'ಭೂಗತ ದೊರೆ'ಯಾಗಿ ರಿಯಲ್ ಸ್ಟಾರ್ ಉಪೇಂದ್ರ ಹೇಗೆ ಕಾಣ್ತಾರೆ ಗೊತ್ತಾ.?

Recommended Video

'ಕಬ್ಜ' ಚಿತ್ರದಲ್ಲಿ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಉಪೇಂದ್ರ | Filmibeat Kannada

'ಓಂ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ರೌಡಿಸಂ ಚಿತ್ರಗಳ ಹವಾ ಸೃಷ್ಟಿಸಿದವರು ನಿರ್ದೇಶಕ ಉಪೇಂದ್ರ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಗೆ ಲಾಂಗ್ ಕೊಟ್ಟಿದ್ದೂ ಇದೇ ಉಪೇಂದ್ರ. ಇದೀಗ ಅದೇ ಉಪೇಂದ್ರ 'ಕಬ್ಜ' ಚಿತ್ರದಲ್ಲಿ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಐ ಲವ್ ಯೂ' ಬಳಿಕ ನಿರ್ದೇಶಕ ಆರ್.ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ 'ಕಬ್ಜ' ಚಿತ್ರಕ್ಕಾಗಿ ಒಂದಾಗಿದ್ದಾರೆ. ಏಳು ಭಾಷೆಗಳಲ್ಲಿ 'ಕಬ್ಜ' ತೆರೆಗೆ ಬರಲಿದೆ. ಸದ್ಯದಲ್ಲೇ 'ಕಬ್ಜ' ಶೂಟಿಂಗ್ ಆರಂಭವಾಗಲಿದ್ದು, ಈಗಾಗಲೇ ಚಿತ್ರದ ಫೋಟೋಶೂಟ್ ಕಂಪ್ಲೀಟ್ ಆಗಿದೆ.

Kabja Photoshoot: Upendra as Underworld Don

'ಕಬ್ಜ' ಹೇಳಿ ಕೇಳಿ 80 ರ ದಶಕದ ಓರ್ವ ಡಾನ್ ನ ಕಥೆ. ಹೀಗಾಗಿ, ಟಾಪ್ ಟು ಬಾಟಂ ರೆಟ್ರೋ ಸ್ಟೈಲ್ ನಲ್ಲಿ 'ಕಬ್ಜ' ಫೋಟೋಶೂಟ್ ನಡೆಸಲಾಗಿದೆ. ಬೆಲ್ ಬಾಟಂ ಪ್ಯಾಂಟು, ಫ್ಲೋರಲ್ ಶರ್ಟ್, ಲೆದರ್ ಜ್ಯಾಕೆಟ್ ಧರಿಸಿ ಕೈಯಲ್ಲಿ ಗನ್, ಕೋವಿ ಹಿಡಿದು ಭೂಗತ ದೊರೆಯಾಗಿ ಉಪೇಂದ್ರ ಮಿಂಚಿದ್ದಾರೆ.

'ಕಬ್ಜ' ಚಿತ್ರದ ಲೇಟೆಸ್ಟ್ ಫೋಟೋಗಳನ್ನ ನೋಡಿ ರಿಯಲ್ ಸ್ಟಾರ್ ಫ್ಯಾನ್ಸ್ ಕ್ಲೀನ್ ಬೌಲ್ಡ್ ಆಗಿದ್ದಾರೆ. 'ಕಬ್ಜ' ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ.

Kabja Photoshoot: Upendra as Underworld Don

ಅಂದ್ಹಾಗೆ, 'ಕಬ್ಜ' ಚಿತ್ರದಲ್ಲಿ ವಿವಿಧ ಭಾಷೆಯ ಏಳು ಖಳನಟರು ಕಾಣಿಸಿಕೊಳ್ಳಲಿದ್ದಾರೆ. ಜಗಪತಿ ಬಾಬು, ಪ್ರಕಾಶ್ ರೈ, ನಾನಾ ಪಾಟೇಕರ್, ಪ್ರದೀಪ್ ರಾವತ್ ಸೇರಿದಂತೆ ಏಳು ವಿಲನ್ ಗಳು ಉಪೇಂದ್ರ ಎದುರು ತೊಡೆ ತಟ್ಟಲಿದ್ದಾರೆ.

ಏಳು ಭಾಷೆಯಲ್ಲಿ 'ಕಬ್ಜ' ತೆರೆಕಾಣಲಿದ್ದು, ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಆರ್.ಚಂದ್ರು ಮೇಲಿದೆ. ಇದೇ ತಿಂಗಳು ಸೆಟ್ಟೇರಲಿರುವ 'ಕಬ್ಜ' ಮಂಗಳೂರು, ಮುಂಬೈ, ಕಲ್ಕತ್ತ, ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಸಲಿದೆ. ಈ ಚಿತ್ರಕ್ಕಿನ್ನೂ ನಾಯಕಿ ಫೈನಲ್ ಆಗಿಲ್ಲ.

More from Filmibeat

English summary
Have a look at Real Star Upendra starrer Kannada Movie Kabja photos. Kabja is Directed by R Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X