Kabzaa First Review: ಉಪೇಂದ್ರ, ಕಿಚ್ಚ, ಶಿವಣ್ಣ ಅದ್ಭುತ ಅಂತೆ: 5 ಕ್ಕೆ ಇಷ್ಟು ಸ್ಟಾರ್ ಫಿಕ್ಸ್ ಎಂದ ಕ್ರಿಟಿಕ್

By ಫಿಲ್ಮಿಬೀಟ್ ಡೆಸ್ಕ್

ಆಲ್‌ ಇಂಡಿಯಾ ಅಷ್ಟೇ ಅಲ್ಲ ವಿಶ್ವದಾದ್ಯಂತ ಈಗ 'ಕಬ್ಜ' ಸಿನಿಮಾದ್ದೇ ಹವಾ. ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಹೇಗಿರುತ್ತೋ? ಯಾವ್ಯಾವ ಸಿನಿಮಾವನ್ನು ಹಿಂದಿಕ್ಕೆ ಹಾಕುತ್ತೋ ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಚಾರ ಹಾಕುತ್ತಿದ್ದರೆ.

ಇನ್ನೊಂದು ಕಡೆ 'ಕಬ್ಜ' ತಂಡ ಕಳೆದ 15 ದಿನಗಳಿಂದ ಒಂದು ದಿನವೂ ಗ್ಯಾಪ್‌ ಕೊಡದಂತೆ ರಾಜ್ಯದಿಂದ ರಾಜ್ಯಕ್ಕೆ ಓಡಾಡುತ್ತಿದ್ದಾರೆ. ಮುಂಬೈ, ಹೈದರಾಬಾದ್, ಚೆನ್ನೈ ಅಂತ ಬ್ಯುಸಿಯಾಗಿದ್ದಾರೆ. ಈ ಮಧ್ಯೆ 'ಕಬ್ಜ' ಸಿನಿಮಾ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿರುವವರಿಗೆ ಮೊದಲ ವಿಮರ್ಶೆ ಬಂದೇ ಬಿಟ್ಟಿದೆ. ಹಾಗಿದ್ದರೆ, ಆ ರಿವ್ಯೂ ಮಾಡಿದವರು ಯಾರು? ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

Kabzaa First Review By Umair Sandhu: Upendra,Sudeep,Shivarajkumar Gave Terrific Performances

'ಕಬ್ಜ' ಮೊದಲ ವಿಮರ್ಶೆ ಹೇಗಿದೆ?

ಕಳೆದ ವರ್ಷ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದ್ದರು. ಒಂದೊಂದೇ ದಾಖಲೆಗಳನ್ನು ತಲೆಕೆಳಗೆ ಮಾಡಿದ್ದವು. 'ಕೆಜಿಎಫ್ 2', 'ಕಾಂತಾರ', '777 ಚಾರ್ಲಿ', 'ವಿಕ್ರಾಂತ್ ರೋಣ'ದಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದ್ದು ಗೊತ್ತೇ ಇದೆ. ಈ ಬೆನ್ನಲ್ಲೇ 'ಕಬ್ಜ' ಮೇಲೆ ಸಹಜವಾಗಿಯೇ ನಿರೀಕ್ಷೆ ಹಾಗೂ ಕುತೂಹಲ ಎರಡೂ ಇದೆ.

ಓವರ್‌ಸೀಸ್‌ನಲ್ಲಿ ಬಿಡುಗಡೆಯಾಗುವ ಸಿನಿಮಾಗಳನ್ನು ಎಲ್ಲರಿಗಿಂತಲೂ ಮುನ್ನವೇ ನೋಡಿ ಅಭಿಪ್ರಾಯ ತಿಳಿಸುವ ವಿಮರ್ಶಕ ಉಮೈರ್ ಸಂಧು. ಈಗ 'ಕಬ್ಜ' ಸಿನಿಮಾ ನೋಡಿದ್ದಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ಸಿನಿಮಾ ಹೇಗೆ? ಉಪ್ಪಿ, ಕಿಚ್ಚ, ಶಿವಣ್ಣನ ನಟನೆ ಹೇಗಿದೆ? ಅನ್ನೋದನ್ನು ತಿಳಿಸಿದ್ದಾರೆ. ಜೊತೆಗೆ ಸ್ಟಾರ್ ಅನ್ನೂ ಕೊಟ್ಟಿದ್ದಾರೆ.

