ಕನ್ನಡದ ಸೂಪರ್ ಹಿಟ್ ಸಿನಿಮಾ 'ತಾಜ್ ಮಹಲ್' ತೆರೆಕಂಡು 15 ವರ್ಷ: 200 ಅಧಿಕ ದಿನ ಪ್ರದರ್ಶನ!
'ತಾಜ್ ಮಹಲ್' ಸ್ಯಾಂಡಲ್‌ವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಈ ಸಿನಿಮಾ ಇಬ್ಬರ ಬದುಕಿನಲ್ಲಿ ಹೊಸ ಬದಲಾವಣೆ ಕೊಟ್ಟ ಸಿನಿಮಾ. ದುರಂತ ಪ್ರೇಮಕಥೆಯನ್ನು ಹೊಂದಿದ್ದ 'ತಾಜ್ ಮಹಲ್' ನಿಜಕ್ಕೂ ಪ್ರೇಮಿಗಳ ಸೌಧವೇ ಎಂಬಂತೆ ಭಾಸವಾಗಿತ್ತು.
ಈ ಸಿನಿಮಾ ಜುಲೈ 25, 2008ರಲ್ಲಿ ರಾಜ್ಯಾದ್ಯಂತ ತೆರೆಕಂಡಿತ್ತು. ಆ ವೇಳೆ ನಿರ್ದೇಶಕ ಆರ್ ಚಂದ್ರುಗೆ ಇದು ಮೊದಲ ಸಿನಿಮಾ ಆಗಿತ್ತು. ಇನ್ನೊಂದು ಕಡೆ ಅಜೇಯ್ ರಾವ್ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋತಿದ್ದವು. ಇನ್ನೇನು ಅಜೇಯ್ ರಾವ್ ಸಿನಿಮಾ ಯಾನ ಮುಗಿದೇ ಬಿಡ್ತು ಅನ್ನುವಾಗಲೇ 'ತಾಜ್ ಮಹಲ್' ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು.

ಈ ಕಾರಣಕ್ಕೆ 'ತಾಜ್ ಮಹಲ್' ಸಿನಿಮಾ ಮೂಲಕ ಆರ್. ಚಂದ್ರು ಹಾಗೂ ಅಜೇಯ್ ರಾವ್ ಸಿನಿಮಾ ಜರ್ನಿಗೆ ಸುಗಮವಾಯಿತು. ಈ ಸಿನಿಮಾದ ಮೂಲಕ ಆರ್.ಚಂದ್ರು ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಿತರಾದರು. ಅಜೇಯ್ ರಾವ್ ಸೆಕೆಂಡ್ ಇನ್ನಿಂಗ್ಸ್ ಆರಂಭ ಆಗಿತ್ತು.
ತಾಜ್ ಮಹಲ್ ಸಿನಿಮಾ ಸುಮಾರು 200ಕ್ಕೂ ಹೆಚ್ಚು ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನವಾಗಿತ್ತು. ತಮ್ಮ ಮೊದಲ ನಿರ್ದೇಶನದ ಸಿನಿಮಾದಲ್ಲಿಯೇ ಡಬಲ್ ಸೆಂಚುರಿ ಬಾರಿಸಿದ್ದರು. ಆ ಬಳಿಕ ಆರ್.ಚಂದ್ರು ತಾಜ್ ಮಹಲ್ ಚಂದ್ರು ಅಂತಲೇ ಜನಪ್ರಿಯರಾದರು. ಇಲ್ಲಿಂದ ಶುರುವಾಗಿದ್ದ ಇವರ ಜರ್ನಿ 'ಕಬ್ಜ' ಸಿನಿಮಾವರೆಗೂ ಬಂದು ನಿಂತಿದೆ.
ಇವರಿಬ್ಬರ ಜೊತೆ ಮತ್ತೊಂದು ಪ್ರತಿಭೆಯೂ ಶೈನ್ ಆಗಿತ್ತು. ಅವರೇ ಅಭಿಮಾನ್ ರಾಯ್. ಈ ಸಿನಿಮಾಗಾಗಿ ಅಭಿಮಾನ್ ರಾಜ್ ಅತ್ಯದ್ಬುತ ಹಾಡುಗಳನ್ನು ಕಂಪೋಸ್ ಮಾಡಿದ್ದರು. ಆ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾಗಾಗಿ ಅಭಿಮಾನ್ ರಾಯ್‌ಗೆ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ಇದೇ ಸಿನಿಮಾ 2010ರಲ್ಲಿ 'ತಾಜ್ ಮಹಲ್' ಹೆಸರಿನಲ್ಲೇ ತೆಲುಗಿನಲ್ಲಿ ಬಿಡುಗಡೆ ಆಯ್ತು.
ತಾಜ್ ಮಹಲ್‌ನಿಂದ ಶುರುವಾಗಿರೋ ಆರ್. ಚಂದ್ರು ಜರ್ನಿ 'ಕಬ್ಜ' ಸಿನಿಮಾವರೆಗೂ ಬಂದು ನಿಂತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡಿ ಗೆದ್ದಿರೋ ಚಂದ್ರು 'ಕಬ್ಜ 2' ತಯಾರಿಯಲ್ಲಿ ಇದ್ದಾರೆ. ಆದಷ್ಟು ಬೇಗ 'ಕಬ್ಜ' ಪಾರ್ಟ್ 2 ಅನೌನ್ಸ್ ಆಗುವ ಎಲ್ಲಾ ಸಾಧ್ಯತೆಗಳೂ ಇವೆ.


Click it and Unblock the Notifications











