ಬಿಡುಗಡೆ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಸಿದ ಟಾಪ್ 5 ಕನ್ನಡ ಚಿತ್ರಗಳು; ನಂಬರ್ 1 ಯಾವುದು?

By ಫಿಲ್ಮಿಬೀಟ್ ಡೆಸ್ಕ್
Kabzaa grossed 54 crores day 1; Here is New list of top 5 Highest grossing Kannada films worldwide

ಕಳೆದ ವರ್ಷ ಬಿಡುಗಡೆಗೊಂಡ ಹಲವು ಕನ್ನಡ ಸಿನಿಮಾಗಳಿಂದ ಕನ್ನಡ ಚಲನಚಿತ್ರಗಳ ಗಳಿಕೆಯ ಮಟ್ಟವೇ ಬದಲಾಗಿಬಿಟ್ಟಿದೆ. ಈ ಹಿಂದೆ ಹತ್ತು ಕೋಟಿ ದಾಟಿದರೆ ಹೆಚ್ಚು ಎನ್ನಲಾಗುತ್ತಿದ್ದ ಕನ್ನಡ ಚಿತ್ರಗಳು ಕಳೆದ ವರ್ಷ ರಾಜ್ಯದಲ್ಲಿಯೇ ಇಪ್ಪತ್ತು, ಮೂವತ್ತು ಕೋಟಿ ರೂಪಾಯಿಗಳ ಕಲೆಕ್ಷನ್ ಅನ್ನು ಸುಲಭವಾಗಿ ಮಾಡಿದ್ದವು ಹಾಗೂ ವಿಶ್ವದಾದ್ಯಂತ ಕನ್ನಡ ಸಿನಿಮಾ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ಅದರಲ್ಲಿಯೂ ಕಳೆದ ವರ್ಷ ತೆರೆಗೆ ಬಂದ ಜೇಮ್ಸ್, ಕೆಜಿಎಫ್ ಚಾಪ್ಟರ್ 2 ಹಾಗೂ ವಿಕ್ರಾಂತ್ ರೋಣ ಸಿನಿಮಾಗಳು ಬಾಕ್ಸ್ ಆಫೀಸ್ ಧೂಳಿಪಟ ಮಾಡಿ ಬಿಡುಗಡೆ ದಿನ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದವು. ಹೀಗೆ ದೊಡ್ಡ ದೊಡ್ಡ ಗಳಿಕೆ ಮಾಡುವ ಮೂಲಕ ಕಳೆದ ವರ್ಷ ಇತರೆ ಚಿತ್ರರಂಗಗಳಿಗೆ ಪೈಪೋಟಿ ನೀಡುವ ಹಂತಕ್ಕೆ ತಲುಪಿದ್ದ ಕನ್ನಡ ಚಿತ್ರರಂಗದಲ್ಲಿ ಈ ವರ್ಷವೂ ಸಹ ಕಬ್ಜ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆ ದಿನದ ಕಲೆಕ್ಷನ್ ದಾಖಲೆ ಸೃಷ್ಟಿಯಾಗಿದೆ.

ಹೌದು, ಕಳೆದ ಶುಕ್ರವಾರ ( ಮಾರ್ಚ್ 17 ) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಕಬ್ಜ ಚಿತ್ರ 4000ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಂಡು ಬೃಹತ್ ಓಪನಿಂಗ್ ಪಡೆದುಕೊಂಡಿದೆ. ಈ ಮೂಲಕ ಕಬ್ಜ ಮೊದಲ ದಿನ ಕರ್ನಾಟಕದಲ್ಲಿಯೇ 26 ಕೋಟಿ ಗಳಿಕೆ ಮಾಡುವ ಮೂಲಕ ಬಿಡುಗಡೆ ದಿನ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಎರಡನೇ ಕನ್ನಡದ ಚಿತ್ರ ಎಂಬ ದಾಖಲೆಯನ್ನು ಬರೆಯಿತು.

ಹೌದು, ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಬಳಿಕ ಎರಡನೇ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಕಬ್ಜ ರಾಜ್ಯದಲ್ಲಿ ರಿಲೀಸ್ ದಿನ ಅತಿಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ವಿಕ್ರಾಂತ್ ರೋಣ, ಜೇಮ್ಸ್ ಚಿತ್ರಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಹೀಗೆ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿರುವ ಕಬ್ಜ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ರಿಲೀಸ್ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ರಾಜ್ಯದಲ್ಲಿ ಬಿಡುಗಡೆ ದಿನ 26 ಕೋಟಿ ಗಳಿಕೆ ಮಾಡಿರುವ ಕಬ್ಜ ವಿಶ್ವದಾದ್ಯಂತ ಎಲ್ಲಾ ಭಾಷೆಗಳ ಕಲೆಕ್ಷನ್ ಸೇರಿದಂತೆ ಒಟ್ಟಾರೆ 54 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದೆ. ಹೀಗೆ ಕಬ್ಜ ರಿಲೀಸ್ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ಬಳಿಕ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ತುಸು ಬದಲಾವಣೆಯಾಗಿದ್ದು, ಯಾವ ಕನ್ನಡ ಚಿತ್ರಗಳು ಹೆಚ್ಚು ಕಲೆಕ್ಷನ್ ಮಾಡಿ ಬಿಡುಗಡೆ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ರಿಲೀಸ್ ದಿನ ಅತಿಹೆಚ್ಚು ಗಳಿಸಿದ ಚಿತ್ರಗಳ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ ಎಂಬ ಮಾಹಿತಿ ಕೆಳಕಂಡಂತಿದೆ..

1. ಕೆಜಿಎಫ್ ಚಾಪ್ಟರ್ 2 - 164 ಕೋಟಿ
2. ಕಬ್ಜ - 54 ಕೋಟಿ
3. ವಿಕ್ರಾಂತ್ ರೋಣ - 35 ಕೋಟಿ
4. ಜೇಮ್ಸ್ - 34 ಕೋಟಿ
5. ಕೆಜಿಎಫ್ ಚಾಪ್ಟರ್ 1 - 25 ಕೋಟಿ

ಇದು ಬಿಡುಗಡೆ ದಿನ ಕನ್ನಡ ಚಿತ್ರಗಳು ವಿಶ್ವದಾದ್ಯಂತ ಮಾಡಿದ ಗಳಿಕೆಯ ಪಟ್ಟಿಯಾಗಿದ್ದು, ಕೆಜಿಎಫ್ ಚಾಪ್ಟರ್ 2 ಹಾಗೂ ಕಬ್ಜ ಈ ಎರಡು ಚಿತ್ರಗಳು ಮಾತ್ರ ಮೊದಲ ದಿನ ವರ್ಲ್ಡ್ ವೈಡ್ ಐವತ್ತು ಕೋಟಿ ಕ್ಲಬ್ ಸೇರಿದ ಕನ್ನಡ ಚಿತ್ರಗಳು ಎಂಬ ಸಾಧನೆ ಮಾಡಿವೆ.

More from Filmibeat

English summary
Kabzaa grossed 54 crores day 1; Here is New list of top 5 Highest grossing Kannada films worldwide
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X