Yash19: "ಯಶ್ ಮುಂದಿನ ಸಿನಿಮಾ ಯಾಕೆ ತಡ ಆಗುತ್ತಿದೆ ಅಂತ ಅವರನ್ನೇ ಕೇಳಿ": ಉಪೇಂದ್ರ

'KGF' ಚಾಪ್ಟರ್‌ -2 ಸಿನಿಮಾ ರಿಲೀಸ್ ಆಗಿ ವರ್ಷ ಆಗ್ತಾ ಬಂತು. ಆದರೆ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಸುಳಿವು ಇನ್ನು ಸಿಕ್ಕಿಲ್ಲ. ಸಕ್ಸಸ್‌ನ ಉತ್ತುಂಗದಲ್ಲಿ ಇರುವಾಗ ಸ್ಟಾರ್ ನಟರೊಬ್ಬರು ಹೀಗೆ ಸಿನಿಮಾ ತಡ ಮಾಡುವುದು ಸರೀನಾ? ಎನ್ನುವ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಇದೇ ಪ್ರಶ್ನೆಯನ್ನು ನಟ ಉಪೇಂದ್ರ ಮುಂದಿಟ್ಟಾಗ ರಿಯಲ್ ಸ್ಟಾರ್ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟರು. ಆ ರೀತಿ ತಡ ಮಾಡಲು ಕಾರಣ ಇರುತ್ತೆ ಎಂದಿದ್ದಾರೆ.

ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಬಿಡುಗಡೆಗೆ ಇನ್ನೆರಡೇ ದಿನ ಬಾಕಿಯಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ದೊಡ್ಡದಾಗಿ ರಿಲೀಸ್ ಆಗುತ್ತಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್ ಕೂಡ ನಡೀತಿದೆ. ಇತ್ತೀಚೆಗೆ ಕನ್ನಡ ಮಾಧ್ಯಮಗಳ ಜೊತೆ ಉಪೇಂದ್ರ ಮಾತನಾಡಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ ಯಶ್ ಮುಂದಿನ ಸಿನಿಮಾ ಬಗ್ಗೆ ಕೂಡ ಉಪ್ಪಿಗೆ ಪ್ರಶ್ನೆ ತೂರಿ ಬಂತು. ಸ್ಟಾರ್‌ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು. ಆದರೆ ಯಶ್ ಮುಂದಿನ ಸಿನಿಮಾ ಘೋಷಣೆ ಮಾಡಲು ಇಷ್ಟು ತಡ ಮಾಡುತ್ತಿರುವುದು ಯಾಕೆ? ಎನ್ನುವ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದರು.

Kabzaa Actor Upendra opens up about delay in KGF actor yashs next movie launch

"ಒಂದು ಸಿನಿಮಾ ಸಕ್ಸಸ್ ಆದರೆ ಎಲ್ಲರೂ ಬ್ಯುಸಿ ಆಗುತ್ತಾರೆ. ಮುಂದಿನ ಸಿನಿಮಾ ಯಾವುದು? ಇದಕ್ಕಿಂತ ದೊಡ್ಡದಾಗಿ ಮಾಡಬೇಕು ಎನ್ನುವ ಚಾಲೆಂಜ್ ಇರುತ್ತದೆ. ತಡ ಆದ್ರೆ ತಪ್ಪೇನಿಲ್ಲ. ಯಾಕಂದರೆ ಅವರಿಗೆ ಫಸ್ಟ್ ಕರೆಕ್ಟ್ ಅನ್ನಿಸಬೇಕು. ನನಗೆ ಅದು ಕರೆಕ್ಟ್ ಅನ್ನಿಸಿದಾಗ ಮಾಡ್ತಾರೆ ಅನ್ನುವುದನ್ನು ಗ್ರೇಟ್ ಆಗಿ ತೆಗೆದುಕೊಳ್ಳಿ. ರಜನಿ ಸರ್ 4 ವರ್ಷ ಸುಮ್ಮನಿದ್ದರು. ಅಣ್ಣಾವ್ರ 5 ವರ್ಷ ಸಿನಿಮಾ ಮಾಡಿರಲಿಲ್ಲ. ನನಗೆ ಒಳ್ಳೆ ಕಥೆ ಸಿಗುವವರೆಗೂ ಸಿನಿಮಾ ಮಾಡಲ್ಲ ಅಂತ. ಅದೆಲ್ಲಾ ತುಂಬಾ ದೊಡ್ಡ ವಿಷಯ ಅಲ್ಲವೇ" ಎಂದರು.