'ಕಬ್ಜ' ಸಿನಿಮಾ ಹೇಗಿದೆ?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಉಮೈರ್ ಸಂಧು ಟ್ವೀಟ್ ಮಾಡಿ ಮೊದಲ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. 'ಕಬ್ಜ' ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸ್ಯಾಂಡಲ್‌ವುಡ್ ಗತಿಯನ್ನೇ ಬದಲಿಸುತ್ತೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಅದ್ಭುತ ನಟನೆ ನೀಡಿದ್ದಾರೆಂದು ಹೇಳಿದ್ದಾರೆ.

Kabzaa First Review By Umair Sandhu: Upendra,Sudeep,Shivarajkumar Gave Terrific Performances

" ಸೆನ್ಸಾರ್ ಬೋರ್ಡ್‌ನಿಂದ ಕಬ್ಜ ಮೊದಲ ವಿಮರ್ಶೆ: ಅನುಮಾನವೇ ಇಲ್ಲ, ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಸ್ಯಾಂಡಲ್‌ವುಡ್‌ನ ಗತಿಯನ್ನೇ ಬದಲಿಸುತ್ತೆ. ಪ್ರತಿಯೊಬ್ಬರೂ ಈ ಸಿನಿಮಾಗಾಗಿ ದುಡಿದಿದ್ದು, ಶ್ರಮ ಹಾಕಿದ್ದಾರೆ. ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಅದ್ಭುತ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಸೂಪರ್‌ ಹಿಟ್" ಎಂದು ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ 'ಕಬ್ಜ'ದ ಆತ್ಮ

ಉಮೈರ್ ಸಂಧು ತಮ್ಮ ಟ್ವಿಟರ್ ವಿಮರ್ಶೆಯಲ್ಲಿ "ಕಿಚ್ಚ ಸುದೀಪ್ ಕಬ್ಜ ಸಿನಿಮಾದ ಆತ್ಮ. ಕಿಚ್ಚ ಸುದೀಪ್ ಅದ್ಭುತ ಪರ್ಫಾಮೆನ್ಸ್ ಕೊಟ್ಟಿದ್ದಾರೆ." ಎಂದು ಹೇಳಿದ್ದಾರೆ. ಅಲ್ಲದೆ 5 ಕ್ಕೆ 3.5 ಅಂಕವನ್ನೂ ನೀಡಿದ್ದಾರೆ. ಈ ಟ್ವೀಟ್ ಬಗ್ಗೆ ಈ ಚರ್ಚೆ ಆರಂಭ ಆಗಿದೆ. ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನವಿರುವಾಗಲೇ ಉಮೈರ್ ಸಂಧು ಟ್ವೀಟ್ ಸಂಚಲವನ್ನು ಸೃಷ್ಟಿಸಿದೆ.

ಉಮೈರ್ ಸಂಧು ತಾನು ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯ ಎಂದು ಹೇಳಿಕೊಂಡಿದ್ದಾರೆ. ಪ್ರತಿಬಾರಿಯೂ ವಿದೇಶದಲ್ಲಿ ಬಿಡುಗಡೆಯಾಗುವ ಸಿನಿಮಾಗಳನ್ನು ಎಲ್ಲರಿಗಿಂತ ಮುನ್ನವೇ ವಿಮರ್ಶೆ ಮಾಡುತ್ತಾರೆ. ಆದರೆ, ಕೆಲವರು ಉಮೈರ್ ಸಂಧು ಸುಳ್ಳು ವಿಮರ್ಶೆ ಮಾಡುತ್ತಾರೆ. ಹಾಗೇ ಸುಳ್ಳು ಸುದ್ದಿಯನ್ನು ಹಬ್ಬುತ್ತಾರೆ ಎಂದು ಆರೋಪ ಮಾಡಿದ್ದೂ ಇದೆ. ಹೀಗಾಗಿ ಈ ವಿಮರ್ಶೆ ಅಧಿಕೃತವೋ ಅಲ್ಲವೋ ಅನ್ನೋ ಮಾರ್ಚ್ 17ಕ್ಕೆ ಗೊತ್ತಾಗಬೇಕು.

More from Filmibeat

English summary
Kabzaa First Review By Umair Sandhu: Upendra,Sudeep,Shivarajkumar Gave Terrific Performances, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X