Kabzaa Censor : ಕಬ್ಜ ಸೆನ್ಸಾರ್ ಮುಕ್ತಾಯ; ಚಿತ್ರಕ್ಕೆ ಯಾವ ಸರ್ಟಿಫಿಕೇಟ್? ಚಿತ್ರದ ರನ್‌ಟೈಮ್ ಎಷ್ಟು ಗಂಟೆ?

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಮೂರನೇ ಬಾರಿಗೆ ಕೈ ಜೋಡಿಸಿ ತಯಾರಾಗಿರುವ ಕಬ್ಜ ಚಿತ್ರ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸೆಟ್ಟೇರಿದಾಗಿನಿಂದಲೂ ನಿರೀಕ್ಷೆಯನ್ನು ಹುಟ್ಟಿಸಿರುವ ಈ ಚಿತ್ರ ಇತ್ತೀಚೆಗೆ ಹೊಸ ಹೊಸ ಅಪ್‌ಡೇಟ್‌ಗಳನ್ನು ನೀಡಿ ಇದ್ದ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮೂವರು ಸ್ಟಾರ್ ನಟರಾದ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದು ಚಿತ್ರದ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನು ಈ ಚಿತ್ರ ಇದೇ ತಿಂಗಳ 17 ರಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಳ್ಳಲಿದ್ದು, ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಟ್ರೈಲರ್ ಹಾಗೂ ಹಾಡುಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡಿರುವ ಚಿತ್ರತಂಡ ಸದ್ಯ ಬೇರೆ ರಾಜ್ಯಗಳಲ್ಲಿ ಪ್ರಚಾರವನ್ನೂ ಸಹ ಆರಂಭಿಸಿದೆ.

Kabzaa censor certificate, run time and initial theatre list details

ಈ ನಡುವೆಯೇ ಚಿತ್ರದ ಸೆನ್ಸಾರ್ ಮುಕ್ತಾಯಗೊಂಡಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಅನ್ನು ಸೆನ್ಸಾರ್ ಮಂಡಳಿ ನೀಡಿದೆ. ಇನ್ನು ಕಬ್ಜ ಚಿತ್ರದ ರನ್ ಟೈಮ್ ವಿದೇಶದಲ್ಲಿ 2 ಗಂಟೆ 14 ನಿಮಿಷಗಳ ಕಾಲ ಇರಲಿದ್ದು, ಭಾರತದಲ್ಲಿ 2 ಗಂಟೆ 16 ನಿಮಿಷಗಳು ಇರಲಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಚಿತ್ರದ ಇನಿಷಿಯಲ್ ಥಿಯೇಟರ್ ಲಿಸ್ಟ್ ಅನ್ನೂ ಸಹ ಚಿತ್ರತಂಡ ಬಿಡುಗಡೆಗೊಳಿಸಿದ್ದು, ಬೆಂಗಳೂರಿನ ನರ್ತಕಿ ಚಿತ್ರಮಂದಿರ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವಾಗಿದೆ. ನರ್ತಕಿ ಜತೆಗೆ ಲಾಲ್ ಬಾಗ್ ಬಳಿಯ ಊರ್ವಶಿ, ಸ್ಯಾಂಕಿ ರಸ್ತೆಯ ಕಾವೇರಿ, ಸೇವಾ ನಗರದ ಮುಕುಂದ, ಸಂಜಯ್ ನಗರದ ವೈಭವ್, ತಾವರೆಕೆರೆಯ ಬಾಲಾಜಿ, ಮಲ್ಲೇಶ್ವರದ ಸವಿತ, ಉತ್ತರಹಳ್ಳಿಯ ಮುಕ್ತ ಎ2, ನಗರದ ಎಲ್ಲಾ ಪಿವಿಆರ್, ಎಲ್ಲಾ ಐನಾಕ್ಸ್, ಗೋಪಾಲನ್ ಹಾಗೂ ಎಲ್ಲಾ ಸಿನಿಪೊಲಿಸ್‌ಗಳು ಕಬ್ಜ ಚಿತ್ರದ ಇನಿಷಿಯಲ್ ಥಿಯೇಟರ್ ಲಿಸ್ಟ್‌ನಲ್ಲಿವೆ. ಉಳಿದಂತೆ ತುಮಕೂರು, ದೊಡ್ಡಬಳ್ಳಾಪುರ, ತಿಪಟೂರು, ಚನ್ನಪಟ್ಟಣ, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕಲ್ಬುರ್ಗಿ, ರಾಯಚೂರು, ಬೀದರ್, ಶಿವಮೊಗ್ಗ, ಕುಂದಾಪುರ, ಮಣಿಪಾಲ ಹಾಗೂ ಮಂಗಳೂರಿನ ಕೆಲ ಚಿತ್ರಮಂದಿರಗಳೂ ಸಹ ಈ ಇನಿಷಿಯಲ್ ಥಿಯೇಟರ್ ಲಿಸ್ಟ್‌ನಲ್ಲಿವೆ.

Kabzaa censor certificate, run time and initial theatre list details

ಅತ್ತ ಐಎಂಡಿಬಿ ವೆಬ್ ತಾಣದಲ್ಲಿಯೂ ಸಹ ಕಬ್ಜ ಹವಾ ಜೋರಾಗಿದ್ದು, ಭಾರತದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮಾರ್ಚ್ 9ರಂದು ಐಎಂಡಿಬಿ ಟಾಪ್ 10 ಭಾರತದ‌ ಬಹು ನಿರೀಕ್ಷಿತ ಸಿನಿಮಾಗಳ‌ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಕನ್ನಡದ ಆರ್ ಚಂದ್ರು ನಿರ್ದೇಶನದ, ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್ ಕುಮಾರ್ ನಟನೆಯ ಕಬ್ಜ ಅಗ್ರಸ್ಥಾನವನ್ನು ಅಲಂಕರಿಸಿದೆ‌. ಕಬ್ಜ ಚಿತ್ರದ ಈ ಸಾಧನೆ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ.

ಈ‌ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಚಿತ್ರಗಳ ಸಂಪೂರ್ಣ ಪಟ್ಟಿ‌ ಕೆಳಕಂಡಂತಿದೆ.

1. ಕಬ್ಜ
2. ಕಿಸಿ ಕಾ ಭಾಯ್ ಕಿಸಿ ಕಾ ಜಾನ್
3. ಭೋಲಾ
4. ಜ್ಬಿಗಾಟೊ
5. ರಾಣಾ ನಾಯ್ಡು
6. ದಾಸ್ ಕಾ ಧಮ್ಕಿ
7. ವಿರೂಪಾಕ್ಷ
8. ಅಖಿಲನ್
9. ಮಿಸ್ಸಸ್ ಚಟರ್ಜಿ vs ನಾರ್ವೆ
10. ಚೋರ್ ನಿಕಲ್ ಕೆ ಭಾಗಾ

More from Filmibeat

English summary
Kabzaa censor certificate, run time and initial theatre list details. Take a look. ಕ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X