರಾಜಾಜಿನಗರದ ಜೆಟ್ಲಾಗ್‌ ಪಬ್‌ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ. ಸದ್ಯ ಈ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಜನವರಿ 3ರಂದು ಓರಾಯನ್ ಮಾಲ್‌ನಲ್ಲಿ 'ಕಾಟೇರ' ಚಿತ್ರದ ಸೆಲೆಬ್ರೆಟಿ ಶೋ ಆಯೋಜಿಸಲಾಗಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿದ್ದ ಜೆಟ್ಲಾಗ್‌ ಪಬ್‌ನಲ್ಲಿ ಸಂಭ್ರಮಾರಚರಣೆ ನಡೆದಿತ್ತು. ಇಡೀ ಚಿತ್ರತಂಡ ಕೇಕ್ ಮಾಡಿ ಸಂಭ್ರಮಿಸಿತ್ತು. ಬಳಿಕ ರಾತ್ರಿ ಆರಂಭವಾದ ಪಾರ್ಟಿ ಮುಂಜಾನೆ 4 ಗಂಟೆಯವರೆಗೂ ಮುಂದುವರೆದಿತ್ತು. ಸ್ಟಾರ್‌ ನಟನೂ ಸೇರಿದಂತೆ ಹಲವು ನಟ, ನಟಿಯರು ಈ ಲೇಟ್ ನೈಟ್ ಪಾರ್ಟಿಯಲ್ಲಿ ಹಾಜರಿದ್ದರು ಎನ್ನಲಾಗ್ತಿದೆ. ನಿಯಮಗಳ ಪ್ರಕಾರ ರಾತ್ರಿ 1 ಗಂಟೆಗೆ ಪಬ್, ಬಾರ್, ರೆಸ್ಟೋರೆಂಟ್ ಮುಚ್ಚಬೇಕು. ಆದರೆ ಆಪ್ತರು ಎನ್ನುವ ಕಾರಣಕ್ಕೆ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಲು ಪಬ್ ಮಾಲೀಕರು ಬಿಟ್ಟಿದ್ರಾ? ಎನ್ನುವ ಪ್ರಶ್ನೆ ಮೂಡಿದೆ.

kaatera success party? FIR against pub for violating rules

ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಜೆಟ್ಲಾಗ್ ಪಬ್ ಮಾಲೀಕರಾದ ಶಶಿರೇಖಾ ಹಾಗೂ ಮ್ಯಾನೇಜರ್ ಪ್ರಶಾಂತ್ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಪಾರ್ಟಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಸಿಟಿವಿ ಫುಟೇಜ್ ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಿನ ಜಾವದವೆರೆಗೂ ಪಾರ್ಟಿಯಲ್ಲಿ ಇದ್ದವರು ಯಾರು? ಪಾರ್ಟಿಯಲ್ಲಿ ಏನೆಲ್ಲಾ ನಡೀತು? ಅವಧಿ ಮೀರಿ ಪಾರ್ಟಿಗೆ ಅವಕಾಶ ಕೊಟ್ಟಿದ್ದು ಯಾಕೆ? ಪಾರ್ಟಿಗೆ ಡ್ರಗ್ಸ್‌ ಸರಬರಾಜು ಆಗಿತ್ತಾ? ಪಾರ್ಟಿ ಆಯೋಜಿಸಿದ್ದು ಯಾರು? ಎನ್ನುವ ಕೋನದಲ್ಲೂ ತನಿಖೆ ನಡೆಯುತ್ತಿದೆ.

ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು‌ ಉಲ್ಲಂಘನೆ ಆರೋಪದಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ. ದೂರಿನಲ್ಲಿ ತಿಳಿಸಿರುವ ಪ್ರಕಾರ ಜೆಟ್ಲಾಗ್ ಎನ್ನುವ ರೆಸ್ಟೋರೆಂಟ್‌ನಲ್ಲಿ ಬೆಳಗ್ಗೆ 3 ಗಂಟೆವರೆಗೂ ವಿದ್ಯುತ್ ದೀಪಗಳನ್ನು ಆರಿಸದೇ ಗಿರಾಕಿಗಳನ್ನು ಸೇರಿಸಿಕೊಂಡು ಮದ್ಯ ಸರಬರಾಜು ಮಾಡುತ್ತಾ ಕುಡಿಯಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಪೊಲೀಸರು ದಾಳಿ ಮಾಡಿ ನಿಯಮ ಉಲ್ಲಂಘಿಸಿದ್ದಕ್ಕಾಗಿದೆ ರೆಸ್ಟೋರೆಂಟ್ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ.

More from Filmibeat

English summary
kaatera success party? police complaint filed against pub.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X