"ಯಶ್‌ ಸಿನಿಮಾ ಮಾಡೋದು ಯಾಕೆ ತಡ ಆಗುತ್ತಿದೆ ಎನ್ನುವುದನ್ನು ಅವರನ್ನೇ ಕೇಳಬೇಕು. ಜಾಸ್ತಿ ಸಿನಿಮಾ ಮಾಡಿದ್ರೆ ಜನಗಳೇ ಬರಲ್ಲ. ಆಮೇಲೆ ಏನು ಮಾಡುವುದು. ಅಲ್ಲೂ ಸಮಸ್ಯೆ ಇದೆ. ಒಬ್ಬ ಹೀರೊಗೆ ಮಾರ್ಕೆಟ್ ಕ್ರಿಯೇಟ್ ಆಗಬೇಕು ಅಂದರೆ ಅವರ ಪರಿಶ್ರಮ, ಸಮಯ ಎಲ್ಲವೂ ಕೌಂಟ್ ಆಗುತ್ತದೆ. ಅದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ನನಗೂ ಹೇಳಿದರು. ವರ್ಷಕ್ಕೆ ನಾಲ್ಕು ಸಿನಿಮಾ ಮಾಡಿ ಅಂತ. ಆದರೆ ಈಗ ಆಗಲ್ಲ."

Kabzaa Actor Upendra opens up about delay in KGF actor yashs next movie launch

"ಈಗ ಪ್ರತಿ ಚಿತ್ರವನ್ನು ಕೇರ್ ತಗೊಂಡು ಮಾಡಬೇಕು. ಮಾಡೋಕೆ ಆಗೊಲ್ಲ ಅಂತ ಅಲ್ಲ. ಆಗಿನ ಸನ್ನಿವೇಶ ಬೇರೆ ಇತ್ತು. ಕೊರೊನಾಗೂ ಮುಂಚೆ ಕೊರೋನಾ ನಂತರ ಸಾಕಷ್ಟು ಬದಲಾವಣೆ ಆಗಿದೆ. ಓಟಿಟಿ ಬಂದಮೇಲೆ ಥಿಯೇಟರ್‌ಗೆ ಬಂದು ನೋಡುವ ಸಿನಿಮಾನೇ ಬೇರೆ ಎಂದು ಡಿಸೈಡ್ ಆಗಿಬಿಟ್ಟಿದ್ದಾರೆ. ಹಾಗಿರುವಾಗ ಸಿನಿಮಾ ಮಾಡುವ ನಟ, ನಿರ್ದೇಶಕ, ತಂತ್ರಜ್ಞರೆಲ್ಲರೂ ಬೇರೆ ತರಹನೇ ಯೋಚನೆ ಮಾಡುತ್ತಾರೆ. ಬೇರೆ ತರಹವೇ ಸಿನಿಮಾ ಮಾಡಬೇಕು ಎಂದು ನೋಡುತ್ತಾರೆ" ಎಂದು ಉಪೇಂದ್ರ ಹೇಳಿದ್ದಾರೆ.

ಇನ್ನು ಆರ್‌. ಚಂದ್ರು ನಿರ್ಮಿಸಿ, ನಿರ್ದೇಶನ ಮಾಡಿರುವ 'ಕಬ್ಜ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ಸುದೀಪ್- ಶಿವಣ್ಣ ಗೆಸ್ಟ್ ಅಪಿಯರೆನ್ಸ್ ಮಾಡಿರೋದು ಮತ್ತೊಂದು ಹೈಲೆಟ್ ಎನ್ನಬಹುದು. ಜಗತ್ತಿನಾದ್ಯಂತ 3000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಮಾರ್ಚ್ 17ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು, ಈಗಾಗಲೇ ಕೆಲವೆಡೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಅಡ್ವಾನ್ಸ್‌ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

More from Filmibeat

English summary
Kabzaa Actor Upendra opens up about delay in KGF actor yash's next movie launch. He said you have ask this question to yash only. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X