400 ಕೋಟಿ ರೂ. ಬಜೆಟ್, ಒಮ್ಮೆಲೆ 5 ಪ್ಯಾನ್‌ ಇಂಡಿಯಾ ಸಿನಿಮಾಗಳು, ಅಬ್ಬಬ್ಬಾ ಆರ್‌.ಚಂದ್ರು ಹೊಸ ಸಾಹಸ

ಚಿತ್ರರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಜೋರಾಗಿದೆ. ಸಿನಿಮಾ ಸಕ್ಸಸ್, ಫೇಲ್ಯೂರ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ದೊಡ್ಡ ದೊಡ್ಡ ಕನಸು ಕಂಡು ಸಿನಿಮಾಗಳ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 'KGF' ಸರಣಿ ಬಳಿ ಆರ್‌. ಚಂದ್ರು 'ಕಬ್ಜ' ಮೂಲಕ ಇದೇ ಪ್ರಯತ್ನ ಮಾಡಿದ್ದರು.

'ಕಬ್ಜ' ಬಳಿಕ ಸೈಲೆಂಟ್ ಆಗಿದ್ದ ನಿರ್ದೇಶಕ ಆರ್‌. ಚಂದ್ರು ಇತ್ತೀಚೆಗೆ ಕಿಚ್ಚ ಸುದೀಪ್ ಜೊತೆಗೆ ಸಿನಿಮಾ ಘೋಷಿಸಿದ್ದರು. ಇದೀಗ ತಮ್ಮ ಆರ್‌ಸಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಒಮ್ಮೆಲೆ 5 ಸಿನಿಮಾಗಳನ್ನು ಘೋಷಣೆ ಮಾಡುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಆ ಸಿನಿಮಾಗಳ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಸಂಜೆ ಅಶೋಕ ಹೋಟೆಲ್‌ನಲ್ಲಿ ನಡೆಯುವ ಕಾರ್ಯಕ್ರದಲ್ಲಿ ಆರ್.ಚಂದ್ರು ಹೊಸ ಸಿನಿಮಾಗಳ ಬಗ್ಗೆ ಮಾತನಾಡಲಿದ್ದಾರೆ.

Kabzaa Fame R Chandru ready to announce 5 Pan india projects

ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಲಂಕಾರ್ ಪಾಂಡಿಯನ್ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. 400 ಕೋಟಿ ರೂ. ಬಜೆಟ್‌ನಲ್ಲಿ 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಚಂದ್ರು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಏಕಕಾಲಕ್ಕೆ 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡುತ್ತಿರುವುದು ಇದೇ ಮೊದಲು ಎನಿಸುತ್ತಿದೆ.

ಸೋಲು ಗೆಲವು ಪಕ್ಕಕ್ಕಿಟ್ಟರೆ ನಿರ್ದೇಶಕ, ನಿರ್ಮಾಪಕ ಆರ್‌. ಚಂದ್ರು ಕಾಣುವ ಕನಸುಗಳು, ಅದಕ್ಕಾಗಿ ನಡೆಸುವ ಪ್ರಯತ್ನವನ್ನು ಮೆಚ್ಚಲೇಬೇಕು. ಇದೀಗ ಮತ್ತೆ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್, ಲೋಟಸ್ ಡೆವಲಪರ್ಸ್ ಸಂಸ್ಥೆಗಳು ಈ ಪ್ರಾಜೆಕ್ಟ್‌ಗಳಿಗಾಗಿ ಆರ್‌. ಚಂದ್ರು ಜೊತೆ ಕೈ ಜೋಡಿಸುತ್ತಿವೆ. ಸಿಂಗಾಪುರದ ಇನ್ವೆನಿಯೊ ಒರಿಜಿನ್ ಕಂಪನಿಯ ಅಲಂಕಾರ್ ಪಾಂಡಿಯನ್, ಉದ್ಯಮಿ ಸೀಕಲ್ ರಾಮಚಂದ್ರಗೌಡ ಜೊತೆ ಸೇರಿ ಆರ್.ಸಿ. ಸ್ಟುಡಿಯೋಸ್ ಈ ಐದು ಚಿತ್ರಗಳನ್ನು ನಿರ್ಮಿಸಲಿದೆ.

Kabzaa Fame R Chandru ready to announce 5 Pan india projects

16 ವರ್ಷಗಳ ಹಿಂದೆ 'ತಾಜ್‌ಮಹಲ್' ಸಿನಿಮಾ ನಿರ್ದೇಶಿಸಿ ಆರ್‌. ಚಂದ್ರು ಚಿತ್ರರಂಗಕ್ಕೆ ಪರಿಚಿತರಾದರು. 'ಪ್ರೇಮ್‌ ಕಹಾನಿ', 'ಮೈಲಾರಿ, 'ಚಾರ್ ಮಿನಾರ್', 'ಬ್ರಹ್ಮ', 'ಐ ಲವ್ ಯು', 'ಕಬ್ಜ' ಹೀಗೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 'ಕಬ್ಜ' ಚಿತ್ರದ ಮೂಲಕ ನಿರ್ಮಾಪಕರು ಆಗಿದ್ದರು. ಪ್ಯಾನ್ ಇಂಡಿಯಾ ಪ್ರಪಂಚಕ್ಕೂ ಎಂಟ್ರಿ ಕೊಟ್ಟಿದ್ದರು. ಇದೀಗ ಬಾಲಿವುಡ್ ಸಂಸ್ಥೆಗಳ ಜೊತೆ ಸೇರಿ ಮತ್ತೆ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಪ್ಯಾನ್ ಇಂಡಿಯಾ ಮೋಹಕ್ಕೆ ಬಿದ್ದು ಒಳ್ಳೆ ಸಿನಿಮಾಗಳು ನಿರ್ಮಾಣವಾಗುತ್ತಿಲ್ಲ, ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ ಎನ್ನುವ ಆರೋಪವೂ ಇದೆ. ಇದು ಚಿತ್ರರಂಗಕ್ಕೆ ಮಾರಕ ಎನ್ನುವವರು ಇದ್ದಾರೆ. ಇಂತಹ ಸಮಯದಲ್ಲೇ ಆರ್‌. ಚಂದ್ರು 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಸಿನಿಮಾಗಳಲ್ಲಿ ಕನ್ನಡ ನಟರು ನಟಿಸುತ್ತಾರಾ? ಎನ್ನುವ ಪ್ರಶ್ನೆ ಕೂಡ ಎದ್ದಿದೆ.

ಸದ್ಯ ಆರ್. ಚಂದ್ರು ಘೋಷಣೆ ಮಾಡುತ್ತಿರುವ 5 ಸಿನಿಮಾಗಳಲ್ಲಿ ಸುದೀಪ್ ನಟನೆಯ ಸಿನಿಮಾ ಇರುತ್ತಾ? ಅಥವಾ ಅದು ಬೇರೆಯದ್ದೇ ಸಿನಿಮಾನಾ? ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು 'ಕಬ್ಜ' ಸೀಕ್ವೆಲ್ ಸಹ ಘೋಷಣೆ ಆಗಿದೆ. ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ. 'ಕಬ್ಜ'-2 ಕೂಡ ಆ 5 ಸಿನಿಮಾಗಳಲ್ಲಿ ಒಂದಾಗಿರುತ್ತಾ? ಎನ್ನುವ ಕುತೂಹಲವಿದೆ.

More from Filmibeat

English summary
Director R Chandru planning for 5 Pan india films;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X