For Quick Alerts
  ALLOW NOTIFICATIONS  
  For Daily Alerts

  'ಕಬ್ಜ' ಚಿತ್ರದ ನಾಯಕಿ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಆರ್ ಚಂದ್ರು

  |

  ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಕಬ್ಜ ಚಿತ್ರಕ್ಕೆ ನಾಯಕಿಯಾಗಿ 'ರಾಬರ್ಟ್' ಖ್ಯಾತಿಯ ಆಶಾ ಭಟ್ ಆಯ್ಕೆಯಾಗಿದ್ದಾರೆ, ಅಧಿಕೃತ ಪ್ರಕಟಣೆಯೊಂದೆ ಬಾಕಿ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡಿತ್ತು.

  ಕಬ್ಜಾ ಚಿತ್ರಕ್ಕೆ ನಾಯಕಿ ಯಾರೂ ಅನ್ನೋದೇ ಇನ್ನೂ ಫೈನಲ್ ಆಗಿಲ್ವಂತೆ | Filmibeat Kannada

  ಆದರೆ, ಈ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ನಿರ್ದೇಶಕ ಆರ್ ಚಂದ್ರು ಸ್ಪಷ್ಟಪಡಿಸಿದ್ದಾರೆ. ''ನಮ್ಮ ಕಬ್ಜ ಚಿತ್ರದ ನಾಯಕಿಯ ಆಯ್ಕೆ ಇನ್ನು ಅಂತಿಮವಾಗಿಲ್ಲ. ಈಗ ನಾಯಕಿ ವಿಚಾರದಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಶೀಘ್ರದಲ್ಲಿ ನಮ್ಮ ಚಿತ್ರದ ನಾಯಕಿಯನ್ನು ನಾನೇ ಖುದ್ದಾಗಿ ಪ್ರಕಟಿಸುತ್ತೇವೆ' ಎಂದು ತಿಳಿಸಿದ್ದಾರೆ.

  ದರ್ಶನ್ ನಾಯಕಿಗೆ ಅದೃಷ್ಟ: 'ಕಬ್ಜ' ಚಿತ್ರಕ್ಕೆ ಕನ್ನಡದವರೇ ಹೀರೋಯಿನ್?ದರ್ಶನ್ ನಾಯಕಿಗೆ ಅದೃಷ್ಟ: 'ಕಬ್ಜ' ಚಿತ್ರಕ್ಕೆ ಕನ್ನಡದವರೇ ಹೀರೋಯಿನ್?

  ರಾಬರ್ಟ್ ಸಿನಿಮಾ ಬಳಿಕ ಆಶಾ ಭಟ್ ಯಾವುದೇ ಪ್ರಾಜೆಕ್ಟ್ ಓಕೆ ಮಾಡಿರಲಿಲ್ಲ. ಕಬ್ಜ ಚಿತ್ರದಲ್ಲಿ ನಟಿಸಲು ಕೇಳಲಾಗಿದೆ. ಪ್ರಾಥಮಿಕ ಹಂತದ ಮಾತುಕತೆ ಸಹ ಆಗಿದೆ ಎಂದು ಹೇಳಲಾಗಿತ್ತು. ಆದ್ರೆ ಈ ಸುದ್ದಿ ಬರಿ ವದಂತಿಯಾಗಿದೆ.

  ಇದಕ್ಕೂ ಮುಂಚೆ ಕಾಜಲ್ ಅಗರ್‌ವಾಲ್ ಹೆಸರು ಕೇಳಿ ಬಂದಿತ್ತು. ಆಗಲೂ ಆರ್ ಚಂದ್ರು ಅವರೇ ಸ್ಪಷ್ಟನೆ ನೀಡಿ ಕಾಜಲ್ ನಟಿಸುತ್ತಿಲ್ಲ ಎಂದು ತಿಳಿಸಿದ್ದರು.

  ಪ್ರಸ್ತುತ, ಬೆಂಗಳೂರಿನಲ್ಲಿ ಕಬ್ಜ ಚಿತ್ರೀಕರಣ ನಡೆಯುತ್ತಿದ್ದು, ಉಪೇಂದ್ರ ಅವರು ಭಾಗವಹಿಸಿದ್ದರು. ಆದ್ರೆ, ಎರಡು ದಿನಗಳ ಹಿಂದೆ ಶೂಟಿಂಗ್ ವೇಳೆ ಉಪೇಂದ್ರ ಅವರ ತಲೆಗೆ ಪೆಟ್ಟು ಬಿದ್ದ ಕಾರಣ ವಿಶ್ರಾಂತಿ ಪಡೆಯುತ್ತಿದ್ದಾರೆ.

  ವಿಡಿಯೋ: ಶೂಟಿಂಗ್ ಸೆಟ್‌ನಲ್ಲಿ ನಟ ಉಪೇಂದ್ರ ತಲೆಗೆ ಪೆಟ್ಟುವಿಡಿಯೋ: ಶೂಟಿಂಗ್ ಸೆಟ್‌ನಲ್ಲಿ ನಟ ಉಪೇಂದ್ರ ತಲೆಗೆ ಪೆಟ್ಟು

  ಇನ್ನುಳಿದಂತೆ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ನಟಿಸುತ್ತಿದ್ದಾರೆ. ಭಾರ್ಗವ್ ಬಕ್ಷಿ ಎಂಬ ಪಾತ್ರದಲ್ಲಿ ಸುದೀಪ್ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ. ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸ್, ಡ್ಯಾನಿಶ್ ಅಖ್ತರ್ ಸೈಫಿ, ಅನೂಪ್ ರೇವಣ್ಣ ಸೇರಿದಂತೆ ಹಲವರು ತಾರಬಳಗದಲ್ಲಿದ್ದಾರೆ.

  ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಕಬ್ಜ ಚಿತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಕುಮಾರ್ ಕಲಾ ನಿರ್ದೇಶಿಸಲಿದ್ದಾರೆ. ರವಿ ಬಸ್ರೂರು ಸಂಗೀತವಿದೆ. ಎಂಟಿಬಿ ನಾಗರಾಜ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಎಜೆ ಶೆಟ್ಟಿ ಛಾಯಾಗ್ರಹಣವಿದೆ.

  English summary
  Director R Chandru clarified that Kabza movie female lead role is not finalized.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X